ವಿದೇಶಿ ವೇಗಿಗಳ ಮೇಲೆ ಆರ್‌ಸಿಬಿ ಕಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ 14- ಐಪಿಎಲ್ ಆವೃತ್ತಿ ಆರಂಭವಾದಾಗಿನಿಂದಲೂ ಈ ಬಾರಿ ನಮ್ಮ ಮೆಚ್ಚಿನ ತಂಡ ಆರ್‍ಸಿಬಿ ಕಪ್ ಗೆದ್ದೇ ಗೆಲ್ಲುತ್ತದೆ ಎಂಬ ಅಭಿಮಾನಿಗಳ ನಿರೀಕ್ಷೆಯನ್ನು ಈ ಬಾರಿಯಾದರೂ ನಿಜವಾಗಿಸಲೂ ಆರ್‍ಸಿಬಿ ಫ್ರಾಂಚೈಸಿಗಳು ಚಿಂತಿಸಿದ್ದಾರೆ. ಆರ್‍ಸಿಬಿ ತಂಡದಲ್ಲಿ ಎಬಿಡಿವಿಲಿಯರ್ಸ್, ವಿರಾಟ್ ಕೊಹ್ಲಿಯಂತಹ ಸ್ಟಾರ್ ಬ್ಯಾಟ್ಸ್‍ಮನ್‍ಗಳಿದ್ದರೂ ಕೂಡ ಪ್ರತಿ ಬಾರಿ ಡೆತ್ ಓವರ್‍ಗಳಲ್ಲಿ ಹಿನ್ನೆಡೆ ಅನುಭವಿಸುವ ಮೂಲಕ ಪಂದ್ಯವನ್ನು ಕೈಚೆಲ್ಲುತ್ತ ಬಂದಿರುವುದರಿಂದ ಈ ಬಾರಿ ಸ್ಟಾರ್ ಬೌಲರ್‍ಗಳತ್ತ ಚಿತ್ತ ಹರಿಸಿದೆ.

ಕಳೆದ ಬಾರಿ ಕಳಪೆ ಪ್ರದರ್ಶನ ನೀಡಿದ್ದ ಉಮೇಶ್‍ಯಾದವ್, ಕ್ರಿಸ್‍ಮೋರಿಸ್, ಇಸುರು ಉದಾನಾ, ಡೇಲ್‍ಸ್ಟೇನ್‍ಗೆ ಕೊಕ್ ನೀಡುವ ಸೂಚನೆ ನೀಡಿರುವ ಬೆನ್ನಲ್ಲೇ ಸ್ಟಾರ್ ವೇಗಿಗಳನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್‍ಸಿಬಿ ಫ್ರಾಂಚೈಸಿಗಳು ಚಿಂತಿಸಿದ್ದಾರೆ. ಇತ್ತೀಚೆಗೆ ಉತ್ತಮ ಪ್ರದರ್ಶನ ತೋರುತ್ತಿರುವ ಆಸೀಸ್‍ನ ವೇಗಿ ಮಿಚಲ್ ಸ್ಟ್ರಾಕ್, ನ್ಯೂಜಿಲ್ಯಾಂಡ್ ಕೈಲ್ ಜೇಮಿಸನ್, ಬಾಂಗ್ಲಾದೇಶದ ಮುಸ್ತಫಿಝರ್ ರೆಹಮಾನ್‍ರಂತಹ ಬೌಲರ್‍ಗಳನ್ನು ತನ್ನ ಬಳಗಕ್ಕೆ ಸೇರಿಕೊಂಡು ಬೌಲಿಂಗ್ ವಿಭಾಗವನ್ನು ಬಲಿಷ್ಠಪಡಿಸಿಕೊಳ್ಳಲು ಮುಂದಾಗಿದೆ.

# ಮಿಚಲ್ ಮಿಂಚು:
ಬಾರ್ಡರ್- ಗವಾಸ್ಕರ್ ಟೆಸ್ಟ್‍ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಆಸೀಸ್ ವೇಗಿ ಮಿಚಲ್ ಸ್ಟ್ರಾಕ್ ಅವರೇ ಆರ್‍ಸಿಬಿಯ ಮೊದಲ ಆದ್ಯತೆಯಾಗಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಅವರು 2014 ಹಾಗೂ 2015ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್‍ಸಿಬಿಯಲ್ಲಿ ಸ್ಥಾನ ಪಡೆದು ಡೆತ್ ಬೌಲಿಂಗ್ಗೆ ಬಲ ತುಂಬಿದ್ದರಿಂದ ತಂಡ ಉತ್ತಮ ಪ್ರದರ್ಶನ ತೋರಿತ್ತು. ಐಪಿಎಲ್ 13ರಲ್ಲೂ ಸ್ಟ್ರಾಕ್ ಅನ್ನು ಬಿಕರಿ ಮಾಡಿಕೊಳ್ಳಲು ಆರ್‍ಸಿಬಿ ಫ್ರಾಂಚೈಸಿಗಳು ಚಿಂತಿಸಿದ್ದರಾದರೂ ಅಂತಿಮ ಕ್ಷಣದಲ್ಲಿ ಅವರು ಗಾಯದ ಸಮಸ್ಯೆಯಿಂದ ಹಿಂದೆ ಸರಿದಿದ್ದರು ಆದರೆ ಈ ಬಾರಿ ಅವರನ್ನು ತಮ್ಮ ತಂಡಕ್ಕೆ ಬಿಕರಿ ಮಾಡಿಕೊಂಡು ಡೆತ್ ಬೌಲಿಂಗ್ ಅನ್ನು ಬಲಿಷ್ಠಗೊಳಿಸಿಕೊಳ್ಳಲು ಆರ್‍ಸಿಬಿ ಚಿಂತಿಸಿದೆ.

