ಚಿತ್ರ ನಿರ್ಮಾಪಕನ ಸಹೋದರನ ಕೊಲೆಗೆ ಸಂಚು ರೂಪಿಸಿದ್ದ ರವಿ ಬಂಧನಕ್ಕಾಗಿ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.23-ರೌಡಿ ಮತ್ತು ಚಿತ್ರ ನಿರ್ಮಾಪಕ ಸಹೋದರನ ಕೊಲೆಗೆ ಸಂಚು ರೂಪಿಸಿ ಪರಾರಿಯಾಗಿರುವ ಕುಖ್ಯಾತ ರೌಡಿ ರವಿ ಅಲಿಯಾಸ್ ಬಾಂಬೆ ರವಿಗಾಗಿ ಜಯನಗರ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.  ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಏಳು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಪ್ರಮುಖ ಆರೋಪಿ ಬಾಂಬೆ ರವಿಗಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಡಿ.20ರಂದು ಜಯನಗರ 7ನೇ ಬ್ಲಾಕ್ 2ನೇ ಮುಖ್ಯರಸ್ತೆ, ನ್ಯಾಷನಲ್ ಕಾಲೇಜು ಆಟದ ಮೈದಾನದ ಗೇಟ್ ಮುಂಭಾಗ ಟೆಂಪೋ ಟ್ರಾವಲ್‍ನಲ್ಲಿ ರೌಡಿ ಸೈಕಲ್ ರವಿ ಮತ್ತು ಬೇಕರಿ ರಘುನನ್ನು ಕೊಲೆ ಮಾಡಲು 16 ಮಂದಿ ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿದ್ದಾಗ ಕರ್ತವ್ಯದಲ್ಲಿದ್ದ ಇನ್‍ಸ್ಪೆಕ್ಟರ್ ಸುದರ್ಶನ್ ಅವರು ಇವರ ಚಲನವಲನ ಗಮನಿಸಿ ಹಿಡಿಯಲು ಹೋದರು.

ಆ ಸಂದರ್ಭದಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಮಂಜುನಾಥ ಎಂಬಾತ ತನ್ನ ಸಹಚರ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಬ್ಬಿಣದ ಲಾಂಗ್‍ನಿಂದ ಇನ್‍ಸ್ಪೆಕ್ಟರ್‍ಗೆ ಬೀಸಿ ಕೊಲೆಗೆ ಯತ್ನಿಸುತ್ತಿದ್ದಂತೆ ಅತ್ತ 10 ಮಂದಿ ಸಹಚರರು ಪರಾರಿಯಾದರು.

ತಕ್ಷಣ ಹಲ್ಲೆಯಿಂದ ತಪ್ಪಿಸಿಕೊಂಡು ಇನ್‍ಸ್ಪೆಕ್ಟರ್ ಮತ್ತು ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿ 7 ಮಂದಿಯನ್ನು ಹಿಡಿದು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

Facebook Comments