ಲೀವರ್ ತೊಂದರೆಯಿಂದ ಆಸ್ಪತ್ರೆ ಸೇರಿದ್ದ ರೋಗಿ ಇಲಿ ಕಚ್ಚಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಜೂ.24-ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬನಿಗೆ ಇಲಿ ಕಚ್ಚಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ಮುಂಬೈನ ಗಾಟ್ಕೋಪರ್ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
24 ವರ್ಷದ ಮದ್ಯಪಾನ ವ್ಯಸನಿಯೊಬ್ಬ ಲೀವರ್ ಪ್ರಾಬ್ಲಮ್‍ನಿಂದ ಸಿವಿಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಆತನ ಕಣ್ಣಿನ ಸಮೀಪ ಇಲಿ ಕಚ್ಚಿದ್ದರಿಂದ ಆತ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿತ್ತು. ಎಲ್ಲೆಂದರಲ್ಲಿ ಇಲಿಗಳು ಓಡಾಡುವುದು ಮಾಮೂಲು. ಹೀಗಾಗಿ ಇಲಿ ಕಚ್ಚಿದ್ದ ಪರಿಣಾಮ ಈ ಸಾವು ಸಂಭವಿಸಿದೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ರೋಗಿಗೆ ಇಲಿ ಕಚ್ಚಿರುವುದು ಸತ್ಯ.

ಇದರಿಂದ ರೋಗಿಯ ಕಣ್ಣಿಗಾಗಲಿ, ದೇಹಕ್ಕಾಗಲಿ ಯಾವುದೆ ತೊಂದರೆ ಆಗಿಲ್ಲ. ಆದರೆ, ಲೀವರ್ ತೊಂದರೆಯಿಂದ ಚಿಂತಾಜನಕ ಪರಿಸ್ಥಿತಿಯಲ್ಲಿದ್ದ ರೋಗಿಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.ಘಟನೆ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ತಿಳಿಸಿದ್ದಾರೆ.

Facebook Comments