ಸೇನಾ ತರಬೇತಿ ಶಿಬಿರದಲ್ಲಿ ಬಾಲಕಿ ಮೇಲೆ ಅತ್ಯಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲ್ಕತಾ, ಜೂ.20- ಭಾರತೀಯ ಸೇನೆಯ ತರಬೇತಿ ಕ್ಯಾಂಪ್‍ನಲ್ಲಿಯೇ ಸಿಬ್ಬಂದಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಕೊಲ್ಕತಾದಲ್ಲಿ ನಡೆದಿದೆ.

ಕೋಲ್ಕತಾದಲ್ಲಿರುವ ಭಾರತೀಯ ಸೇನೆಯ ಪೂರ್ವ ಕಮಾಂಡ್ ಕೇಂದ್ರ ಕಚೇರಿ ಇರುವ ಫೋರ್ಟ್ ವಿಲಿಯಂ ಒಳಗೆ 11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದ್ದು, ಈ ಕುರಿತು ಸೇನೆಯ ಗ್ರೂಪ್ ಡಿ ಸಿಬ್ಬಂದಿಯಾಗಿದ್ದ ಆರೋಪಿ ಸಾಗರ್ ಮಲ್ಲಿಕ್ ವಿರುದ್ಧ ಫೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಫೋರ್ಟ್ ವಿಲಿಯಂನಲ್ಲಿ ಓಲ್ಡ ಬಾಪು ಲೇನ್‍ನಲ್ಲಿದ್ದ ಮನೆಯಲ್ಲಿ ಶನಿವಾರ ಸಂಜೆ ಮತ್ತೋರ್ವ ಸೇನಾ ಸಿಬ್ಬಂದಿಯ ಪುತ್ರಿಯು ಮನೆಯಲ್ಲಿ ಒಬ್ಬಳೇ ಇರುವ ವೇಳೆ ಆರೋಪಿಯು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ. ಆರೋಪಿ ತಪೆಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಆರೋಪಿ ಸಾಗರ್ ಮಲ್ಲಿಕ್ ಫೋರ್ಟ್ ವಿಲಿಯಂಗೆ ಕೆಲ ದಿನಗಳ ಹಿಂದೆ ತನ್ನ ಸಹೋದರಿಯ ನೋಡಲು ಆಗಮಿಸಿದ್ದ. ಈ ವೇಳೆ ಆತ ಬಾಲಕಿಯನ್ನು ಗಮನಿಸಿದ್ದ. ಮನೆಯಲ್ಲಿ ಫೋಷಕರು ಇಲ್ಲದ ಸಮಯ ನೋಡಿಕೊಂಡು ಆತ ಕೃತ್ಯವೆಸಗಿದ್ದಾನೆ. ಶಿಸ್ತಿಗೆ ಹೆಸರಾದ ಭಾರತೀಯ ಸೇನೆಯಲ್ಲಿ ಇಂತಹ ಘಟನೆಗಳಿಂದ ಕಳಂಕ ಬಂದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