ಬಿಗ್ ನ್ಯೂಸ್ : ಕಿಲ್ಲರ್ ಕೊರೋನಾ ವೈರಸ್ ನಿಗ್ರಹಕ್ಕೆ ‘ರಸಂ ರಾಮಬಾಣ’..!

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಾದ್ಯಂತ ಭಾರೀ ಆತಂಕ ಸೃಷ್ಟಿಸಿ ಸಾವು-ನೋವಿಗೆ ಕಾರಣವಾಗುತ್ತಿರುವ ಮಾರಕ ಕೊರೋನಾ ವೈರಾಣು ಸೋಂಕು ಹಾವಳಿ ನಿಗ್ರಹಕ್ಕೆ ಹರಸಾಹಸಗಳು ಮುಂದುವರಿದಿರುವಾಗಲೇ, ಈ ಡೆಡ್ಲಿ ವೈರಸ್‍ಗೆ ಭಾರತೀಯ ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದ ಮೂಲಕ ನಿಯಂತ್ರಣ ಸಾಧ್ಯ ಎಂಬುದು ದೃಢಪಟ್ಟಿದೆ.

ಈ ಸೋಂಕನ್ನು ಹತೋಟಿಯಲ್ಲಿಡಲು ಹೊಸ ಹೊಸ ಸಂಶೋಧನೆ ಮತ್ತು ಪ್ರಯೋಗಗಳು ಮುಂದುವರಿದಿವೆ. ಆದರೆ ಆಯುರ್ವೇದ ಮತ್ತು ಗಿಡಮೂಲಿಕೆಗಳಿಂದ ಈ ವೈರಾಣು ಸೋಂಕನ್ನು ಪರಿಣಾಮಕಾರಿಯಾಗಿ ನಿಗ್ರಹಿಸಬಹುದಾಗಿದೆ ಎಂಬುದು ಈ ಸನ್ನಿವೇಶದಲ್ಲಿ ಆಶಾದಾಯಕ ಎನಿಸಿದೆ.

ಕೊರೋನಾ ವೈರಸ್ (ಎನ್‍ಸಿಒವಿ) ಸೋಂಕುಗಳನ್ನು ತಡೆಗಟ್ಟಲು ಆಯುರ್ವೇದ, ಗಿಡಮೂಲಿಕೆ ಮತ್ತು ಮಸಾಲೆ ಪದಾರ್ಥಗಳು ಸಾಕಷ್ಟು ಪರಿಣಾಮಕಾರಿ ಎಂದು ಶಿಫಾರಸು ಮಾಡಲಾಗಿದೆ.
ನಮ್ಮ ದಿನನಿತ್ಯದ ಆಹಾರದ ಒಂದು ಭಾಗವಾಗಿರುವ ರಸಂ ಅಥವಾ ಮಸಾಲೆ ಪದಾರ್ಥಗಳ ಕಷಾಯ ಸೇವನೆಯಿಂದಲೂ ಮಾರಕ ಪೀಡೆ ಹತ್ತಿರ ಸುಳಿಯದಂತೆ ನಿಯಂತ್ರಿಸಬಹುದಾಗಿದೆ.

ಭಾರತೀಯ ಆಹಾರ ಪದ್ಧತಿಯ ಪ್ರಮುಖ ಪದಾರ್ಥಗಳಾದ ಬೆಳ್ಳುಳ್ಳಿ, ಈರುಳ್ಳಿ, ಜೀರಿಗೆ, ಮೆಣಸು, ಶುಂಠಿ, ಅರಿಶಿಣ, ನಿಂಬೆ, ವೀಳ್ಯದೆಲೆ, ತುಳಸಿ, ಅಮೃತಬಳ್ಳಿ ಇತ್ಯಾದಿಯನ್ನು ಈ ವೈರಸ್ ತಡೆಗೆ ಉಪಯೋಗಿಸಬಹುದು. ನಮ್ಮ ಆಹಾರದಲ್ಲಿ ಪ್ರಮುಖವಾಗಿ ಬಳಕೆಯಾಗುವ ರಸಂನನ್ನು ದಿನನಿತ್ಯ ಸೇವಿಸುವುದರಿಂದ ವೈರಾಣು ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬುದು ಸಂಶೋಧನೆಯಿಂದ ಈಗಾಗಲೇ ಸಾಬೀತಾಗಿದೆ. ಇದು ಕೊರೋನಾ ವೈರಸ್ ಹತೋಟಿಗೂ ಅತ್ಯಂತ ಪರಿಣಾಮಕಾರಿಯಾಗಿದೆ.

ರಸಂನಲ್ಲಿ ಸಾಂಬಾರ ಮತ್ತು ಮಸಾಲೆ ಪದಾರ್ಥಗಳು ಸಮೃದ್ಧವಾಗಿರುವುದರಿಂದ ಇದು ದೇಹದಲ್ಲಿ ಸ್ವಾಭಾವಿಕವಾಗಿ ಉಷ್ಣತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಶರೀರದಲ್ಲಿನ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಬೆಯಾಡುವ ಬಿಸಿ ಅನ್ನದೊಂದಿಗೆ ರಸಂ ಬೆರೆಸಿ ಸೇವಿಸುವುದರಿಂದ ದೇಹದ ಉಷ್ಣತೆ ಹೆಚ್ಚಾಗಿ ಅದು ವೈರಸ್‍ಗಳ ವಿರುದ್ಧ ಹೋರಾಡುತ್ತವೆ.

