‘ರತ್ನನ್ ಪ್ರಪಂಚ’ ಟ್ರೇಲರ್ 22ಕ್ಕೆ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,  ಅ.14 2021: ಪ್ರೈಮ್ ವಿಡಿಯೋ ತನ್ನ ಮುಂಬರುವ ಟ್ರಾವೆಲ್ ಕಾಮಿಡಿ ಡ್ರಾಮಾ ರತ್ನನ್ ಪ್ರಪಂಚ ಬಿಡುಗಡೆಯನ್ನು ಅಕ್ಟೋಬರ್ 22, 2021 ರಂದು ಸೇವೆಯಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಸಿನಿಮಾದಲ್ಲಿ ಕನ್ನಡದ ಜನಪ್ರಿಯ ನಟ ಧನಂಜಯ್ ಜೊತೆಯಲ್ಲಿ ಮುಖ್ಯ ಪಾತ್ರದಲ್ಲಿ ರೆಬಾ ಮೋನಿಕಾ ಜಾನ್, ಉಮಾಶ್ರೀ, ರವಿಶಂಕರ್, ಅನು ಪ್ರಭಾಕರ್, ಪ್ರಮೋದ್, ವೈನಿಧಿ ಜಗದೀಶ್, ಅಚ್ಯುತ್ ಕುಮಾರ್ ಮತ್ತು ಶ್ರುತಿ ಕೃಷ್ಣ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ.

ಟ್ರೇಲರ್ ರತ್ನಾಕರ ಅವರ ಭಾವನಾತ್ಮಕ ಮತ್ತು ಮನೋರಂಜನೆಯ ಪ್ರಯಾಣದ ಒಂದು ಸೂಕ್ಷ್ಮ ನೋಟವನ್ನು ನೀಡುತ್ತದೆ. ಅವರು ತಮ್ಮ ಪ್ರಸ್ತುತ ಜೀವನದ ಅಪಾಯಗಳನ್ನು ದಾಟುವಾಗ ತನ್ನ ಬೇರುಗಳನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಾರೆ. ಈ ಚಿತ್ರವು ಒಂದು ಅನನ್ಯ ಕಥೆಯನ್ನು ಬಿಚ್ಚಿಡುತ್ತದೆ ಮತ್ತು ರತ್ನಾಕರನ ಸಂತೋಷದ ಅನ್ವೇಷಣೆಯಲ್ಲಿ, ಆತನು ತನ್ನ ಜಗತ್ತನ್ನು ಮರುಶೋಧಿಸುವಾಗ ಉಂಟಾಗುವ ಆಘಾತ, ನಗು ಮತ್ತು ಸಂದಿಗ್ಧತೆಗಳಿಂದ ತುಂಬಿದ ಸವಾರಿಯಲ್ಲಿ ಆತ ಸಾಗುತ್ತಾನೆ. ಈ ಪ್ರಯಾಣದಲ್ಲಿ, ಆತನ ಜೊತೆಯಲ್ಲಿ ಹಿಂದೆಂದೂ ಕಂಡು ಕೇಳರಿಯದ ಕಥೆಯನ್ನು ಬ್ರೇಕ್ ಮಾಡಲು ಪತ್ರಕರ್ತೆ ಮಯೂರಿ ಜೊತೆಯಾಗುತ್ತಾರೆ.

“ರತ್ನನ್ ಪ್ರಪಂಚ ಬಹಳ ಸಾಪೇಕ್ಷವಾದ ಸನ್ನಿವೇಶದ ಸುತ್ತ ಸುತ್ತುತ್ತದೆ. ಈ ಕಥೆಯ ಸರಳತೆ ನನ್ನನ್ನು ಸೆಳೆಯುತ್ತದೆ ಮತ್ತು ಪ್ರೈಮ್ ವಿಡಿಯೋ ಮೂಲಕ ರತ್ನಾಕರನ ಈ ಕಥೆ ಭಾರತೀಯ ಮತ್ತು ಜಾಗತಿಕ ಪ್ರೇಕ್ಷಕರನ್ನು ತಲುಪುತ್ತದೆ ಎಂದು ನಾನು ತುಂಬಾ ಉತ್ಸುಕನಾಗಿದ್ದೇನೆ. ಏಕೆಂದರೆ ನೀವು ಎಲ್ಲಿಯವರೇ ಆಗಿದ್ದರೂ, ನೀವು ಈ ಮನುಷ್ಯನ ಪ್ರಯಾಣಕ್ಕೆ ನೀವೂ ಸಂಬಂಧವನ್ನು ಹೊಂದುತ್ತೀರಿ. ನಟ ಧನಂಜಯ್ ಹೇಳುವಂತೆ, “ಈ ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನು ಹೇಗೆ ಸ್ವಯಂ ಅನ್ವೇಷಣೆಯ ಪ್ರಯಾಣದಲ್ಲಿದ್ದಾನೆ ಮತ್ತು ಅಂತಿಮ ಸಂತೋಷವನ್ನು ಕಂಡುಕೊಳ್ಳುತ್ತಾನೆ ಎಂಬ ವಾಸ್ತವವನ್ನು ಚಿತ್ರವು ಅನ್ವೇಷಿಸುತ್ತದೆ. ರತ್ನಾಕರನ ಪ್ರಯಾಣವು ಎತ್ತರ, ತಗ್ಗು ಮತ್ತು ಗುಂಡಿಗಳ ರಸ್ತೆಗಳಿಂದ ತುಂಬಿದೆ. ಅವನು ತನ್ನ ಜೀವನಕ್ಕಾಗಿ ಒಂದು ಯೋಜನೆಯನ್ನು ಹೊಂದಿದ್ದಾನೆ ಮತ್ತು ಜೀವನವು ಅವನಿಗೆ ಹೇಗೆ ವಿಭಿನ್ನ ಪಥವನ್ನು ತೋರಿಸಿದೆ ಎಂಬುದನ್ನು ಚಿತ್ರದಲ್ಲಿ ಸುಂದರವಾಗಿ ಪ್ರದರ್ಶಿಸಲಾಗಿದೆ.

ಟ್ರೇಲರ್ ಅನ್ನು ಇಲ್ಲಿ ವೀಕ್ಷಿಸಿ: https://twitter.com/PrimeVideoIN/status/1448551647630790662?t=yWX3Sgl93wgbhjpb-XVuFA&s=08

Facebook Comments