35ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮ ಅಶ್ವಿನ್‍

ಈ ಸುದ್ದಿಯನ್ನು ಶೇರ್ ಮಾಡಿ

ಯುಎಇ, ಸೆ.17- ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಇಂದು ತಮ್ಮ 35ನೆ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಖ್ಯಾತ ಕ್ರಿಕೆಟಿಗ ಸುನೀಲ್ ಗವಾಸ್ಕರ್, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ ಸೇರಿದಂತೆ ಹಲವರು ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

2011ರ ನವೆಂಬರ್ 6 ರಂದು ವೆಸ್ಟ್‍ಇಂಡೀಸ್ ವಿರುದ್ಧದ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ರವಿಚಂದ್ರನ್ ಅಶ್ವಿನ್ ಅವರು 79 ಟೆಸ್ಟ್ ಪಂದ್ಯಗಳಿಂದ 413 ವಿಕೆಟ್ ಕೆಡವಿರುವುದೇ ಅಲ್ಲದೆ ಬ್ಯಾಟ್‍ನಿಂದ 2656 ರನ್ ಸಿಡಿಸಿದ್ದಾರೆ. 111 ಏಕದಿನ ಪಂದ್ಯಗಳಿಂದ 150 ವಿಕೆಟ್, 675 ರನ್ ಹಾಗೂ 46 ಟ್ವೆಂಟಿ-20 ಪಂದ್ಯಗಳಿಂದ 52 ವಿಕೆಟ್ ಹಾಗೂ 123 ರನ್ ಗಳಿಸಿದ್ದಾರೆ.

ಚುಟುಕು ವಿಶ್ವಕಪ್‍ಗೆ ಅಚ್ಚರಿ ರೀತಿಯಲ್ಲಿ ಆಯ್ಕೆಯಾಗಿರುವ ರವಿಚಂದ್ರನ್ ಅಶ್ವಿನ್ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿರುವ ಐಪಿಎಲ್ 14ರ ಎರಡನೆ ಚರಣದ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ.

Facebook Comments