ಪಡಿತರ ಚೀಟಿ ಇಲ್ಲದವರಿಗೂ 1 ಕೆಜಿ ತೊಗರಿ ಬೇಳೆ, 5 ಕೆಜಿ ಅಕ್ಕಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 22- ರಾಜ್ಯದ ಯಾವುದೇ ಸ್ಥಳದಲ್ಲಿ ವಾಸ ಮಾಡುವವರು ಹಾಗೂ ಪಡಿತರ ಚೀಟಿ ಇಲ್ಲದವರಿಗೂ ಇದೇ 26ರಿಂದ 1 ಕೆಜಿ ತೊಗರಿ ಬೇಳೆ ಹಾಗೂ 5 ಕೆಜಿ ಅಕ್ಕಿ ಪಡೆಯಬಹುದೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಇಂದಿಲ್ಲಿ ತಿಳಿಸಿದ್ದಾರೆ.

ತಮ್ಮ ಕ್ಷೇತ್ರ ವ್ಯಾಪ್ತೀಯ ಮಹಾಲಕ್ಷ್ಮಿವಿಧಾನ ಸಭಾ ಕ್ಷೇತ್ರದ, ಕಮಲಮ್ಮನ ಗುಂಡಿ ಆಟದ ಮೈದಾನದಲ್ಲಿ, 4000 ಸಾವಿರ ಆಟೋ, ಲಾರಿ, ಟೆಂಪೋ ಮತ್ತು ಬಸ್ ಚಾಲಕರಿಗೆ ಆಹಾರ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಹೊರ ರಾಜ್ಯ ಹಾಗೂ ರಾಜ್ಯದ ಯಾವುದೇ ಭಾಗದಲ್ಲಿ ವಾಸ ಮಾಡುವವರು ಪಡಿತರ ಚೀಟಿ ಇಲ್ಲದಿದ್ದರೂ ಆಹಾರ ಧಾನ್ಯಗಳನ್ನು ಪಡೆಯಬಹುದೆಂದು ತಿಳಿಸಿದರು.

ಪ್ರತಿಯೊಬ್ಬ ಫಲಾನುಭವಿಗಳು ಆಧಾರ್ ಕಾರ್ಡ್ ತೋರಿಸಿ ತಮ್ಮ ತಮ್ಮ ವ್ಯಾಪ್ತಿಯ ಅಂಗಡಿಯಲ್ಲಿ ಪಡಿತರ ಧಾನ್ಯವನ್ನು ಪಡೆಯಬಹು ದಾಗಿದೆ. ಮೊದಲ ಹಂತದಲ್ಲಿ ಫಲಾನುಭವಿಗಳಿಗೆ 1 ಕೆಜಿ ತೊಗರಿ ಬೇಳೆ ಹಾಗೂ 5 ಅಕ್ಕಿಯನ್ನು ವಿತರಣೆ ಮಾಡಲಾಗುವುದು.

ಪ್ರತಿಯೊಬ್ಬರೂ ಇದರ ಸದುಪಯೋಗಪಡಿಸಿಕೊಳ್ಳಬೇಕು.ಯಾರು ಹೆದರ ಬೇಕಿಲ್ಲ ನಿಮ್ಮ ಜೊತೆ ನಮ್ಮ ಸರ್ಕಾರ ನಾವು ಮತ್ತೆ ನಮ್ಮ ನಾಯಕರುಗಳು ಇರುತ್ತೇವೆ ಎಂದು ತಿಳಿಸಿದರು.

ಜೂನ್ ಒಂದರಿಂದ ರಾಜ್ಯದ್ಯಾಂತ ಪಡಿತರ ಚೀಟಿ ಇಲ್ಲದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 1 ಕೆ.ಜಿ. ತೊಗರಿಬೇಳೆ ಹಾಗೂ 10 ಕೆಜಿ ಅಕ್ಕಿಯನ್ನು ನೀಡಲಾಗುವುದು. ಒಂದು ವೇಳೆ ಫಲಾನುಭವಿಗಳಿಗೆ ಪಡಿತರ ಚೀಟಿ ಇಲ್ಲದಿದ್ದರೂ, ಆಹಾರಧಾನ್ಯಗಳನ್ನು ನೀಡಬೇಕು.

ಯಾರಾದರೂ ಇಲ್ಲ ಸಲ್ಲದ ಇಲ್ಲದ ಕಾರಣಗಳನ್ನು ನೀಡಿ ಪಡಿತರ ನೀಡದಿದ್ದರೆ, ಅಂತಹ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ನಮ್ಮ ಸರ್ಕಾರವಿರುವುದು ಬಡವರಿಗೆ ಹಾಗೂ ನಿಮಗೋಸ್ಕಾರ. ಯಾವುದೇ ಸಂದರ್ಭದಲ್ಲೂ ನಾವು ಚಾಲಕರ ಕೈ ಬಿಡುವಮಾತಿಲ್ಲ. ನಿಮ್ಮ ಜೊತೆಗೆ ನಾವು ಯಾವಾಗಲೂ ಇರುತ್ತೇವೆ.

ಇವತ್ತು ನಮ್ಮ ಕ್ಷೇತ್ರದ ಎಲ್ಲಾ ಚಾಲಕರಿಗೆ ಆಹಾರದ ಕಿಟ್‍ಗಳನ್ನು ವಿತರಿಸಲಾಗಿದೆ. ಇನ್ನು ಯಾರ ಹೆಸರು ಇದರಲ್ಲಿ ಬಿಟ್ಟೋಗಿದೆ ಅವರ ಹೆಸರುಗಳನ್ನು ಬರೆಸುತ್ತಿದ್ದೀನಿ. ಅವರಿಗೆ ನನ್ನ ಕಚೇರಿಯಲ್ಲಿ ಕಿಟ್‍ಗಳನ್ನು ಕೊಡುವುದಾಗಿ ಹೇಳಿದರು.

ನಮ್ಮ ಸರ್ಕಾರ ಬಂದಮೇಲೆ ಸಾಕಷ್ಟು ಸುಧಾರಣೆಗಳು ಆಗಿವೆ. ಕೊರೋನ ವೈರಸ್ ತಡೆಯುವುದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

ಹಾಗೇ ಕೊರೋನ ವಿಚಾರದಲ್ಲಿ ಏನೇ ತೀರ್ಮಾನ ತೆಗೆದುಕೊಳ್ಳ ಬೇಕೆಂದರು ಸಚಿವ ಆರ್.ಅಶೋಕ್ ರವರು ಉಪಾಧ್ಯಕ್ಷರಾಗಿದ್ದು, ಇಡೀ ರಾಜ್ಯದಲ್ಲಿ ಯಾವುದೇ ಒಂದು ತೀರ್ಮಾನ ತೆಗೆದುಕೊಳ್ಳ ಬೇಕಾದರೆ ಅವರ ನಾಯಕತ್ವದಲ್ಲೂ ತೆಗೆದುಕೊಳ್ಳಲಾಗುತ್ತೆ. ಆರ್.ಅಶೋಕ್ ಈ ಕಾರ್ಯಕ್ರಮಕ್ಕೆ ಬಂದಿರುವುದು ನನಗೆ ಖುಷಿಯಾಗಿದೆ.

ಆಟೋ ಚಾಲಕರ ಕಷ್ಟಕ್ಕೆ ನಮ್ಮ ಸರ್ಕಾರ ಸ್ಪಂದಿಸಿದ್ದು ಅವರಿಗೆ 5000 ಸಾವಿರ ಪರಹಾರ ಹಣ ಘೋಷಣೆ ಮಾಡಿದೆ. ಆಟೋ ಚಾಲಕರು ಹಣ ಪಡೆಯೋದಕ್ಕೆ ಅಗತ್ಯ ದಾಖಲೆಗಳನ್ನ ಕೊಡಬೇಕು ಅದನ್ನ ನನ್ನ ಕಚೇರಿನಲ್ಲೆ ಪ್ರರಂಭಿಸಲು ಸೂಚನೆ ನೀಡಿದ್ದೇನೆ ಎಂದರು.

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಇಡೀ ದೇಶ ಇವತ್ತು ಒಟ್ಟಾಗಿ ಕೊರೋನ ಮಹಾಮಾರಿಯನ್ನ ದೇಶದಿಂದ ಹೊರಗಾಕಬೇಕೆಂದು ನಿರಂತರವಾಗಿ ಕೆಲಸ ಮಡುತ್ತಿದೆ. ವಿಶೇಷವಾಗಿ ನಾವೆಲ್ಲರು ಈ ಸಂದರ್ಭದಲ್ಲಿ ವೈದ್ಯರಿಗೆ, ನರ್ಸ್, ಆಶಾ ಕಾರ್ಯಕರ್ತೆಯರು, ಪೊಲೀಸರಿಗೆ ಧನ್ಯವಾದಗಳನ್ನು ಅರ್ಪಿಸಬೇಕು.

ಕೊರೋನ ಬಂತಂದರೆ ಎಲ್ಲಾರು ನಮ್ಮನ್ನು ಹೊರಹಾಕುತ್ತಾರೆ. ಆದರೆ ಇವರು ಧೈರ್ಯದಿಂದ ಇವರುಗಳು ಕೆಲಸ ಮಾಡ್ತಿದ್ದಾರೆ. ಕೊರೋನ ರೋಗಿಗಳು ಇದ್ದಲ್ಲೇ ಹೋಗಿ ಆಶಾ ಕಾರ್ಯಕರ್ತೆಯರು ಔಷಧಿಗಳನ್ನು ಕೊಡ್ತಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕರುಗಳಾದ ಮುನಿರಾಜು , ನರೇಂದ್ರಬಾಬು, ಮಾಜಿ ಉಪಮೇಯರ್ ಎಸ್.ಹರೀಶ್, ಪಾಲಿಕೆ ಸದಸ್ಯ ರಾಜೇಂದ್ರ ಕುಮಾರ್, ಕ್ಷೇತ್ರದ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಬೆಂಗಳೂರು ಉತ್ತರ ಜಿಲ್ಲೆ ಉಪಾಧ್ಯಕ್ಷರು ಜಯರಾಮಯ್ಯ, ಮುಖಂಡರಾದ ಶ್ರೀನಿವಾಸ್, ನಿಸರ್ಗ ಜಗದೀಶ್, ರೈಲ್ವೇ ನಾರಾಯಣ್ , ಗಂಗಾ ಹನುಮಯ್ಯ, ಶಿವನಂದಾ ಮೂರ್ತಿ , ವೆಂಕಟೇಶ್ ಮೂರ್ತಿ ಪಾಲ್ಗೊಂಡಿದ್ದರು.

Facebook Comments

Sri Raghav

Admin