ಯುವತಿ ಮೇಲೆ 9 ತಿಂಗಳಿನಿಂದ ನಿರಂತರ ಅತ್ಯಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬಲಿಯಾ,ಅ.23- ಕಾಮುಕನೊಬ್ಬ ಯುವತಿಯನ್ನು ಅಪಹರಿಸಿ ಕಳೆದ ಒಂಬತ್ತು ತಿಂಗಳಿನಿಂದ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಬಲಿಯಾ ಜಿಲ್ಲೆಯ ನರಹಿ ಗ್ರಾಮದ 17 ವರ್ಷದ ಯುವತಿಯನ್ನು ಅಪಹರಿಸಿ ವಾರಣಾಸಿಗೆ ಕರೆತಂದ ಕಾಮುಕ 9 ತಿಂಗಳಿನಿಂದ ನಿರಂತರ ಆತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಜ.16 ರಂದು ಯುವತಿಯನ್ನು ಅಪಹರಿಸಿ ನಿರಂತರವಾಗಿ ಅತ್ಯಾಚಾರ ನಡೆಸಿರುವ ಆರೋಪಿಯನ್ನು ಬಂಸಿ ಸಂತ್ರಸ್ಥೆಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ನರಾಹಿ ಪೊಲೀಸ್ ಠಾಣೆಯ ಅಕಾರಿ ಪ್ರವೀಣ್ ಸಿಂಗ್ ತಿಳಿಸಿದ್ದಾರೆ.

ನನ್ನನ್ನು ಅಪಹರಿಸಿ ವಾರಾಣಾಸಿಯಲ್ಲಿ ಬಂಧಿಸಿಟ್ಟಿದ್ದ ಕಾಮುಕ ನಿರಂತರವಾಗಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಸಂತ್ರಸ್ಥ ಯುವತಿ ನೀಡಿರುವ ದೂರಿನ ಆಧಾರದ ಮೇಲೆ ಕಾಮುಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಲಾಗಿದೆ.

Facebook Comments

Sri Raghav

Admin