ಭಯೋತ್ಪಾದಕರು, ಭ್ರಷ್ಟರಿಗೆ ಖಾಸಗಿತನದ ಹಕ್ಕಿಲ್ಲ : ಪ್ರಸಾದ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.22- ಭಯೋತ್ಪಾದಕರು ಮತ್ತು ಭ್ರಷ್ಟಾಚಾರಿಗಳಿಗೆ ಖಾಸಗಿತನದ ಹಕ್ಕು ಇಲ್ಲ ಎಂದು ಹೇಳಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಉಗ್ರರು ಮತ್ತು ಲಂಚಕೋರರು ಕಾನೂನು ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್‍ನಲ್ಲಿ ಇಂದು ನಡೆದ ಅಂತಾರಾಷ್ಟ್ರೀಯ ನ್ಯಾಯಾಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಪುನರುಚ್ಚರಿಸಿದರು.
ಭಯೋತ್ಪಾದಕರು ಮತ್ತು ಭ್ರಷ್ಟರು ಖಾಸಗಿತನದ ಹಕ್ಕಿಗೆ ಅರ್ಹರಲ್ಲ. ಅದೇ ರೀತಿ ಕಾನೂನಿನಡಿ ಯಾವುದೇ ಸೌಲಭ್ಯ, ಸವಲತ್ತುಗಳನ್ನು ಅವರು ಅಪೇಕ್ಷಿಸುವಂತಿಲ್ಲ ಎಂದು ಹೇಳಿದರು.

ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ನಮ್ಮ ದೇಶದ ಪ್ರಜಾಪ್ರಭುತ್ವದ ಮೂರು ಪ್ರಮುಖ ಅಂಗಗಳು. ಸರ್ಕಾರಿ ನೌಕರರು ಕಾರ್ಯಾಂಗವನ್ನು ಪಾಲಿಸಬೇಕು. ಅದೇ ರೀತಿ ಚುನಾಯಿತ ಪ್ರತಿನಿಧಿಗಳು ಶಾಸಕಾಂಗದ ತತ್ವಗಳಿಗೆ ಬದ್ಧರಾಗಿ ಕೆಲಸ ಮಾಡಬೇಕು. ನ್ಯಾಯ ನಿರ್ಣಯವನ್ನು ಒದಗಿಸುವ ಜವಾಬ್ದಾರಿ ನ್ಯಾಯಾಧೀಶರ ಮೇಲಿರುತ್ತದೆ ಎಂದು ರವಿಶಂಕರ್ ಪ್ರಸಾದ್ ವ್ಯಾಖ್ಯಾನಿಸಿದರು.

Facebook Comments