ಸಾವಯವ ಕೃಷಿಗೂ ಸೈ ಎಂದ ರಿಯಲ್ ಸ್ಟಾರ್

ಈ ಸುದ್ದಿಯನ್ನು ಶೇರ್ ಮಾಡಿ

ರಿಯಲ್ ಸ್ಟಾರ್ ಉಪೇಂದ್ರ ಯಾವಾ ಗಲೂ ಸದಾ ತನ್ನ ವಿಭಿನ್ನ ಕೆಲಸ ಗಳಿಂದಲೇ ಹೆಸರಾದವರು.  ಅವರ ನಿರ್ದೇಶನದ ಚಿತ್ರಗಳು ಎಂದರೆ ಎಲ್ಲರೂ ಕಾಯುತ್ತಿರುತ್ತಾರೆ. ಸದ್ಯ ಉಪ್ಪಿ ರಾಜಕೀಯ ಕ್ಷೇತ್ರ ಹಾಗೂ ಸಿನಿಮಾ ಕ್ಷೇತ್ರ ಎರಡರಲ್ಲೂ ಸಹ ಬ್ಯುಸಿಯಾಗಿದ್ದಾರೆ.

ರಾಜಕೀಯಕ್ಕೆ ಒಂದು ಹೊಸ ರೂಪ ನೀಡಲು ಪ್ರಯತ್ನಿಸುತ್ತಿರುವ ಉಪೇಂದ್ರ ಅವರು ತಮ್ಮ ಹೊಸ ಹೊಸ ಐಡಿಯಾಗಳ ಮೂಲಕವೇ ಜನರ ಮುಂದೆ ಹೋಗುತ್ತಿದ್ದಾರೆ. ಆದರೆ ಇದೀಗ ಅವರು ಚಿತ್ರರಂಗ ಹಾಗೂ ರಾಜಕೀಯವನ್ನು ಹೊರತುಪಡಿಸಿ ಕೃಷಿ ಕ್ಷೇತ್ರದಲ್ಲಿ ಹೊಸ ಅವಿಷ್ಕಾರ ಮಾಡಲು ಹೊರಟಿದ್ದಾರೆ.

ತಮ್ಮ ತೋಟದಲ್ಲಿ ಕೃಷಿಕನಾಗಿ ಬದಲಾಗಿ ದ್ದಾರೆ. ಈ ಮೂಲಕ ಹೊಸ ಕಾಯಕ ಮಾಡಲು ಪ್ರಾರಂಬಿಸಿದ್ದಾರೆ. ತೋಟದಲ್ಲಿ ತಾವೇ ರೈತನಾಗಿ ಕೆಲಸ ಮಾಡುವ ಮೂಲಕ ಒಳ್ಳೇ ಫಸಲನ್ನೂ ಸಹ ತೆಗೆದಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ನಟ, ನಟಿಯರು ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿ ದ್ದರು. ಆದರೆ ನಟ ಉಪೇಂದ್ರ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ವೈಶಿಷ್ಠ್ಯತೆ ಮೆರೆದಿದ್ದಾರೆ. ಅಷ್ಟೇ ಅಲ್ಲ ಕೇವಲ ಎರಡೂವರೆ ತಿಂಗಳಲ್ಲಿ ಉತ್ತಮ ಬೆಳೆಯನ್ನೂ ತೆಗೆದಿದ್ದಾರೆ.

ಹೌದು, ತಮ್ಮ ಹೊಲದಲ್ಲಿ ಸಾವಯವ ಕೃಷಿ ಪದ್ಧತಿಯ ಮೂಲಕ ತರಕಾರಿ, ಹೂವು ಬೆಳೆದಿರುವ ಉಪೇಂದ್ರ ಈ ಕುರಿತ ವಿಡಿಯೋವನ್ನು ಸಾಮಾಜಿಕ ಜಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಪೋಸ್ಟ್ ಮಾಡಿ ಕೆಲ ಸಾಲು ಗಳನ್ನು ಕೂಡ ಬರೆದಿರುವ ಉಪ್ಪಿ, ಅತೀ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ನೈಸರ್ಗಿಕ ಕೃಷಿ ಎಂದು ಹೇಳಿಕೊಂಡಿದ್ದಾರೆ.

