ಕೆಕೆಆರ್ ಮಣಿಸಲು ಆರ್‌ಸಿಬಿ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

ಶಾರ್ಜಾ, ಅ.11- ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿ ಕೊಂಡಿರುವ ವಿರಾಟ್ ಕೊಹ್ಲಿ ಸಾರಥ್ಯದ ಆರ್‌ಸಿಬಿ ಆಟಗಾರರು ಇಂದಿಲ್ಲಿ ನಡೆಯಲಿರುವ ಎಲಿಮೆನೇಟರ್ ಪಂದ್ಯದಲ್ಲಿ ಬಲಿಷ್ಠ ಕೆಕೆಆರ್ ತಂಡವನ್ನು ಮಣಿಸುವ ಮೂಲಕ ಕ್ವಾಲಿಫೈಯರ್ ಆಗುವತ್ತ ಚಿತ್ತ ಹರಿಸಿದ್ದಾರೆ.

ಚೆನ್ನೈನ ಎಂ.ಎ.ಚಿದಾಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಆರ್‌ಸಿಬಿ ತಂಡವು 204 ರನ್ ಗಳಿಸುವ ಮೂಲಕ ಕೆಕೆಆರ್ ಬೌಲರ್‍ಗಳ ವಿರುದ್ಧ ಪ್ರಾಬಲ್ಯ ಮೆರೆದು 38 ರನ್‍ಗಳ ಗೆಲುವು ಸಾಸಿದ್ದರಾದರೂ ಅಬುದಾಬಿಯಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ವಿರಾಟ್ ಪಡೆ ಕೇವಲ 92 ರನ್‍ಗಳಿಗೆ ಸರ್ವಪತನ ಕಂಡಿದ್ದರಿಂದ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡದ ಬ್ಯಾಟ್ಸ್‍ಮನ್‍ಗಳಿಂದ ಉತ್ತಮ ರನ್ ಹೊಳೆ ಹರಿದು ಬರಬೇಕಾಗಿದೆ.

ಆದರೆ ಕಳೆದ ಕಳೆದೆರಡು ಪಂದ್ಯಗಳಿಂದ ಆರ್‍ಸಿಬಿಯ ಆಟಗಾರರಾದ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಮಧ್ಯಮ ಕ್ರಮಾಂಕದ ಆಟಗಾರ ಎಬಿಡಿವಿಲಿಯರ್ಸ್‍ರ ಬ್ಯಾಟ್‍ನಿಂದ ರನ್‍ಗಳ ಸುರಿಮಳೆ ಸುರಿಯದಿದ್ದರೂ ಕೂಡ ಶಿಖರ್ ಭರತ್ ಹಾಗೂ ಗ್ಲೆನ್ ಮ್ಯಾಕ್ಸ್‍ವೆಲ್ ಅವರು ರನ್‍ಗಳ ಸುರಿಮಳೆ ಸುರಿಸುತ್ತಿದ್ದಾರೆ, ಇಂದಿನ ಪಂದ್ಯದಲ್ಲಿ ತಂಡದಲ್ಲಿರುವ ಸ್ಟಾರ್ ಬ್ಯಾಟ್ಸ್‍ಮನ್‍ಗಳು ರನ್‍ಗಳ ಸುರಿಮಳೆ ಸುರಿಸಿದರೆ ಬೃಹತ್ ಮೊತ್ತವನ್ನು ಕಲೆ ಹಾಕಬಹುದು.

ಇನ್ನು ಬೌಲಿಂಗ್‍ನಲ್ಲಿ ವೇಗಿ ಹರ್ಷಲ್ ಪಟೇಲ್(30 ವಿಕೆಟ್) ಅವರು ರನ್‍ಗಳು ಬಿಟ್ಟುಕೊಟ್ಟಿದ್ದರೂ ಕೂಡ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಆಸರೆಯಾಗಿದ್ದರೆ, ಇವರಿಗೆ ಸಾಥ್ ನೀಡುವಂತೆ ಬೌಲಿಂಗ್ ಮಾಡುತ್ತಿರುವ ಸಿರಾಜ್, ಚಹಾಲ್ ಅವರು ಕೂಡ ಇಂದಿನ ಪಂದ್ಯದಲ್ಲಿ ಕೆಕೆಆರ್ ಬ್ಯಾಟ್ಸ್‍ಮನ್‍ಗಳಿಗೆ ಲಗಾಮು ಹಾಕಲು ಸಜ್ಜಾಗಿದ್ದಾರೆ.

ಕೆಕೆಆರ್ ತಂಡದಲ್ಲೂ ಕೂಡ ವೆಂಕಟೇಶ್ ಅಯ್ಯರ್, ನಿತಿನ್ ರಾಣಾ, ಶುಭಮನ್ ಗಿಲ್, ದಿನೇಶ್ ಕಾರ್ತಿಕ್, ಇಯಾನ್ ಮಾರ್ಗನ್ ರನ್‍ಗಳ ಸುರಿಮಳೆ ಸುರಿಸಲು ಕಾಯುತ್ತಿದ್ದು, ಕಳೆದ ಕೆಲವು ಪಂದ್ಯಗಳಿಂದ ದೂರ ಉಳಿದಿದ್ದ ರಸೆಲ್ ತಂಡಕ್ಕೆ ಮರಳಿರುವುದು ಬ್ಯಾಟಿಂಗ್ ಬಲ ಮತ್ತಷ್ಟು ಹೆಚ್ಚಿದೆ.
ಬೌಲರ್‍ಗಳಾದ ನರೇನ್, ಚಕ್ರವರ್ತಿ, ಫಾಗ್ರ್ಯೂಸನ್ ಆರ್‍ಸಿಬಿ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಬ್ರೇಕ್ ಹಾಕಲು ಕಾಯುತ್ತಿದ್ದು, ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ಜಯಿಸುವವರು ಡೆಲ್ಲಿ ಕ್ಯಾಪಿಟಲ್ಸ್ ನ ಸವಾಲು ಎದುರಿಸಲಿದ್ದಾರೆ.

Facebook Comments