“ನಾನು ಹೆದರಲ್ಲ, ಸಿಬಿಐ ತನಿಖೆ ಎದುರಿಸುತ್ತೇನೆ” : ರಿಯಾ ಚಕ್ರವರ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಆ.19- ನಾನು ಸಿಬಿಐಗೆ ಹೆದರುವುದಿಲ್ಲ. ತನಿಖೆ ಎದುರಿಸುತ್ತೇನೆ. ಸತ್ಯ ಸಂಗತಿ ಬದಲಾಗುವುದಿಲ್ಲ ಎಂದು ಸುಶಾಂತ್‍ಸಿಂಗ್ ಪ್ರಕರಣದ ಆರೋಪಿ ಮತ್ತು ಚಿತ್ರನಟಿ ರಿಯಾ ಚಕ್ರವರ್ತಿ ಹೇಳಿದ್ದಾರೆ.

ಸುಶಾಂತ್‍ಸಿಂಗ್ ರಜಪೂತ್ ಸಾವು ಪ್ರಕರಣವನ್ನು ಸಿಬಿಐಗೆ ವಹಿಸಿರುವ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಿರುವಾಗ ನಾನು ಸಿಬಿಐ ತನಿಖೆಗೆ ಹೆದರು ವುದಿಲ್ಲ. ಕೇಂದ್ರೀಯ ತನಿಖಾದಳದಿಂದ ವಿಚಾರಣೆಯನ್ನು ನಾನು ಎದುರಿಸುತ್ತೇನೆ ಎಂದು ರಿಯಾ ಹೇಳಿದ್ದಾರೆ.

ಸತ್ಯ ಸಂಗತಿ ಯಾವಾಗಲೂ ಬದಲಾಗುವುದಿಲ್ಲ. ಅದು ಹಾಗೆಯೇ ಇರುತ್ತದೆ. ನಾನು ತಪ್ಪು ಮಾಡಿಲ್ಲ. ಹೀಗಾಗಿ ತನಿಖೆಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ರಿಯಾ ಹೇಳಿದ್ದಾರೆ.

ಬಾಲಿವುಡ್ ನಟನಿಂದ 15 ಕೋಟಿ ರೂ.ಗಳನ್ನು ಪಡೆದಿ ರುವ ಮತ್ತು ಸುಶಾಂತ್ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪಕ್ಕೆ ಗುರಿಯಾಗಿರುವ ರಿಯಾ ಈಗಾಗಲೇ ಜಾರಿ ನಿರ್ದೇಶನಾಲಯ ಸೇರಿದಂತೆ ಕೆಲವು ತನಿಖಾ ಸಂಸ್ಥೆಗಳಿಂದ ತೀವ್ರ ವಿಚಾರಣೆಗೆ ಒಳಪಟ್ಟಿದ್ದಾರೆ.

# ಸುಪ್ರೀಂ ಆದೇಶಕ್ಕೆ ಬಾಲಿವುಡ್ ದಿಗ್ಗಜರ ಸ್ವಾಗತ
ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಹಿಂದಿ ಚಿತ್ರರಂಗದ ಖ್ಯಾತ ನಾಮರು , ರಾಜಕೀಯ ಮುಖಂಡರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಸ್ವಾಗತಿಸಿದ್ದಾರೆ.

ಬಾಲಿವುಡ್ ನಟಿಯರಾದ ಕಂಗನಾ ರಣಾವತ್, ಅಂಕಿತ ಲೋಕುಂಡೆ ಸೇರಿದಂತೆ ಅನೇಕ ತಾರೆಯರು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿ ಇದರಿಂದ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ಹೇಳಿದ್ದಾರೆ. ಬಿಜೆಪಿ ಮತ್ತು ಮಿತ್ರ ಪಕ್ಷಗಳು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಸಹ ನ್ಯಾಯಾಲಯದ ಆದೇಶವನ್ನು ಪ್ರಶಂಸಿಸಿದ್ದಾರೆ.

Facebook Comments

Sri Raghav

Admin