ಇದಕ್ಕೆ ಅಭಿಮಾನಿಗಳು ಕಮೆಂಟ್ ಮಾಡಿ, ಹೇಳಿದ್ದನ್ನು ಪ್ರಾಕ್ಟಿಕಲಿ ತೋರಿಸುತ್ತಾರೆ ಉಪ್ಪಿ ಬಾಸ್ ಎಂದಿದ್ದಾರೆ. ಅಲ್ಲದೆ ಮತ್ತೊಬ್ಬರು ಉಪೇಂದ್ರ ಕೇವಲ ನಿರ್ದೇಶನದಲ್ಲಿ ಮಾತ್ರವಲ್ಲ, ಎಲ್ಲದರಲ್ಲೂ ಕ್ರಿಯೇಟಿವಿಟಿ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಉಪ್ಪಿ ತಾವು ಮಾಡಿದ ಕೆಲಸದ ಬಗ್ಗೆ ಹೇಳಿಕೊಂಡಿದ್ದು, ಎರಡೂವರೆ ತಿಂಗಳ ಹಿಂದೆ ನಾವು ಇಲ್ಲಿ ಸಸಿಗಳನ್ನು ನೆಡುತ್ತಿದ್ದಾವು. ಈಗ ಅದರ ಫಲ ಬಂದಿದೆ. ಚೆಂಡು ಹೂವು, ಸೌತೆಕಾಯಿ, ಎರಡು ಬಗೆಯ ಬದನೆಕಾಯಿ ಎಷ್ಟು ಅದ್ಭುತವಾಗಿವೆ ನೋಡಿ. ನಾವು ಯಾವುದೇ ಕ್ರಿಮಿನಾಶಕ, ರಸಗೊಬ್ಬರವನ್ನು ಬಳಕೆ ಮಾಡಿಲ್ಲ. ಕೇವಲ ದನದ ಗೊಬ್ಬರ, ನೀರು ಬಿಟ್ಟು ಬೆಳೆದಿದ್ದೇವೆ. ಹುಳು ಬೀಳಲ್ಲ, ಅಂತಲ್ಲ ಶೇ.5ರಷ್ಟು ಬೆಳೆಗೆ ಹುಳು ಬೀಳುತ್ತದೆ.

ಆದರೆ ನಮ್ಮ ಜೊತೆ ಅವೂ ಬದುಕ ಬೇಕಲ್ಲವೇ, ನಮ್ಮೊಂದಿಗೆ ಹುಳು, ಚಿಟ್ಟೆಗಳು ಸಹ ಇರಬೇಕು. ಕ್ರಿಮಿನಾಶಕ ಹೊಡೆದು ಭೂಮಿ ಹಾಳು ಮಾಡುವುದರ ಜೊತೆಗೆ, ಕೇವಲ ಶೇ.10ರಷ್ಟು ಹೆಚ್ಚು ಇಳುವರಿ ಬರುತ್ತದೆ ಎಂದು ತಪ್ಪು ಕೆಲಸ ಮಾಡುತ್ತೇವೆ. ಇದಾವುದನ್ನೂ ಬಳಸದೆ ಬೆಳೆದು ತೋರಿಸ ಬೇಕೆಂದೇ ನಾನು ಕೃಷಿ ಮಾಡಿದೆ. ಈ ಪದ್ಧತಿ ಯಿಂದ ಬೆಳೆದ ತರಕಾರಿಗಳು ಆರೋಗ್ಯಕ್ಕೂ ಒಳ್ಳೆಯದು ಎಂದು ತಿಳಿಸಿದ್ದಾರೆ.

Facebook Comments