ರೇಪ್ ಮಾಡಿ, ನಂತರ ಕೇಸ್ ಮುಚ್ಚಿಹಾಕಲು ಹಣದ ಆಮಿಷವೊಡ್ಡಿದ್ದ ಆರೋಪಿ ಅಂದರ್..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಜೂ.15- ಅಮಾಯಕ ಯುವತಿ ಮೇಲೆ ಅತ್ಯಾಚಾರವೆಸಗಿ ಅದನ್ನು ಮುಚ್ಚಿ ಹಾಕಲು ಯುವತಿ ತಾಯಿಗೆ ಲಕ್ಷ ರೂ. ಆಮಿಷವೊಡ್ಡಿದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಸುದ್ದ ಹಳ್ಳಿ ಗ್ರಾಮದ ಹರೀಶ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಗ್ರಾಮದ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದು , ಈ ವಿಷಯವನ್ನು ಪೋಷಕರಿಗೆ ಹೆದರಿ ಯುವತಿ ಹೇಳಿರಲಿಲ್ಲ.

ಮನೆಯಲ್ಲಿ ಮಗಳ ನಡವಳಿಕೆಯನ್ನು ಗಮನಿಸಿದ ತಾಯಿ ಪ್ರಶ್ನೆ ಮಾಡಿದ್ದಾರೆ.ಮೊದಲಿಗೆ ಏನೂ ಇಲ್ಲವೆಂದು ಹೇಳಿದರಾದರೂ ನಂತರ ತಾಯಿಯ ಒತ್ತಾಯದ ಮೇರೆಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಇದರಿಂದ ಆತಂಕಕ್ಕೊಳಗಾದ ತಾಯಿ ಹರೀಶ್‍ನನ್ನು ಕರೆಸಿ ಮಾತನಾಡಿದಾಗ , ಒಂದು ಲಕ್ಷ ಕೊಡುತ್ತೇನೆ. ಪೊಲೀಸರಿಗೆ ದೂರು ಕೊಡಬೇಡಿ. ಆಕೆಯನ್ನು ಆಸ್ಪತ್ರೆಗೆ ನಾನೇ ಕರೆದೊಯ್ಯುತ್ತೇನೆ ಎಂದು ಹೇಳಿ ಬಾಯಿ ಮುಚ್ಚಿಸಲು ಯತ್ನಿಸಿದ್ದಾನೆ.

ಈತನ ವರ್ತನೆಯಿಂದ ವಿಚಲಿತರಾದ ಯುವತಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

Facebook Comments

Sri Raghav

Admin