ದೇಹದ ಉಷ್ಣಾಂಶ ಸಮತೋಲನವಾಗಿರದಿದ್ದರೆ ವೈರಾಣುಗಳು ಸುಲಭವಾಗಿ ದಾಳಿ ಮಾಡುತ್ತವೆ. ಆಯುರ್ವೇದ ಮತ್ತು ಗಿಡಮೂಲಿಕೆಯಲ್ಲಿ ಮಹತ್ವ ಪಡೆದಿರುವ ಇಂಥ ಮಸಾಲೆ ಪದಾರ್ಥಗಳು ಇರುವ ರಸಂ ಸೇವನೆಯಿಂದ ಶರೀರದ ತಾಪಮಾನ ಹೆಚ್ಚಾಗಿ ರೋಗ ಪ್ರತಿರೋಧಕ ಶಕ್ತಿಯೂ ವರ್ಧನೆಯಾಗಿ ಅದು ವೈರಾಣು ಸೋಂಕನ್ನು ತೊಡದು ಹಾಕುತ್ತದೆ.

ಮಲೇಷ್ಯಾ ದೇಶದಲ್ಲಿ ಈ ಹಿಂದೆ ಭಾರೀ ಆತಂಕ ಸೃಷ್ಟಿಸಿದ್ದ ನಿಫಾ ವೈರಸ್ ತಡೆಗಟ್ಟುವಲ್ಲಿಯೂ ಆಗ ಆಯುರ್ವೇದ ಮತ್ತು ಗಿಡಮೂಲಿಕೆ ಪದಾರ್ಥಗಳು ಅದರಲ್ಲಿಯೂ ರಸಂ ಪರಿಣಾಮಕಾರಿ ಪಾತ್ರ ವಹಿಸಿತ್ತು. ಅಲ್ಲದೆ, ಕೆಲವು ವರ್ಷಗಳ ಹಿಂದೆ ಚೀನಾದಲ್ಲಿ ಸಾವು-ನೋವಿಗೆ ಕಾರಣವಾಗಿದ್ದ ಸಾರ್ಸ್ (ತೀವ್ರ ಉಸಿರಾಟ ಸೋಂಕಿನ ಗಂಭೀರ ಕಾಯಿಲೆ) ಸೋಂಕನ್ನು ಹತೋಟಿಗೆ ತರಲು ಚೀನಿಯರು ಆಯುರ್ವೇದ ಮತ್ತು ಗಿಡಮೂಲಿಕೆಗಳ ಕಷಾಯವನ್ನು ಸೇವಿಸಿದ್ದರು.

ನಿಫಾ ಮತ್ತು ಸಾರ್ಸ್ ವೈರಾಣು ಸೋಂಕುಗಳ ಪ್ರಕರಣದಲ್ಲಿ ರಸಂ ಮತ್ತು ಮಸಾಲೆ ಕಷಾಯ ಪ್ರಯೋಗಗಳು ಸಾಕಷ್ಟು ಫಲಪ್ರದವಾಗಿದ್ದವು. ಈಗ ಏಷ್ಯಾ ಖಂಡ ಸೇರಿದಂತೆ ವಿಶ್ವದಲ್ಲಿ ಆತಂಕದ ತಲ್ಲಣ ಸೃಷ್ಟಿಸಿರುವ ಕೊರೋನಾ ವೈರಸ್ ನಿಗ್ರಹಕ್ಕೂ ಇದು ಅತ್ಯಂತ ಪರಿಣಾಮಕಾರಿಯಾಗಿದೆ.

ಹೋಮಿಯೋಪತಿ, ಯುನಾನಿಯಲ್ಲೂ ಮದ್ದುಂಟು: ಆಯುರ್ವೇದದೊಂದಿಗೆ ಹೋಮಿಯೋಪತಿ ಮತ್ತು ಯುನಾನಿ ಚಿಕಿತ್ಸಾ ಪದ್ಧತಿಗಳೂ ಸಹ ಕೊರೊನಾ ವೈರಾಣು ಸೋಂಕಿಗೆ ಪರಿಣಾಮಕಾರಿ ಮದ್ದು ಎಂದು ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯ ಆರೋಗ್ಯ ಸಲಹೆ ಮತ್ತು ಶಿಫಾರಸು ಮಾಡಿದೆ.

ಹೋಮಿಯೋಪಥಿಯಲ್ಲಿ ಅರ್ಸೆನಿಕುಂ ಅಲ್ಬಮ್-30 ಔಷಧಿ ಅತ್ಯಂತ ಪರಿಣಾಮಕಾರಿಯಾಗಿದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಮೂರು ದಿನಗಳು ಸೇವಿಸಿದರೆ ವೈರಾಣು ಸೋಂಕನ್ನು ನಿರ್ಮೂಲನೆ ಮಾಡುತ್ತದೆ. ಯುನಾನಿ ವೈದ್ಯ ಪದ್ಧತಿಯಲ್ಲಿ ಬಳಸುವ ಸಾಮಾನ್ಯ ಕಷಾಯಗಳು ಮತ್ತು ಸರಳ ಮನೆ ಮದ್ದುಗಳಿಂದಲೂ ಈ ಡೆಡ್ಲಿ ವೈರಸ್‍ಅನ್ನು ನಿಗ್ರಹಿಸಬಹುದು.

Facebook Comments

Sri Raghav

Admin