ಆರ್‌ಬಿಐ ಉಪ ಗೌರ್ನರ್ ವಿರಳ್ ಆಚಾರ್ಯ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.24-ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ನ ಉಪ ಗೌರ್ನರ್ ವಿರಳ್ ಆಚಾರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಸೇವಾವಧಿ ಪೂರ್ಣಗೊಳ್ಳುವುದಕ್ಕೆ ಕೆಲವು ತಿಂಗಳುಗಳು ಇರುವಾಗಲೇ ಆಚಾರ್ಯ ಜವಾಬ್ದಾರಿಯುತ ಹುದ್ದೆಯಿಂದ ನಿರ್ಗಮಿಸಿದ್ದಾರೆ.

ಆರ್‌ಬಿಐ  ಗೌರ್ನರ್ ಆಗಿದ್ದ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ ಎಂಟು ತಿಂಗಳ ಬಳಿಕ ಡೆಪ್ಯೂಟಿ ಗೌರ್ನರ್ ವಿರಳ್ ಆಚಾರ್ಯ ತ್ಯಾಗಪತ್ರ ನೀಡಿದ್ದಾರೆ.
ದೇಶೀಯ ಒಟ್ಟು ಉತ್ಪನ್ನ(ಜಿಡಿಪಿ) ಐದು ವರ್ಷಗಳಲ್ಲೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿರುವ ಹಾಗೂ ಜುಲೈ 5ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆಯಾಗುವುದಕ್ಕೆ ಮುನ್ನವೇ ವಿರಳ್ ಆಚಾರ್ಯ ಆರ್‌ಬಿಐ ಡೆಪ್ಯೂಟಿ ಗೌರ್ನರ್ ಹುದ್ದೆಯಿಂದ ನಿರ್ಗಮಿಸಿದ್ದಾರೆ.

ತಮ್ಮ ರಾಜೀನಾಮೆಗೆ ವೈಯಕ್ತಿಕ ಕಾರಣ ನೀಡಿರುವ ಅವರು, ನ್ಯೂಯಾರ್ಕ್ ಯೂನಿವರ್ಸಿಟಿ ಸ್ಕೂಲ್ ಆಫ್ ಬ್ಯುಸಿನೆಸ್‍ನಲ್ಲಿ ತಮ್ಮ ವೃತ್ತಿ ಮುಂದುವರಿಸಲಿದ್ದಾರೆ. ಮುಂದಿನ ವರ್ಷ ಫೆಬ್ರವರಿಗೆ ಅವರು ಅಲ್ಲಿಗೆ ತೆರಳಬೇಕಿತ್ತು.

ಆದರೆ ಆಗಸ್ಟ್‍ನಲ್ಲೇ ನ್ಯೂಯಾರ್ಕ್‍ನಲ್ಲಿ ತಮ್ಮ ಜೀವನದ ಉಳಿದ ಅವಧಿಯನ್ನು ಕಳೆಯಲು ನಿರ್ಧರಿಸಿದ್ಧಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. 2016ರಲ್ಲಿ ಊರ್ಜಿತ್ ಪಟೇಲ್ ಅವರು ಆರ್‍ಬಿಐ ಗೌರ್ನರ್ ಆಗಿ ಪದೋನ್ಮತಿ ಪಡೆದ ನಂತರ ನೇಮಕಗೊಂಡ ನಾಲ್ವರು ಉಪ ಗೌರ್ನರ್‍ಗಳಲ್ಲಿ ವಿರಳ್ ಆಚಾರ್ಯ ಕೂಡ ಒಬ್ಬರಾಗಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