# ಕೇಲ್‍ಖದರ್:
ನ್ಯೂಜಿಲ್ಯಾಂಡ್‍ನಲ್ಲಿ ಧ್ರುವತಾರೆಯಂತೆ ಮಿನುಗುತ್ತಿರುವ ಯುವ ಬೌಲರ್ ಕೇಲ್ ಜೆಮ್ಮಿಸನ್ ಅವರು ಇತ್ತೀಚೆಗೆ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ, ಅವರ ಬೌಲಿಂಗ್ ಸಾಮಥ್ರ್ಯದಿಂದಲೇ ನ್ಯೂಜಿಲ್ಯಾಂಡ್ ತಂಡವು ವೆಸ್ಟ್‍ಇಂಡೀಸ್, ಪಾಕಿಸ್ತಾನ ತಂಡಗಳ ವಿರುದ್ಧ ವಿರೋಚಿತ ಗೆಲುವು ಸಾಧಿಸಿರುವುದರಿಂದ ಅವರನ್ನು ತಂಡಕ್ಕೆ ಕೂಡಿಸಿಕೊಳ್ಳುವ ಮೂಲಕ ಬೌಲಿಂಗ್ ಲೆನ್‍ಆಪ್‍ಅನ್ನು ಬಲಿಷ್ಠಗೊಳಿಸಲು ಆರ್‍ಸಿಬಿ ತಂಡದ ಫ್ರಾಂಚೈಸಿ ಚಿಂತಿಸಿದ್ದಾರೆ.

ಕೇಲ್ ಎಲ್ಲಾ ಮಾದರಿಗೂ ಒಪ್ಪುವಂತಹ ಆಟಗಾರನಾಗಿದ್ದು ಕೇವಲ 6 ಟೆಸ್ಟ್ ಪಂದ್ಯಗಳಲ್ಲಿ 3 ಸಲ 5 ವಿಕೆಟ್ ಕಬಳಿಸಿದ ಕೀರ್ತಿ ಹೊಂದಿರುವ ಜೆಮ್ಮಿಸನ್ ಸೂಪರ್ ಸ್ಮ್ಯಾಶ್ ಟ್ವೆಂಟಿ-20 ಸರಣಿಯ ಪಂದ್ಯವೊಂದರಲ್ಲಿ 7 ರನ್ ನೀಡಿ 6 ವಿಕೆಟ್ ಕಬಳಿಸಿರುವುದನ್ನು ಗಮನಿಸಿರುವ ಆರ್‍ಸಿಬಿ ಫ್ರಾಂಚೈಸಿಗಳು ಈ ಬಾರಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮುಂದಾಗಿದೆ.
ಜೆಮ್ಮಿಸನ್ ಇದುವರೆಗೂ ಐಪಿಎಲ್‍ನಲ್ಲೂ ಆಡದಿರುವುದರಿಂದ ಅವರನ್ನು ಬಿಕರಿ ಮಾಡಿಕೊಳ್ಳಲು ಇತರ ತಂಡಗಳು ಭಾರೀ ಪೈಪೋಟಿ ನಡೆಸುತ್ತಿವೆ.

# ರೆಹಮಾನ್‍ರಂಗು:
ಬಾಂಗ್ಲಾ ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿರುವ ಮುಸ್ತಪಿಝರ್ ರೆಹಮಾನ್À ತಮ್ಮ ಬೌಲಿಂಗ್ ಚಾಣಾಕ್ಷತೆ ಯಿಂದಲೇ ಹೆಸರಾದ ವರು. ರೆಹಮಾನ್ ಈಗಾಗಲೇ ಸನ್‍ರೈಸರ್ಸ್ ಹೈದ್ರಾಬಾದ್, ಮುಂಬೈ ಇಂಡಿಯನ್ಸ್ ತಂಡಗಳ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದು ಈ ಬಾರಿ ಅವರನ್ನು ಆರ್‍ಸಿಬಿ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳು ಚಿಂತಿಸಿದ್ದಾರೆ.

Facebook Comments