ಬೈಡೆನ್ ಪ್ರಮಾಣವಚನದ ದಿನವೇ ಅಮೆರಿಕದಲ್ಲಿ ಕೊರೋನಾಗೆ 4131 ಮಂದಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜ.22- ಅಮೆರಿಕ ಸಂಯುಕ್ತ ಸಂಸ್ಥಾನದ ನೂತನ ಅಧ್ಯಕ್ಷರ ಪ್ರಮಾಣವಚನ ಸ್ವೀಕರಿಸಿದ ಬುಧವಾರ ಒಂದೇ ದಿನ ದೇಶದಲ್ಲಿ 4,131 ಕೋವಿಡ್-19 ಸಾವು ಪ್ರಕರಣಗಳು ದಾಖಲಾಗಿವೆ. ಇದು ಅಮೇರಿಕಾದಲ್ಲಿ ಒಂದೇ ದಿನ ದಾಖಲಾದ ಅತೀ ಹೆಚ್ಚು ಸಾವಿನ ಪ್ರಕರಣವಾಗಿದ್ದು, ಬುಧವಾರ 178,935 ಜನರಿಗೆ ಕೊರೊನ ಸೋಂಕು ದೃಢ ಪಟ್ಟಿದೆ.

ನೂತನ ವರ್ಷ ಆರಂಭವಾದಾಗಿನಿಂದ ಇದುವರೆಗೆ ಅಮೆರಿಕದಲ್ಲಿ 61 ಸಾವಿರ ಸೋಂಕಿತರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಜ.21ರಿಂದ ಜ.22 ರವರೆಗಿನ 24 ಗಂಟೆಗಳಲ್ಲಿ 4,131 ಸಾವು ಪ್ರಕರಣಗಳು ಪತ್ತೆಯಾಗಿರುವುದು, ಆ ದೇಶದಲ್ಲಿ ಎರಡನೇ ಹಂತ ಸಾಂಕ್ರಾಮಿಕ ರೋಗದ ಹರಡುತ್ತಿರುವ ಸೂಚನೆ ಕಂಡು ಬಂದಿದೆ.

ಕಳೆದ ಎರಡು ವಾರಗಳಲ್ಲಿ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಎಂದಿಗಿಂತ ಶೇ.30 ರಷ್ಟು ಏರಿಕೆಯಾಗಿದೆ. ಒಟ್ಟಾರೆ, ಸೋಂಕಿತ ಸಂಖ್ಯೆ 24.5 ಮಿಲಿಯನ್ ತಲುಪಿದೆ ಎಂಬ ಮಾಹಿತಿಯಿದೆ.

Facebook Comments