ಕಸದ ತೊಟ್ಟಿಯಲ್ಲಿ ರಾಶಿ ರಾಶಿ ರೇಷನ್ ಕಾರ್ಡ್‌ಗಳು ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ತಿ.ನರಸೀಪುರ.ಮೇ.12- ಚಾಲ್ತಿಯಲ್ಲಿರುವ ಬಿಪಿಲ್ ಹಾಗು ಎಪಿಎಲ್ ಕಾರ್ಡ್‍ಗಳು ಕಸದ ತೊಟ್ಟಿಯಲ್ಲಿ ಪತ್ತೆಯಾಗಿದ್ದು ಆಹಾರ ಇಲಾಖೆಯ ಬೇಜವಾಬ್ದಾರಿಗೆ ಸಾಕ್ಷಿ ಯಾಗಿದೆ. ಪಟ್ಟಣದ ಎಪಿಎಂಸಿ ಯಾರ್ಡ್‍ನ ಮಳಿಗೆಯೊಂದರ ಮುಂಭಾಗ ಸಾವಿರಾರು ಕಾರ್ಡ್‍ಗಳನ್ನು ಸುರಿಯಲಾಗಿದ್ದು, ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ತೋರುತ್ತಿದೆ.

ಡಿಎಸ್‍ಎಸ್ ಮುಖಂಡ ಆಲಗೂಡು ಚಂದ್ರಶೇಖರ್ , ಬನ್ನಳ್ಳಿ ಸೋಮಣ್ಣ ಇದನ್ನ್ನು ಕಂಡು ಆಹಾರ ಇಲಾಖೆಯ ಅಧಿಕಾರಿಗಳ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಲು ಒತ್ತಾಯಿಸಿದರು.

ಸ್ಥಳಕ್ಕೆ ಆಹಾರ ಇಲಾಖೆಯ ಹೆನ್ರಿ ಡಿಸೋಜ ಆಗಮಿಸಿ ಪರಿಶೀಲನೆ ನಡೆಸಿ, ಪಡಿತರ ಕಾರ್ಡ್‍ಗಳನ್ನು ಜಿಪಿಎಸ್ ಮಾಡಿದ ನಂತರ ಹೊಸ ಕಾರ್ಡ್‍ಗಳನ್ನು ಸಂಬಂಧಿಸಿದವರಿಗೆ ವಿತರಿಸಿದ್ದು, ಹಳೇ ಕಾರ್ಡ್‍ಗಳನ್ನು ಗೋಡೌನ್‍ನಲ್ಲಿ ಇರಿಸಲಾಗಿತ್ತು. ಗೋಡೌನ್ ಖಾಲಿ ಮಾಡುವಾಗ ಆಕಸ್ಮಿಕವಾಗಿ ಹೊರಬಿದ್ದಿವೆ ಎಂದು ಸ್ಪಷ್ಟ ಪಡಿಸಿದರು.

ಆದರೆ ಮುಖಂಡರು ಬಿಸಾಡಲಾದ ಕಾರ್ಡ್‍ಗಳು ಇನ್ನೂ ಚಾಲ್ತಿಯಲ್ಲಿದ್ದು ಅಲ್ಲಿದ್ದ ಕಾರ್ಡ್ ಒಂದನ್ನು ಆನ್‍ಲೈನ್‍ನಲ್ಲಿ ಪರಿಶೀಲಿಸಿದಾಗ ಇನ್ನು ಚಾಲ್ತಿಯಲ್ಲಿರುವುದು ಕಂಡು ಬಂದಿದೆ ಎಂದಾಗ ಹೆನ್ರಿ ಡಿಸೋಜ ಸುರಿದ ಕಾರ್ಡ್ ಗಳನ್ನು ತುಂಬಿಕೊಳ್ಳುವಂತೆ ಸಹಾಯಕ ಮಹೇಶ್‍ಗೆ ಸೂಚಿಸಿದರು.

ಇದಕ್ಕೆ ಅವಕಾಶ ಕೊಡದ ಮುಖಂಡರು ಈ ಬಗ್ಗೆ ತನಿಖೆಯಾಗಬೇಕು ಸ್ಥಳಕ್ಕೆ ತಹಶೀಲಾರ್ ಹಾಗು ಪೊಲೀಸರು ಬರುವವರೆಗೆ ತೆಗೆದು ಕೊಳ್ಳಲು ಬಿಡುವುದಿಲ್ಲ ಎನ್ನುತ್ತಿದ್ದಂತೆ ಅವರು ಸ್ಥಳದಿಂದ ಕಾಲ್ಕಿತ್ತರು.

ಆನಂತರ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಡಿ.ನಾಗೇಶ್ ,ಸಬ್ ಇನ್ಸ್ಪೆಕ್ಟರ್ ಬಸವರಾಜು ಪರಿಶೀಲನೆ ನಡೆಸಿ, ಕಾರ್ಡ್ ಗಳು ಇನ್ನೂ ಚಾಲ್ತಿಯಲ್ಲಿದ್ದರಿಂದ ಹೆನ್ರಿ ಡಿಸೋಜರನ್ನು ಪ್ರಕರಣಕ್ಕೆ ಸಂಬಂಸಿದಂತೆ ವರದಿ ನೀಡುವಂತೆ ಸೂಚಿಸಿ ಅಲ್ಲಿಂದ ತೆರಳಿದರು.

Facebook Comments

Sri Raghav

Admin