ತೊಟ್ಟಿಗೆ ಬಿದ್ದು ಅಪರೂಪದ ಪುನಗನ ಬೆಕ್ಕು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

catಕನಕಪುರ,ಡಿ.24- ನೀರು ಕುಡಿಯಲು ಬಂದ ಅಪರೂಪದ ಪುನಗನ ಬೆಕ್ಕೊಂದು ಆಕಸ್ಮಿಕವಾಗಿ ತೊಟ್ಟಿಗೆ ಬಿದ್ದು ಮೃತಪಟ್ಟಿದೆ.  ಕನಕಪುರ ತಾಲ್ಲೂಕು ಸಾತನೂರು ಗ್ರಾಮ ಸಮೀಪದ ಪ್ರಕಾಶ್ ಎಂಬುವರ ತೋಟದ ಬಳಿ ಈ ಬೆಕ್ಕು ಕಾಣಿಸಿಕೊಂಡಿದ್ದು, ಇಂದು ಬೆಳಗ್ಗೆ 8 ಗಂಟೆಯಲ್ಲಿ ನೀರು ಕೊಡಲು ಬಂದ ಬೆಕ್ಕು ತೋಟದಲ್ಲಿದ್ದ ತೊಟ್ಟಿಗೆ ಬಿದ್ದು ಸಾವನ್ನಪ್ಪಿದೆ.

ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಈ ಬೆಕ್ಕು ಕಾಣಿಸಿಕೊಳ್ಳುತ್ತವೆ. ಈ ಅಪರೂಪದ ಪ್ರಾಣಿ ಮೃತಪಟ್ಟಿರುವುದಕ್ಕೆ ವಲಯ ಅರಣ್ಯಾಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ರಾಜು, ವಲಯ ಅರಣಾಧಿಕಾರಿ ದಿನೇಶ್, ಅರಣ್ಯ ರಕ್ಷಕ ತಿಪ್ಪೇಸ್ವಾಮಿ ಭೇಟಿ ನೀಡಿ, ತೊಟ್ಟಿಯಲ್ಲಿದ್ದ ಬೆಕ್ಕಿನ ದೇಹವನ್ನು ತೆಗೆದು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದರು.

Facebook Comments