ಫೋಬ್ರ್ಸ್ ಪಟ್ಟಿಯಲ್ಲಿ ಪ್ರಭಾಸ್, ಅಲ್ಲು ಅರ್ಜುನ್‍ರನ್ನು ಹಿಂದಿಕ್ಕಿದ ರಶ್ಮಿಕಾ, ಯಶ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ. 19- ವಿಶ್ವದ ಪ್ರತಿಷ್ಠಿತ ನಿಯತಕಾಲಿಕವಾಗಿರುವ ಫೋಬ್ರ್ಸ್ ಮ್ಯಾಗ್‍ಜಿನ್‍ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದ ರಾಕಿಂಗ್ ಸ್ಟಾರ್ ಯಶ್ ಅವರು ಈಗ ಮತ್ತೊಂದು ದಾಖಲೆಯನ್ನು ಬರೆಯುವ ಮೂಲಕ ತಮ್ಮ ಹವಾ ಸೃಷ್ಟಿಸಿದ್ದಾರೆ.

ಚಿತ್ರರಂಗದಲ್ಲಿ ಯಾವ ನಾಯಕ ಅಥವಾ ನಾಯಕಿ ಹೆಚ್ಚಿನ ಫಾಲೋಯರ್ಸ್‍ಗಳನ್ನು ಹೊಂದಿದ್ದಾರೆ, ಯಾವ ನಟ ಅಥವಾ ನಟಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ, ಯಾರ ಫೋಸ್ಟ್‍ಗಳಿಗೆ ಹೆಚ್ಚು ಪತ್ರಿಕ್ರಿಯೆಗಳು ಬಂದಿವೆ ಎಂದು ಫೋಬ್ರ್ಸ್ ಇತ್ತೀಚೆಗೆ ಪಟ್ಟಿ ಮಾಡಿದ್ದು ಕನಡದವರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಶ್ಮಿಕಾ ಮಂದಣ್ಣ ಅವರು ಟಾಲಿವುಡ್‍ನ ಸ್ಟೈಲಿಶ್ ಸ್ಟಾರ್ ಅಲ್ಲುಅರ್ಜುನ್ ಹಾಗೂ ರೆಬೆಲ್ ಸ್ಟಾರ್ ಪ್ರಭಾಸ್‍ರನ್ನು ಹಿಂದಿಕ್ಕುವ ಮೂಲಕ ಗಮನ ಸೆಳೆದಿದ್ದಾರೆ.

ಆಶ್ಚರ್ಯದ ಸಂಗತಿಯೆಂದರೆ ಇತ್ತೀಚೆಗೆ ಇನ್ಸಾಟಾಗ್ರಾಮ್‍ನಲ್ಲಿ ಅತಿ ಹೆಚ್ಚು ಫಾಲೋಯರ್ಸ್‍ಗಳನ್ನು ಹೊಂದಿರುವ ನಂಬರ್ 1 ನಟಿ ಎಂಬ ಕೀರ್ತಿಗೆ ಭಾಜನರಾಗಿದ್ದ ಕೊಡಗಿನ  ರಶ್ಮಿಕಾ ಮಂದಣ್ಣ ಫೋಬ್ರ್ಸ್ ಬಿಡುಗಡೆ ಮಾಡಿರುವ ಪಟ್ಟಿರುವ ದಕ್ಷಿಣ ಭಾರತದ ಹೆಚ್ಚು ಜನಪ್ರಿಯತೆ ಹೊಂದಿರುವವರ ಪೈಕಿ ನಂಬರ್ 1 ಸ್ಥಾನವನ್ನೂ ರಶ್ಮಿಕಾಮಂದಣ್ಣ ಪಡೆದಿದ್ದಾರೆ.

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ರಶ್ಮಿಕಾ ನಂತರ ತೆಲುಗು, ತಮಿಳು, ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಈಗ ಮಲಯಾಳಂನತ್ತಲೂ ಚಿತ್ತ ಹರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವುದರಿಂದ ಅವರು ಟಾಪ್ 1 ಸ್ಥಾನವನ್ನು ಅಲಂಕರಿಸಿದ್ದಾರೆ.
ಚಸ್ಮಾ ಸುಂದರಿ ರಶ್ಮಿಕಾ ಮಂದಣ್ಣ 9.88 ಅಂಕ ಪಡೆದು ಟಾಪ್ 1 ಸ್ಥಾನ ಪಡೆದಿದ್ದರೆ, ರಶ್ಮಿಕಾರ ಖಾಸ ಗೆಳೆಯನೆಂದೇ ಗುರತಿಸಿಕೊಂಡಿರುವ ಟಾಲಿವುಡ್ ನಟ ವಿಜಯ್ ದೇವರಕೊಂಡ 9.67 ಪಾಯಿಂಟ್‍ನೊಂದಿಗೆ 2 ಸ್ಥಾನ ಪದಡೆದಿದ್ದಾರೆ.

ಕೆಜಿಎಫ್ ಚಿತ್ರದ ಬಿಡುಗಡೆಯ ನಂತರ ವಿಶ್ವದಾದ್ಯಂತ ಅಭಿಮಾನಿ ಗಳನ್ನು ಹೊಂದಿರುವ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವಾಗಲೇ ಫೋಬ್ರ್ಸ್ ಪ್ರಕಟಿಸಿರುವ ಅತಿ ಹೆಚ್ಚು ಜನಪ್ರಿಯ ದಕ್ಷಿಣ ಭಾರತ ಕಲಾವಿದರ ಪೈಕಿ ರಾಕಿಂಗ್ ಸ್ಟಾರ್ ಯಶ್ 9.54 ಅಂಕಗಳೊಂದಿಗೆ 3ನೆ ಸ್ಥಾನ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ತಮ್ಮ ವಿಚ್ಛೇದನದಿಂದ ಭಾರೀ ಸುದ್ದಿಯಲ್ಲಿರುವ ಟಾಲಿವುಡ್ ನಟಿ ಸಮಂತಾ (9.49), ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (9.46), ಮಲಯಾಳಂ ನಟ ದುಲ್ಕರ್ ಸಲ್ಮಾನ್ (9.42), ಟಾಲಿವುಡ್ ನಟಿ ಪೂಜಾ ಹೆಗ್ಡೆ ( 9.41), ಟಾಲಿವುಡ್ ನಟ ಪ್ರಭಾಸ್ (9.40), ಕಾಲಿವುಡ್ ನಟ ಸೂರ್ಯ ( 9.37), ಮಿಲ್ಕೀ ಬ್ಯೂಟಿ ತಮನ್ನಾ ಭಾಟಿಯಾ(9.36) ಟಾಪ್ 10 ಸ್ಥಾನ ಪಡೆದಿದ್ದಾರೆ.

ಟಾಲಿವುಡ್‍ನ ಸೂಪರ್ ಸ್ಟಾರ್‍ಗಳಾದ ಜೂನಿಯರ್ ಎನ್‍ಟಿಆರ್, ರಾಮ್‍ಚರಣ್, ವರುಣ್‍ತೇಜ್, ಅಕ್ಕಿನೇನಿ ನಾಗಾರ್ಜುನ್, ನಾಗಚೈತನ್ಯ, ಸಾಯಿಧರಮ್‍ತೇಜ್ ಕೂಡ ಫೋಬ್ರ್ಸ್ ಪ್ರಕಟಿಸಿರುವ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Facebook Comments