ಮುಂದಿನ ಪಂದ್ಯಕ್ಕೆ ಅಶ್ವಿನ್ ಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಸೆ. 21- ಕಿಂಗ್ಸ್ ಪಂಜಾಬ್ ಇಲೆವೆನ್ ವಿರುದ್ಧ ಸೂಪರ್ ಗೆಲುವು ಸಾಧಿಸುವ ಮೂಲಕ ಐಪಿಎಲ್ ಶುಭಾರಂಭ ಮಾಡಿದ್ದು ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ರವಿಚಂದ್ರನ್ ಅಶ್ವಿನ್ ಮುಂದಿನ ಪಂದ್ಯಕ್ಕೆ ಲಭ್ಯರಾಗುತ್ತಾರೆ ಎಂದು ಡೆಲ್ಲಿ ತಂಡದ ನಾಯಕ ಶ್ರೇಯಾಸ್ ಐಯ್ಯರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕನಾಗಿದ್ದ ರವಿಚಂದ್ರನ್ ಅಶ್ವಿನ್ ಈಗ ಡೆಲ್ಲಿ ಕ್ಯಾಪಿಟಲ್ಸ್‍ನ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ. ನಿನ್ನೆ ನಡೆದ ಪಂದ್ಯದ 6ನೇ ಓವರ್ ಬೌಲಿಂಗ್ ಮಾಡಿದ್ದ ರವಿಚಂದ್ರನ್ ಅಶ್ವಿನ್ ಮೊದಲ ಎಸೆತದಲ್ಲೇ ಕರುಣ್‍ನಾಯರ್‍ರ ವಿಕೆಟ್ ಕಬಳಿಸಿ ತಂಡಕ್ಕೆ ಆಸರೆಯಾದರಲ್ಲದೆ 5ನೆ ಎಸೆತದಲ್ಲಿ ಅಪಾಯಕಾರಿ ಆಟಗಾರ ನಿಕೋಲಸ್ ಪೂರನ್‍ರನ್ನು ಮೈದಾನ ತೊರೆಯುವಂತೆ ಮಾಡಿದ್ದರು.

ಆದರೆ ಕೊನೆಯ ಎಸೆತದಲ್ಲಿ ರನ್ ತಡೆಯುವ ಭರದಲ್ಲಿ ಬಿದ್ದು ಎಡಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಆ ಬಳಿಕ ಮೈದಾನ ತೊರೆದು ಡ್ರೆಸಿಂಗ್ ರೂಮ್ ಸೇರಿಕೊಂಡಿದ್ದ ಅಶ್ವಿನ್ ಭುಜಕ್ಕೆ ಐಸ್ ಪ್ಯಾಕ್ ಹಾಕಲಾಗಿದ್ದು, ಗಾಯದ ಪರಿಣಾಮ ಹೆಚ್ಚಾಗಿಲ್ಲದ ಪರಿಣಾಮ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡುವ ಮುಂದಿನ ಪಂದ್ಯಕ್ಕೆ ಅವರು ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಐಯ್ಯರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments