ಬ್ರೇಕಿಂಗ್ : ರೆಪೋದರ ಇಳಿಕೆ ಮಾಡಿದ ಆರ್‌ಬಿಐ, ಯಾರಿಗೆ ಏನು ಲಾಭ..?

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.6- ಆರ್ಥಿಕ ಬೆಳವಣಿಗೆಗೆ ಪುಷ್ಟಿ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ರೆಪೊದರ(ಬಡ್ಡಿದರ)ವನ್ನು ಮತ್ತಷ್ಟು ಇಳಿಸಿದೆ. ಈ ಹಿಂದೆ ಶೇ. 6ರಷ್ಟಿದ್ದ ಬಡ್ಡಿದರವನ್ನು 0.25ರಷ್ಟು ಕಡಿಮೆ ಮಾಡಿದೆ. ಇದರಿಂದ ಪ್ರಸ್ತುತ ಬಡ್ಡಿದರ ಶೇ. 5.75ಕ್ಕೆ ನಿಗದಿಯಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು ಕಡಿಮೆ ಮಾಡಿರುವುದು 9ವರ್ಷಗಳ ಇತಿಹಾಸ ಇದು ಕಡಿಮೆಯಾಗಿದ್ದು, ವಿವಿಧೋದ್ದೇಶಗಳ ಸಾಲ ಸೌಲಭ್ಯಗಳು ಮತ್ತಷ್ಟು ಕಡಿಮೆಯಾಗಲಿದೆ. ಆರ್‍ಬಿಐ ಬಡ್ಡಿದರವನ್ನು ಕಡಿಮೆ ಮಾಡಿರುವುದು ಈ ವರ್ಷದಲ್ಲಿ ಇದು ಮೂರನೇ ಬಾರಿ.

ದೇಶದ ಆರ್ಥಿಕತೆ ಕುಂಠಿತವಾಗುತ್ತಿದೆ ಎಂಬ ಕಳವಳದ ನಡುವೆಯೂ ರೆಪೊದರವನ್ನು ಮತ್ತೆ ಕಡಿಮೆ ಮಾಡಿರುವುದರಿಂದ ಗೃಹಸಾಲ ಸೇರಿದಂತೆ ಇತರ ಉದ್ದೇಶಗಳ ಸಾಲಗಳ ಬಡ್ಡಿಯಲ್ಲಿ ಮತ್ತಷ್ಟು ಇಳಿಮುಖವಾಗಲಿದೆ.

ವಾಣಿಜ್ಯ ರಾಜಧಾನಿ ಮುಂಬೈನಲ್ಲಿಂದು ಆರ್ಥಿಕ ಪ್ರಗತಿ ಕುರಿತ ಆರ್‍ಬಿಐ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ಶಕ್ತಿಕಾಂತ್ ದಾಸ್ ದೇಶದ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಬಡ್ಡಿದರವನ್ನು ಶೇ. 0.25ರಷ್ಟು ಇಳಿಸಲಾಗಿದೆ ಎಂದು ವಿವರಿಸಿದರು.

ಆರ್‍ಬಿಐ ದೇಶದ ಆರ್ಥಿಕ ಬೆಳವಣಿಗೆಯನ್ನು ಸುಧಾರಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಿದೆ. ತನ್ನ ಭವಿಷ್ಯದ ಹಣಕಾಸು ನೀತಿ ವಿತ್ತೀಯ ಪ್ರಗತಿಗೆ ಉತ್ತೇಜನ ನೀಡಲಿದೆ ಎಂದು ದಾಸ್ ಹೇಳಿದರು.

ಆರ್ಥಿಕತೆ ಕುಂಠಿತವಾಗಿದೆ ಎಂಬ ಕಳವಳ ಪರಿಸ್ಥಿತಿಯಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಒಟ್ಟು ದೇಶಿಯ ಉತ್ಪನ್ನ (ಜೆಡಿಪಿ)ಪ್ರಸ್ತುತ ವಿತ್ತೀಯ ವರ್ಷದಲ್ಲಿ ಶೇ. 7ರಷ್ಟು ದಾಖಲಾಗಲಿದೆ ಎಂದು ಆರ್‍ಬಿಐ ಗೌರ್ನರ್ ಮುನ್ಸೂಚನೆ ನೀಡಿದರು. ಈ ಹಿಂದೆ ಜೆಡಿಪಿ 7.2ರಷ್ಟು ಹೆಚ್ಚಾಗಲಿದೆ ಎಂದು ಊಹಿಸಲಾಗಿತ್ತು.

2019-20ನೇ ಹಣಕಾಸು ವರ್ಷದ ಮೊದಲಾರ್ಧ ಭಾಗದಲ್ಲಿ ಹಣದುಬ್ಬರವು ಶೇ. 3ರಿಂದ 3.1ರಷ್ಟು ಹೆಚ್ಚಾಗಿದೆ. ಸರ್ಕಾರವು ಇದನ್ನು ಶೇ. 2ರಿಂದ 6ರಷ್ಟು ಹೆಚ್ಚಾಗುವ ಸಾಧ್ಯತೆಯಿಂದೆ ತಿಳಿಸಿತ್ತು.

ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿನ್ನಡೆಯಾಗಿದ್ದರು ಮತ್ತು ಪ್ರಗತಿಯಲ್ಲಿ ಏರುಪೇರಾಗಿದ್ದರು.ಭಾರತದ ಆರ್ಥಿಕ ಸುಧಾರಣೆ ಉತ್ತಮವಾಗಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಣೆಯಾಗಲಿದೆ ಎಂದು ಶಕ್ತಿಕಾಂತ್‍ದಾಸ್ ಹೇಳಿದರು.

ಹಣದುಬ್ಬರ ನಿಯಂತ್ರಣಕ್ಕೆ ಮತ್ತು ಆರ್ಥಿಕ ಬೆಳವಣಿಗೆಗೆ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಗೆ ಆರ್‍ಬಿಐ ಸಂಪೂರ್ಣ ಸಹಕಾರ ನೀಡಲಿದೆ. ಸರ್ಕಾರದ ಆರ್ಥಿಕ ಬೆಳವಣಿಗೆ ಗುರಿ ಮುಟ್ಟುವುದಕ್ಕೆ ಪೂರಕವಾದ ಭವಿಷ್ಯದ ಹಣಕಾಸು ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin