ಶ್ರೇಷ್ಠ ಆಟಗಾರರಿಲ್ಲದೆ ಆರ್‌ಸಿಬಿಗೆ ಹಿನ್ನೆಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ. 20- ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ತಂಡವನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಸ್ಫೋಟಕ ಆಟಗಾರ ವಿರಾಟ್ ಕೊಹ್ಲಿ ಐಪಿಎಲ್‍ನಲ್ಲಿ ಎಡವುತ್ತಿರುವುದರಿಂದ ಆ ತಂಡದ ಮೇಲೆ ಅತಿರಿಕ್ತ ಪರಿಣಾಮ ಬೀರಿ ಬ್ರ್ಯಾಂಡ್ ಮೌಲ್ಯ ಕುಸಿತಗೊಂಡಿದೆ.

ಐಪಿಎಲ್‍ನ ಆರಂಭಿಕ ಋತುವಿ ನಲ್ಲಿ ಅನಿಲ್‍ಕುಂಬ್ಳೆ, ರಾಹುಲ್‍ದ್ರಾವಿಡ್, ರಾಬಿನ್ ಉತ್ತಪ್ಪ, ಮನೀಷ್‍ಪಾಂಡೆರಂತಹ ಸ್ಥಳೀಯ ಆಟಗಾರರನ್ನು ಹೊಂದಿದ್ದರೂ ಆ ಋತುವಿನಲ್ಲೇ ಹೀನಾಯ ಸೋಲು ಕಂಡು ಕೊನೆಯ ಸ್ಥಾನಕ್ಕೇ ಕುಸಿದಿದ್ದರೂ ಅದರ ಬ್ರ್ಯಾಂಡ್ ಮೌಲ್ಯವು ಇತರ ತಂಡಗಳಿಗಿಂತ ಉತ್ತಮವಾಗಿಯೇ ಇತ್ತು.

ಅನಿಲ್‍ಕುಂಬ್ಳೆಯೇ ತಂಡದ ಸಾರಥ್ಯವನ್ನು ವಹಿಸಿಕೊಂಡಿದ್ದರಿಂದ ಸ್ಥಳೀಯ ಕಂಪೆನಿಗಳು ಕೂಡ ಆರ್‍ಸಿಬಿಯತ್ತ ಒಲವು ತೋರಿದ್ದರಿಂದ ಅದರ ಬ್ರ್ಯಾಂಡ್ ಮೌಲ್ಯ ಸುಧಾರಿಸಿತ್ತು.
ಐಪಿಎಲ್‍ನ ಎರಡನೇ ಋತುವಿನಲ್ಲಿ ಆರ್‍ಸಿಬಿ ಗಿಲ್‍ಕ್ರಿಸ್ಟ್ ನಾಯಕತ್ವದ ಡೆಕ್ಕನ ಚಾರ್ಜಾರ್ಸ್‍ನ ಎದುರು ಸೋತು ರನ್ನರ್ ಅಪ್ ಆಗಿತ್ತು.

ಅನಿಲ್‍ಕುಂಬ್ಳೆ ನಂತರ ಆರ್‍ಸಿಬಿ ನಾಯಕತ್ವವನ್ನು ವಹಿಸಿಕೊಂಡ ನ್ಯೂಜಿಲೆಂಡ್ ನ ಖ್ಯಾತ ಸ್ಪಿನ್ನರ್ ಡೇನಿಯಲ್ ವಿಟೋರಿ ನಾಯಕತ್ವದಲ್ಲೂ ಕೂಡ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 5 ರನ್‍ಗಳಿಂದ ಸೋತು ರನ್ನರ್ ಅಪ್ ಆಗಿದ್ದರೂ ಕೂಡ ತಂಡದಲ್ಲಿ ಕ್ರಿಸ್‍ಗೇಲ್, ವಿರಾಟ್ ಕೊಹ್ಲಿಯಂತಹ ಘಟಾನುಘಟಿ ಆಟಗಾರರಿದ್ದರಿಂದ ಆಗಲೂ ತಂಡವನ್ನು ಪ್ರೋತ್ಸಾಹಿಸಲು ಪ್ರತಿಷ್ಠಿತ ಕಂಪೆನಿಗಳು ಪ್ರೋತ್ಸಾಹಿಸಿ ದ್ದವು.

ವಿರಾಟ್‍ಕೊಹ್ಲಿ ಸಾರಥ್ಯ ವಹಿಸಿಕೊಂಡ ನಂತರ ಸನ್‍ರೈಸರ್ಸ್ ಹೈದ್ರಾಬಾದ್ ತಂಡದ ವಿರುದ್ಧ ಮತ್ತೊಮ್ಮೆ ರನ್ನರ್‍ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡರೂ ಕೂಡ ಕ್ರಿಸ್‍ಗೇಲ್, ಎಬಿಡಿವಿಲಿಯರ್ಸ್, ಕೆ.ಎಲ್.ರಾಹುಲ್‍ರಂತಹ ಘಟಾನುಘಟಿ ಆಟಗಾರರಿದ್ದರಿಂದ ಆ ಋತುವಿನಲ್ಲೂ ಕೂಡ ಆರ್‍ಸಿಬಿಯ ಮೌಲ್ಯ ಉತ್ತಮವಾಗಿಯೇ ಇತ್ತು.

ಆದರೆ ಇತ್ತೀಚಿನ ಐಪಿಎಲ್ ಋತುವಿನಲ್ಲಿ ವಿರಾಟ್‍ಕೊಹ್ಲಿ, ಎಬಿಡಿವಿಲಿಯರ್ಸ್ ಬಿಟ್ಟರೆ ವಿಶ್ವಮಟ್ಟ ದಲ್ಲಿ ಹೆಸರು ಮಾಡಿರುವ ಆಟಗಾರರ ಕೊರತೆ ಕಂಡುಬರುತ್ತಿರುವುದರಿಂದ ಈಗ ಆರ್‍ಸಿಬಿಯ ಬ್ರ್ಯಾಂಡ್ ಮೌಲವು ಕೂಡ ಕುಸಿಯುತ್ತಿದೆ.

2018ರಲ್ಲಿ 647 ಕೋಟಿ ರೂ. ಇದ್ದ ಆರ್‍ಸಿಬಿ ತಂಡದ ಮೌಲ್ಯವು 2019ರಲ್ಲಿ 595 ಕೋಟಿಗೆ ಇಳಿದಿರುವುದರಿಂದ ಮುಂದಿನ ಐಪಿಎಲ್ ಋತುವಿನಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಆರ್‍ಸಿಬಿಯೂ ಹಣಕಾಸಿನ ತೊಂದರೆಯನ್ನು ಅನುಭವಿಸುವುದರಿಂದ ತಂಡದ ಫಲಿತಾಂಶವು ಮತ್ತಷ್ಟು ಅಧಪತನಕ್ಕೆ ಕುಸಿಯುವ ಸೂಚನೆಗಳಿವೆ.

Facebook Comments

Sri Raghav

Admin