ಕುಖ್ಯಾತ ಸರಗಳ್ಳನ ಜಾತಕ ಬಿಚ್ಚಿಟ್ಟ ಡಿಸಿಪಿ ಚನ್ನಣ್ಣನವರ್

ಈ ಸುದ್ದಿಯನ್ನು ಶೇರ್ ಮಾಡಿ

Channanna

ಬೆಂಗಳೂರು, ಜೂ.18- ಮುಂಜಾನೆ ಪೊಲೀಸರ ಬಲೆಗೆ ಬಿದ್ದಿರುವ ಸರಗಳ್ಳ ಅಚ್ಚುತಕುಮಾರ್‍ಗಣಿ ನೂರಕ್ಕೂ ಹೆಚ್ಚು ಸರಗಳ್ಳತನ ಮಾಡಿದ್ದಾನೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣನವರ್ ತಿಳಿಸಿದ್ದಾರೆ. ಈಸಂಜೆಯೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು ಈತ 100ಕ್ಕೂ ಹೆಚ್ಚು ಸರಗಳ್ಳತನ ನಡೆಸಿರುವುದು ತಿಳಿದು ಬಂದಿದೆ. ಆರೋಪಿಯು ಒಂಟಿ ಯಾಗಿ ಓಡಾಡುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಮುಂಜಾನೆ ಹಾಗೂ ಸಂಜೆ ವೇಳೆ ಮಹಿಳೆಯರ ಕೊರಳಿಗೆ ಕೈ ಹಾಕಿ ಸರ ಅಪಹರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದ.

ಆರೋಪಿ ಸರಗಳ್ಳ ಮುಂಜಾನೆ 6.30 ರಿಂದ 9.30ರವರೆಗೆ ಮತ್ತು ಸಂಜೆ 5.30 ರಿಂದ 8.30 ರವರೆಗೂ ಬೈಕ್‍ನಲ್ಲಿ ಸುತ್ತಾಡುತ್ತ ಒಂಟಿಯಾಗಿ ಹೋಗುವ ಮಹಿಳೆಯರನ್ನು ಹಿಂಬಾಲಿಸಿ ಸರ ಅಪಹರಿಸುತ್ತಿದ್ದನು.  ಬಂಧಿತ ಅಚ್ಚುತಕುಮಾರ್‍ಗಣಿ ಧಾರವಾಡ ಸಮೀಪದ ಕೋಳಿವಾಡ ನಿವಾಸಿ. ಈತ ಹುಬ್ಬಳ್ಳಿ, ಗದಗ, ತುಮಕೂರು, ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ರಾಜ್ಯದ ಇನ್ನಿತರೆ ಜಿಲ್ಲೆಗಳಲ್ಲಿ ಸರಗಳ್ಳತನ ಮಾಡಿದ್ದಾನೆ. ಜಿಲ್ಲೆಯಲ್ಲಷ್ಟೇ ಅಲ್ಲದೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲೂ ಕೂಡ ಒಂಟಿ ಮಹಿಳೆಯರ ಸಹ ಅಪಹರಣ ಮಾಡಿದ್ದಾನೆ.  ಇತ್ತೀಚೆಗೆ ತುಮಕೂರಿನಲ್ಲೂ ಆರೋಪಿ ಅಚ್ಚುತಕುಮಾರ್‍ಗಣಿ ಸರಗಳ್ಳತನ ನಡೆಸಿದ್ದು ಹೆಚ್ಚಿನ ಮಾಹಿತಿಗಾಗಿ ಈತನನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಅವರು ಹೇಳಿದರು.

Facebook Comments

Sri Raghav

Admin