ಸಣ್ಣ ಉಳಿತಾಯ ಬಡ್ಡಿ ಕಡಿತ : ಕೇಂದ್ರ ಸರ್ಕಾರ ಯುಟರ್ನ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.1- ಸಣ್ಣ ಉಳಿತಾಯದ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಿದ್ದ ಆದೇಶವನ್ನು ಕೆಲವೇ ಗಂಟೆಗಳಲ್ಲಿ ವಾಪಸ್ ಪಡೆಯಲಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟ್ವಿಟ್ಟರ್ ಮೂಲಕ ಅಧಿಸೂಚನೆಯನ್ನು ವಾಪಸ್ ಪಡೆಯಲಾಗಿದೆ.

ಮೊದಲಿನಂತೆ ಸಣ್ಣ ಉಳಿತಾಯದ ಬಡ್ಡಿ ಪ್ರಮಾಣ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಕಳೆದ ರಾತ್ರಿ ಠೇವಣಿಗೆ ಇದ್ದ ಶೇ.4ರ ಬಡ್ಡಿ ದರವನ್ನು 3.5ಕ್ಕೆ, 3 ಹಾಗೂ 5 ವರ್ಷದ ಠೇವಣಿಯ ಬಡ್ಡಿಯನ್ನು ಪರಿಷ್ಕರಿಸಲಾಗಿತ್ತು.

ಆದರೆ, ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಗೂ ಪ್ರಸ್ತುತ ನಡೆಯುತ್ತಿರುವ ಪಂಚರಾಜ್ಯ ಚುನಾವಣೆ ವೇಳೆ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವುದನ್ನು ಮನಗಂಡ ಕೇಂದ್ರ ಸರ್ಕಾರ ದಿಢೀರನೆ ನಿರ್ಧಾರ ಬದಲಿಸಿದೆ. ಮುಂದಿನ ತ್ರೈಮಾಸಿಕ ಅವಧಿವರೆಗೂ ಮೊದಲಿನಂತೆ ಬಡ್ಡಿ ದರ ಮುಂದುವರಿಯಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Facebook Comments