3 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಲಖಿಮ್‍ಪುರ್ ಖೇರಿ, ಸೆ.4- ಉತ್ತರಪ್ರದೇಶದ ಲಖಿಮ್‍ಪುರ್ ಖೇರಿ ಗ್ರಾಮದಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಂಡಿರುವ ನೀಚ ಕೃತ್ಯ ನಡೆದಿದೆ. ಈ ಪ್ರದೇಶದಲ್ಲಿ ಕಳೆದ 20 ದಿನಗಳಲ್ಲಿ ನಡೆದಿರುವ ಮೂರನೇ ಕೃತ್ಯ ಇದಾಗಿದೆ.

ಲಖಿಮ್‍ಪುರ್ ಖೇರಿಯ ಸಿಂಘಿ ಪ್ರದೇಶದ ಕಬ್ಬಿನಗದ್ದೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲ್ಲಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಲಕಿಯ ಮನೆ ಸಮೀಪವೇ ಇರುವ ಕಬ್ಬಿನಗದ್ದೆಯಲ್ಲಿ ಈ ಹೀನ ಕೃತ್ಯ ನಡೆದಿದೆ. ಮಗುವಿನ ಮೇಲೆ ಅತ್ಯಾಚಾರ ನಡೆದಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ಅತ್ಯಾಚಾರಿ-ಹಂತಕರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತ್ಯೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಇದೇ ಲಖಿಮ್‍ಪುರ್ ಖೇರಿ ಜಿಲ್ಲೆಯಲ್ಲಿ ಕಳೆದ ಮೂರು ವಾರಗಳಲ್ಲಿ ನಡೆದ ಮೂರನೆ ದುಷ್ಕøತ್ಯ ಇದಾಗಿದೆ. ಈ ಹಿಂದೆ 13 ಮತ್ತು 16 ವರ್ಷ ಅಪ್ರಾಪ್ತ ಬಾಲಕಿಯರ ಮೇಲೆ ಪ್ರತ್ಯೇಕ ಪ್ರಕರಣಗಳಲ್ಲಿ ಕಬ್ಬಿನಗದ್ದೆಗಳಲ್ಲಿ ಅತ್ಯಾಚಾರ ಎಸಗಿ ಕೊಲ್ಲಲಾಗಿತ್ತು.

Facebook Comments