ರವಿ ಪೂಜಾರಿ ಸಹಚರ ಗುಲಾಮ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.3- ಭೂಗತ ಪಾತಕಿ ರವಿ ಪೂಜಾರಿಯ ಸಹಚರ ಗುಲಾಮ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ರವಿ ಪೂಜಾರಿ ವಿದೇಶಕ್ಕೆ ಪರಾರಿಯಾಗಲು ಗುಲಾಮ್ ನೆರವು ನೀಡಿದ್ದ. ಅಲ್ಲದೆ ಪೂಜಾರಿ ಹೇಳಿದಂತೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ.

ಈತನನ್ನು ಬಳಸಿಕೊಂಡು ರವಿ ಪೂಜಾರಿ ಫೋನ್ ಮೂಲಕ ಪ್ರಖ್ಯಾತ ಸಿನಿಮಾ ನಟರು, ರಾಜಕೀಯ ಧುರೀಣರು ಮತ್ತಿತರ ಪ್ರಮುಖ ವ್ಯಕ್ತಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಎಂದು ಸಿಸಿಬಿ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಗುಲಾಮ್‍ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯನ್ನು ನ್ಯಾಯಾಲಯ 10 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ.

ರವಿಪೂಜಾರಿ ಮೇಲೆ ರಾಜ್ಯದಲ್ಲಿ ಒಟ್ಟು 90ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ರವಿ ಪೂಜಾರಿಯ ಅಣತಿ ಯಂತೆ ಗುಲಾಮ್ ಕೆಲಸ ಮಾಡುತ್ತಿದ್ದ.

Facebook Comments