ಐಪಿಎಲ್‍2020: ಆರ್‌ಸಿಬಿ- ಮುಂಬೈ ನಡುವೆ ಉದ್ಘಾಟನಾ ಪಂದ್ಯ

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಆ. 31- ಐಪಿಎಲ್‍ಗೆ ಕೊರೊನಾ ಕಾಟ ಮುಂದುವ ರೆದಿರುವುದರಿಂದ ವೇಳಾಪಟ್ಟಿ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಆಯೋಜಿಸಿದ್ದ ಉದ್ಘಾಟನಾ ಪಂದ್ಯವನ್ನು ಕೈಬಿಟ್ಟು ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರೋಹಿತ್‍ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ನಡುವೆ ನಡೆಸಲು ಕೂಡ ಚಿಂತನೆ ನಡೆದಿದೆ.

ಚೆನ್ನೈ ಸೂಪರ್‍ಕಿಂಗ್ಸ್ ತಂಡದ ಬೌಲರ್ ರಾಹುಲ್ ಚಾಹರ್ ಹಾಗೂ ಋತುರಾಜ್ ಗಾಯಕ್ವಾಡ್‍ಗೆ ಕೊರೊನಾ ಸೋಂಕು ತಗುಲಿರುವುದರಿಂದ ಐಪಿಎಲ್ ವೇಳಾಪಟ್ಟಿ ತಡವಾಗಿರು ವುದಲ್ಲದೇ ಆ ತಂಡದ ಪಂದ್ಯ ಗಳಲ್ಲೂ ಏರುಪೇರಾಗುವ ಲಕ್ಷಣಗಳಿವೆ.

ಈ ನಡುವೆ ಐಪಿಎಲ್ 13ರ ರಂಗೇರಿಸಲು ಆರ್‍ಸಿಬಿ- ಮುಂಬೈ ನಡುವೆ ಉದ್ಘಾಟನಾ ಪಂದ್ಯ ನಡೆಸಲು ಐಪಿಎಲ್ ಅಧ್ಯಕ್ಷ ರೋಜರ್‍ಬಿನ್ನಿ ಚಿಂತಿಸಿದ್ದಾರೆ.

Facebook Comments