ಗೃಹ, ವಾಹನ ಸಾಲಗಳ ಪಡೆದವರಿಗೆ ಆರ್‌ಬಿಐನಿಂದ ಗುಡ್ ನ್ಯೂಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ.4-ದೇಶದ ಆರ್ಥಿಕತೆಗೆ ಚೈತನ್ಯ ತುಂಬಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಮ್ಮ ಅಲ್ಪಾವಧಿ ಬಡ್ಡಿ ದರಗಳನ್ನು (ರೆಪೋ) ಮತ್ತೆ ಕಡಿತಗೊಳಿಸಿದೆ. ರೆಪೋದರವನ್ನು ಶೇ.0.25ರಷ್ಟು ಇಳಿಸಲಾಗಿದ್ದು, ಇದರಿಂದ ಗೃಹ, ವಾಹನ ಸಾಲಗಳ ಮೇಲಿನ ಬಡ್ಡಿ ದರ ಕಡಿಮೆಯಾಗಲಿದೆ. ಇದು ಈ ವರ್ಷದ ಅವಧಿಯಲ್ಲಿ ಆರ್‌ಬಿಐನ ಐದನೇ ಬಡ್ಡಿ ದರ ಕಡಿತವಾಗಿದೆ.

ಮುಂಬೈನಲ್ಲಿ ಇಂದು ನಡೆದ ಹಣಕಾಸು ನೀತಿ ಸಮಿತಿಯ(ಎಂಪಿಸಿ) ನಾಲ್ಕನೇ ದ್ವೈಮಾಸಿಕ ಸಭೆಯಲ್ಲಿ ಅಲ್ಪಾವಧಿ ಬಡ್ಡಿದರ ಕಡಿತವನ್ನು ಘೋಸಲಾುತು.  ಇದರಿಂದ ಮನೆ ಮತ್ತು ವಾಹನಗಳನ್ನು ಖರೀದಿಸುವ ಗ್ರಾಹಕರ ಮೇಲೆ ವಿಧಿಸಲಾಗುವ ಬಡ್ಡಿದರದಲ್ಲಿ ಮತ್ತಷ್ಟು ಇಳಿಕೆಯಾಗಿದೆ.

ಈ ವರ್ಷ ಒಟ್ಟು ಐದು ಬಾರಿ ರೆಪೋದರಗಳನ್ನು ಇಳಿಸಿರುವ ಆರ್‌ಬಿಐ ದೇಶದ ಆರ್ಥಿಕ ಪ್ರಗತಿಗೆ ಕೇಂದ್ರ ಸರ್ಕಾರಕ್ಕೆ ಸಾಥ್ ನೀಡಿದೆ. ಸಮಿತಿಯ ಕೆಲವು ಪರಾಮರ್ಶೆ ನೀತಿಗಳನ್ನು ಆರ್‌ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಪ್ರಕಟಿಸಿದರು. ಕೇಂದ್ರ ಸರ್ಕಾರ ಈಗಾಗಲೇ ದೇಶೀಯ ಸಂಸ್ಥೆಗಳ ಮೇಲಿನ ಕಾಪೆರ್ರೇಟ್ ತೆರಿಗೆಯಲ್ಲಿ ಬಾರೀ ಕಡಿತ ಮಾಡಿದೆ. ದೇಶಿ ಹೂಡಿಕೆದಾರರ ಮೇಲೆ ವಿಧಿಸಿದ್ದ ಸಚಾರ್ಜ್ ರದ್ದು ಸೇರಿದಂತೆ ಹಲವಾರು ಉಪಕ್ರಮಗಳನ್ನು ಪ್ರಕಟಿಸಿದೆ.

ಇದಕ್ಕೆ ಪೂರಕವಾಗುವ ರೀತಿಯಲ್ಲಿ ನಾಲ್ಕನೇ ದ್ವೈಮಾಸಿಕ ಹಣಕಾಸು ನೀತಿಯನ್ನು ರೂಪಿಸಲಾಗಿದೆ ಎಂದು ದಾಸ್ ವಿವರಿಸಿದರು. ಹಣದುಬ್ಬರ ನಿಯಂತ್ರಣ ಮಟ್ಟದಲ್ಲಿದೆ. ಇದರಿಂದ ಹಣಕಾಸು ನೀತಿಯನ್ನು ಮತ್ತಷ್ಟು ಸರಳೀಕರಣಗೊಳಿಸಲು ಅವಕಾಶ ಲಭಿಸಿದೆ ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಬ್ಯಾಂಕುಗಳು ಮತ್ತು ಗ್ರಾಹಕರಿಗೆ ಹೊರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ದೇಶದ ಬ್ಯಾಂಕಿಂಗ್ ವ್ಯವಸ್ಥೆ ಸ್ಥಿರ ಮತ್ತು ಸದೃಢವಾಗಿದೆ. ಗ್ರಾಹಕರು ಆತಂಕ ಮತ್ತು ಗೊಂದಲಕ್ಕೆ ಒಳಗಾಗುವ ಅಗತ್ಯಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Facebook Comments