ಕೊರೊನಾ ವಿರುದ್ಧ ಹೋರಾಡಿ ಗೆದ್ದ ಶತಾಯುಷಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.27- ಶತಾಯುಷಿಯೊಬ್ಬರು ಕೇವಲ ಒಂಬತ್ತು ದಿನಗಳಲ್ಲೇ ಕೊರೊನಾ ವಿರುದ್ಧ ಗೆದ್ದು ಬೀಗಿದ್ದಾರೆ.  ಕುಮಾರಸ್ವಾಮಿ ಲೇಔಟ್ ನಿವಾಸಿಯಾಗಿರುವ ನೂರು ವರ್ಷದ ವೃದ್ಧೆಗೆ ಕಳೆದ 15ರಂದು ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು.

ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.  ಆಸ್ಪತ್ರೆಗೆ ದಾಖಲಾಗಿ ಕೇವಲ 9 ದಿನಗಳಲ್ಲೇ ಕೊರೊನಾ ವಿರುದ್ಧ ಗೆದ್ದು ಬೀಗಿರುವ ಶತಾಯುಷಿ ವೃದ್ಧೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ.

ಕೇರಳದಲ್ಲಿ ಶತಾಯುಷಿ ದಂಪತಿ ಕೊರೊನಾ ವಿರುದ್ಧ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದರು. ಇದೀಗ ನಗರದ ಶತಾಯುಷಿಯೊಬ್ಬರು ಕೊರೊನಾ ವಿರುದ್ಧ ಗೆದ್ದು ಬೀಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಇದುವರೆಗೂ ಕೊರೊನಾ ಮಹಾಮಾರಿಯ ಸೋಂಕಿಗೆ ಗುರಿಯಾಗುತ್ತಿರುವವರು ಹಾಗೂ ಸಾವನ್ನಪ್ಪುತ್ತಿರುವವರು 60 ವರ್ಷ ಮೇಲ್ಪಟ್ಟವರೇ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಇದೀಗ ಶತಾಯುಷಿಯೊಬ್ಬರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದು ಹಿರಿಯ ಜೀವಿಗಳಲ್ಲಿ ತುಸು ನೆಮ್ಮದಿ ಮೂಡಿಸಿದೆ.

Facebook Comments