ಸ್ಯಾಂಡಲ್ ವುಡ್‌ನ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್‌ಗೆ 60 ನೆ ಹುಟ್ಟುಹಬ್ಬದ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 30- ಚಿತ್ರರಂಗದ ಬಣ್ಣದ ಲೋಕದಲ್ಲೇ ಕನಸು ಕಟ್ಟಿಕೊಂಡ ಕನಸುಗಾರ ವಿ.ರವಿಚಂದ್ರನ್ ಅವರಿಗೆ ಇಂದು 60 ನೆ ವರ್ಷದ ಹುಟ್ಟುಹಬ್ಬದ ಸಂಭ್ರಮ. ತಮ್ಮ ನೆಚ್ಚಿನ ನಟನ ಷಷ್ಠಿ ಪೂರ್ತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಬೇಕು ಎಂದು ರವಿಚಂದ್ರನ್ ಅಭಿಮಾನಿಗಳು ಕನಸು ಕಟ್ಟಿಕೊಂಡಿದ್ದರಾದರೂ ಅವರ ಕನಸಿಗೆ ಕೊರೊನಾ ಮಹಾಮಾರಿ ತಣ್ಣಿರೆರಚಿರುವುದರಿಂದ ತಾವು ಇದ್ದಲ್ಲಿಯೇ ಸರಳವಾಗಿ ಆಚರಿಸಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಕೇಕ್ ಕತ್ತರಿಸುವ ಮೂಲಕ ತಮ್ಮ 60 ನೇ ವರ್ಷದ ಜನ್ಮದಿನಾಚರಣೆ ಆಚರಿಸಿಕೊಂಡಿದ್ದಾರೆ. ರವಿಚಂದ್ರನ್ ರ ಹುಟ್ಟುಹಬ್ಬದ ಅಂಗವಾಗಿ ನಿರ್ದೇಶಕ ಸಿ.ಎಂ.ಗಿರಿರಾಜ್ ನಿರ್ದೇಶನದ ಕನ್ನಡಿಗ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರವು ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ವಾಗಿದ್ದು 1550 ನಡೆದ ಕಥೆಯಾಗಿದ್ದು ರವಿಚಂದ್ರನ್ ಅವರು ಕನ್ನಡ ವಿದ್ವಾಂಸರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಭಿಮಾನದ ಉಡುಗೊರೆ:
ಅಭಿಮಾನಿಗಳ ಪ್ರೀತಿ ಯ ಪುಟ್ನಂಜ ಅಂದರೆ ಬಲು ಪ್ರೀತಿ. ಅದೇ ರೀತಿ ಸ್ವತಃ ನಿರ್ದೇಶಕ ರಾಗಿರುವ ರಘುರಾಮ್ ಕೂಡ ಕನಸುಗಾರ ರವಿಚಂದ್ರನ್ ರ ಅಪ್ಪಟ ಅಭಿಮಾನಿಯಾಗಿದ್ದು ತಮ್ಮ ಮೆಚ್ಚಿನ ತಾರೆಯ 60 ನೆ ವರ್ಷದ ಹುಟ್ಟು ಹಬ್ಬದ ಅಂಗವಾಗಿ ರವಿಯ ಬಾಲ್ಯದಿಂದ ಈಗಿನವರೆಗಿನ ಬಲು ಅಪರೂಪದ ಫೊಟೋಗಳನ್ನು ಬಳಸಿ ವಿಶಿಷ್ಟ ಟೀಸರ್ ಬಿಡುಗಡೆ ಮಾಡುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ.

ಕುತೂಹಲ ಮೂಡಿಸಿರುವ ರವಿ ವಿಡಿಯೋ:
ಇದು ಕಾಲ್ಪನಿಕ ಕತೆಯಲ್ಲ ನನ್ನಲ್ಲಿರುವ ಸತ್ಯ. ಮನುಷ್ಯರು ಬಣ್ಣಗಳಾಗಿ, ಬಣ್ಣಗಳು ಭಾವನೆಗಳಾಗಿ ಎಂಬ ಸಾಲುಗಳಿರುವ ವಿಡಿಯೋವೊಂದನ್ನು ಯೂಟ್ಯೂಬ್ ನಲ್ಲಿ ಹರಿಬಿಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

ಆ ವಿಡಿಯೋದಲ್ಲಿ ರವಿಚಂದ್ರನ್ ಅವರು ವಿಭಿನ್ನ ಅವತಾರಗಳಲ್ಲಿ ದ್ದು ಜೀವನಕ್ಕೆ ಎರಡು ಮುಖಗಳಿವೆ, ಜೀವವೇ ಇಲ್ಲದ ಜೀವನ, ದೇವರು ಹೃದಯವಿಲ್ಲದವ ಎಂಬ ಹಲವಾರು ಮನಮಿಡಿಯುವ ಸಾಲುಗಳಿದ್ದು, ವಿಡಿಯೋದಲ್ಲಿ ರವಿ ಮಕ್ಕಳು, ಕಿಚ್ಚ ಸುದೀಪ್, ರವಿಬೋಪಣ್ಣ ಚಿತ್ರದ ಪೋಸ್ಟರ್ ಕೂಡ ಕಾಣಿಸಿಕೊಂಡಿರುವುದರಿಂದ ಇದು ರವಿಬೋಪಣ್ಣ ಚಿತ್ರಕ್ಕೆ ಸಂಬಂಧಿಸಿದ ವಿಡಿಯೋನ, ರವಿಚಂದ್ರನ್ ರ ನಿಜ ಜೀವನವೇ ವಿಡಿಯೋ ರೂಪದಲ್ಲಿ ಬಂದಿದೆಯೇ ಅಥವಾ ರವಿಚಂದ್ರನ್ ತಮ್ಮ ಮುಂದಿನ ಚಿತ್ರ ಕ್ಕಾಗಿ ಹೆಣೆದಿರುವ ಕಥೆಯೇ ಎಂಬ ನಾನಾ ಯಕ್ಷಪ್ರಶ್ನೆ ಹುಟ್ಟಿಕೊಂಡಿದ್ದು ಅವೆಲ್ಲಕ್ಕೂ ಇಂದು ತೆರೆ ಬೀಳಲಿದೆ.

ಶುಭಾಶಯಗಳ ಸುರಿಮಳೆ:
ಕನ್ನಡ ಚಿತ್ರರಂಗದ ಅಜಾತ ಶತ್ರುವಾಗಿರುವ ವಿ.ರವಿಚಂದ್ರನ್ ರವರ ಹುಟ್ಟುಹಬ್ಬಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ರಾಂಕಿಂಗ್ ಸ್ಟಾರ್ ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಅಪಾರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.

ರವಿಚಂದ್ರನ್ ಅವರು ಸದ್ಯ ತಾವೇ ನಿರ್ದೇಶಿಸುತ್ತಿರುವ ರಾಜೇಂದ್ರ ಪೊನ್ನಪ್ಪ, ಸುದೀಪ್ ಜೊತೆ ರವಿಬೋಪಣ್ಣ, ಉಪೇಂದ್ರರೊಂದಿಗೆ ತ್ರಿಶೂಲಂ, ಟಿ.ವಾಸು ನಿರ್ದೇಶನದ ದೃಶ್ಯಂ 2 ಚಿತ್ರ ಗಳಲ್ಲಿ ನಟಿಸುತ್ತಿದ್ದು ಇಂದು ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಇನ್ನು ಹಲವು ಹೊಸ ಚಿತ್ರಗಳನ್ನು ಘೋಷಿಸಬಹುದು.

Facebook Comments