ಆರ್‌ಸಿಬಿ ಮಹಿಳಾ ಕ್ರೀಡಾ ಮಸಾಜ್ ಥೆರಫಿಸ್ಟ್ ಆಗಿ ನವನೀತಾ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ. 18- ಅತಿರಥ ಮಹಾರಥ ಆಟಗಾರರನ್ನು ಹೊಂದಿದ್ದರೂ ಐಪಿಎಲ್ ಚಾಂಪಿಯನ್ಸ್ ಆಗುವಲ್ಲಿ ಎಡವುತ್ತಿರುವ ಆರ್‌ಸಿಬಿ ತಂಡವು ಮುಂಬರುವ ಆವೃತ್ತಿಗೆ ಸಾಕಷ್ಟು ಬದಲಾವಣೆಯನ್ನು ಮಾಡಿಕೊಂಡಿದ್ದು ನವನೀತಾ ಗೌತಮ್ ಎಂಬುವವರನ್ನು ಕ್ರೀಡಾ ಮಸಾಜ್ ಥೆರಫಿಸ್ಟ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ.

ಆರ್‌ಸಿಬಿ ತಂಡದ ಮುಖ್ಯ ತರಬೇತುದಾರ ಡೇನಿಯಲ್ ವಿಟೋರಿಗೂ ಕೊಕ್ ನೀಡಿರುವುದೇ ಅಲ್ಲದೆ ಆಟಗಾರರ ಫಿಟೆನೆಸ್ ಬಗ್ಗೆಯೂ ಗಮನ ಹರಿಸಲಾಗಿದೆ. ತಂಡದ ಮುಖ್ಯ ಫಿಸಿಯೋಥೆರಫಿ ಇವಾನ್ ಸ್ಪೀಚ್ಲಿ ಮತ್ತು ಬಸು ಶಂಕರ್ ಅವರೊಂದಿಗೆ ನವನೀತ ಕೂಡ ತಂಡಕ್ಕೆ ಬೇಕಾದ ಮಾರ್ಗದರ್ಶನ, ತಯಾರಿ, ದೈಹಿಕ ಸಾಮಥ್ರ್ಯ ಸೇರಿದಂತೆ ಮಸಾಜ್ ಥೆರಫಿಯನ್ನು ನೋಡಿಕೊಳ್ಳಲಿದ್ದಾರೆ.

ಆರ್‌ಸಿಬಿ ತಂಡದ ಮುಖ್ಯಸ್ಥ ಸಂಜೀವ್ ಚುರಿವಾಲ ಮಾತನಾಡಿ, ಇದೇ ಮೊದಲ ಬಾರಿಗೆ ಪುರುಷರ ತಂಡಕ್ಕೆ ನವನೀತ ಎಂಬ ಮಹಿಳಾ ಫಿಸಿಯೋಧೆರಪಿಸ್ಟ್ ಅನ್ನು ಆಯ್ಕೆ ಮಾಡಿಕೊಂಡಿರುವುದು ಸಂತಸ ತಂದಿದೆ. ತಂಡದ ಗೆಲುವಿನಲ್ಲಿ ಇದು ಕೂಡ ಪ್ರಮುಖ ಪಾತ್ರ ವಹಿಸಲಿದೆ, ಇದು ಮಹಿಳೆಯರು ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿದ್ದು ಅವರಿಗೆ ಪುರುಷರಷ್ಟೇ ಮಾನ್ಯತೆ ನೀಡಬೇಕೆಂಬ ಉದ್ದೇಶದಿಂದ ಈ ನಿರ್ಣಯವನ್ನು ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.

13ನೆ ಆವೃತ್ತಿಯ ಐಪಿಎಲ್‍ಗೆ ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಲಿದೆ.

Facebook Comments