“ನನಗೆ ಒಂದು ಚಾನ್ಸ್ ಕೊಡಿ, ನಿರ್ಭಯ ಅತ್ಯಾಚಾರಿಗಳನ್ನು ಗಲ್ಲಿಗೇರಿಸುತ್ತೇನೆ”

ಈ ಸುದ್ದಿಯನ್ನು ಶೇರ್ ಮಾಡಿ

ಶಿಮ್ಲಾ(ಹಿ.ಪ್ರ),ಡಿ.6- ನಿರ್ಭಯ ಪ್ರಕರಣದ ಅತ್ಯಾಚಾರಿಗಳು ಮತ್ತು ಹಂತಕರನ್ನು ತಿಹಾರ್ ಜೈಲಿನಲ್ಲಿ ನೇಣು ಹಾಕಲು ತಮ್ಮನ್ನು ತಾತ್ಕಾಲಿಕವಾಗಿ ನೇಮಿಸಬೇಕೆಂದು ಹಿಮಾಚಲ ಪ್ರದೇಶದ ಸಮಾಜ ಸೇವನಕನೊಬ್ಬ ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.

ಈ ಕುರಿತು ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿರುವ ಶಿಮ್ಲಾದ ಸಮಾಜ ಸೇವಕ ರವಿಕುಮಾರ್, ತಿಹಾರ್ ಜೈಲಿನಲ್ಲಿ ಫಾಸಿ(ನೇಣು ಹಾಕುವ) ಶಿಕ್ಷೆ ನಿರ್ವಹಿಸುವ ವ್ಯಕ್ತಿಯನ್ನು ನೇಮಿಸಿಲ್ಲ. ನಾನು ನಿರ್ಭಯ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುತ್ತೇನೆ. ಇದಕ್ಕೆ ಅನುಮತಿ ನೀಡುವಂತೆ ಕೋರಿದ್ದಾರೆ.

2012ರಲ್ಲಿ ನಡೆದ ನಿರ್ಭಯ ಗ್ಯಾಂಗ್ ರೇಪ್ ಮತ್ತು ಮರ್ಡರ್ ಆಪಾದಿತರಿಗೆ ಇನ್ನು ಪೂರ್ಣ ಪ್ರಮಾಣದಲ್ಲಿ ಶಿಕ್ಷೆಯಾಗಿಲ್ಲ ಎಂದು ವಿಷಾದಿಸಿರುವ ರವಿಕುಮಾರ್, ಇತ್ತೀಚಿನ ದಿನಗಳಲ್ಲಿ ಇಂಥ ಕೃತ್ಯಗಳು ಹೆಚ್ಚಾಗುತ್ತಿವೆ ಎಂಬುದನ್ನು ಉಲ್ಲೇಖಿಸಿದ್ದಾರೆ. ಹೈದರಾಬಾದ್‍ನಲ್ಲಿ ಇಂದು ಮುಂಜಾನೆ ಪಶುವೈದ್ಯೆ ಅತ್ಯಾಚಾರಿಗಳನ್ನು ಪೊಲೀಸರು ಎನ್‍ಕೌಂಟರ್‍ನಲ್ಲಿ ಕೊಂದಿರುವುದನ್ನು ರವಿಕುಮಾರ್ ಸ್ವಾಗತಿಸಿದ್ದಾರೆ.

Facebook Comments