ಬ್ರೇಕಿಂಗ್ ನ್ಯೂಸ್ : ಮೋದಿ, ದೇವೇಗೌಡರು ಸೇರಿ ಅನೇಕ ಭಾರತೀಯರ ಮೇಲೆ ಚೀನಾ ಕಳ್ಳಕಣ್ಣು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.14- ಭಾರತದ ಮೇಲೆ ಸದಾ ಹಗೆತನದ ವಿಷ ಕಾರುತ್ತಿರುವ ಚೀನಾದ ಮತ್ತೊಂದು ಕುತಂತ್ರ ಬೆಳಕಿಗೆ ಬಂದಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೇರಿದಂತೆ ಅನೇಕ ಭಾರತೀಯರ ಮೇಲೆ ಚೀನಾ ಕಣ್ಣಿಟ್ಟಿದ್ದು, ಬೇಹುಗಾರಿಕೆ ನಡೆಸುವ ಪಟ್ಟಿಯೊಂದನ್ನು ಸಿದ್ದಗೊಳಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂ, ಪುತ್ರ ರಾಹುಲ್ ಗಾಂ, ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ, ಮಮತ ಬ್ಯಾನರ್ಜಿ, ಉದ್ದವ್ ಠಾಕ್ರೆ, ಶಿವರಾಜ್ ಸಿಂಗ್ ಚವ್ವಾಣ್, ನವೀನ್ ಪಟ್ನಾಯಕ್, ಭಾರತದ ಮೂರು ಸೇನೆ ಪಡೆಗಳ ಮುಖ್ಯಸ್ಥರಾದ ಜನರಲ್ ಎಂ.ಎಂ.ನರವಣೆ, ಏರ್ ಚೀಫ್ ಮಾರ್ಷಲ್ ಬಧೌರಿಯ, ಅಡ್ಮಿರಲ್ ಜನರಲ್ ಕರಣ್‍ಬೀರ್ ಸಿಂಗ್, ಸಿದ್ದರಾಮಯ್ಯ ಮೊದಲಾದವರ ಹೆಸರು ಸಹ ಪಟ್ಟಿಯಲ್ಲಿದೆ.

ಅಲ್ಲದೆ ಚಿತ್ರತಾರೆಯರು, ಕ್ರೀಡಾಪಟುಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಖ್ಯಾತ ನಾಮರುಗಳ ಹೆಸರುಗಳು ಪಟ್ಟಿಯಲ್ಲಿದೆ. ಇವರೆಲ್ಲರ ಮೇಲೆ ನಿಗಾವಹಿಸಿ ಮಾಹಿತಿ ನೀಡಲು ಚೀನಾ ಅನೇಕ ಸಂಸ್ಥೆಗಳನ್ನು ಇದಕ್ಕಾಗಿ ನಿಯೋಜಿಸಿದೆ.

ಯಾವ ಉದ್ದೇಶಕ್ಕಾಗಿ ಖ್ಯಾತನಾಮರ ಮತ್ತು ಗಣ್ಯರ ಮಾಹಿತಿಗಳನ್ನು ಕಲೆ ಹಾಕುತ್ತಿದೆ ಎಂಬ ಬಗ್ಗೆ ಸದ್ಯಕ್ಕೆ ಸ್ಪಷ್ಟ ಮಾಹಿತಿ ಲಭಿಸಿಲ್ಲವಾದರೂ ಈ ಆತಂಕಕಾರಿ ಬೆಳವಣಿಗೆ ಬಗ್ಗೆ ಗಂಭೀರ ಗಮನಹರಿಸಲಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವ ನಿರ್ಮಲ ಸೀತಾರಾಮನ್, ಕಾನೂನು ಸಚಿವ ರವಿಶಂಕರ್ ಪ್ರಸಾದ್, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ದೋವೆಲ್, ಭಾರತೀಯ ಮೂರು ಸಶಸ್ತ್ರ ಪಡೆಗಳ ಮಹಾ ದಂಡನಾಯಕ ಜನರಲ್ ಬಿಪಿನ್ ರಾವತ್, ಖ್ಯಾತ ಉದ್ಯಮಿಗಳಾದ ರತನ್ ಟಾಟಾ, ಗೌತಮ್ ಅಧಾನಿ ಮೊದಲಾದವರ ಹೆಸರು ಚೀನಾದ ಗೂಢಾಚಾರಿಕೆ ಪಟ್ಟಿಯಲ್ಲಿದೆ ಎಂದು ತಿಳಿಸಿದೆ.

ಪೂರ್ವ ಲಡಾಕ್‍ನಲ್ಲಿ ಇಂಡೋ ಚೀನಾ ಗಡಿ ಸಂಘರ್ಷದ ನಂತರ ಅಂತಾರಾಷ್ಟ್ರೀಯ ವೇದಿಕೆಗಳಿಂದಲೂ ಮುಖಭಂಗಕ್ಕೆ ಒಳಗಾಗಿರುವ ಚೀನಾ ಅತಿ ಗಣ್ಯರ ಮೇಲೆ ಕಣ್ಣಿಟ್ಟಿದ್ದು, ಅವರ ಚಲನವಲನಗಳ ಮೇಲೆ ನಿಗಾ ಇಡಲು ಬೇಹುಗಾರಿಕೆ ಪಟ್ಟಿಯೊಂದನ್ನು ಸಿದ್ದಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಚೀನಾದ ಈ ಕುತಂತ್ರದ ಬಗ್ಗೆ ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಅತಿ ಗಣ್ಯ ವ್ಯಕ್ತಿಗಳ ರಕ್ಷಣೆಗೆ ಮತ್ತಷ್ಟು ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

Facebook Comments

Sri Raghav

Admin