ಭಾರತದಲ್ಲಿ ಸತತ 2ನೇ ದಿನವೂ ಕೊರೋನಾ ರೋಗಿಗಳ ಚೇತರಿಕೆ ಪ್ರಮಾಣದಲ್ಲಿ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.11-ದೇಶದಲ್ಲಿ ಕೊರೊನಾ ವೈರಸ್ ರುದ್ರನರ್ತನದೊಂದಿಗೆ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಆತಂಕಕಾರಿ ಏರಿಕೆ ಕಂಡುಬಂದಿದೆ. ಇದೇ ವೇಲೆ ಮತ್ತೊಂದೆಡೆ ರೋಗಿಗಳ ಚೇತರಿಕೆ ಮತ್ತು ಗುಣಮುಖ ಪ್ರಮಾಣದಲ್ಲಿ ಸತತ ಎರಡನೇ ದಿನವೂ ಆಶಾಭಾವನೆ ಮೂಡಿದೆ.

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ನಿನ್ನೆ ಮಧ್ಯರಾತ್ರಿವರೆಗೆ 1,37,448ರಷ್ಟು ವರದಿಯಾಗಿದೆ. ಇದೇ ವೇಳೆ ಈವರೆಗೆ 1,41,028 ಮಂದಿ ಗುಣಮುಖರಾಗಿದ್ದಾರೆ. ಇದು ಕೊರೊನಾ ಸೋಂಕು ತಗುಲಿದರೆ ಸಾವು ಖಚಿತ ಎಂಬ ಭ್ರಮೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಭರವಸೆಯ ಹೊಸ ಆಶಾಕಿರಣವಾಗಿದೆ.

ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.49.21ರಷ್ಟು ವೃದ್ದಿ ಕಂಡುಬಂದಿರುವುದು ಹಾಗೂ ಚೇತರಿಕೆ ಪ್ರಕರಣ ಸಕ್ರಿಯ ಪ್ರಮಾಣಕ್ಕಿಂತ ಸತತ ಎರಡನೇ ದಿನ ಹೆಚ್ಚಾಗಿರುವುದು ಸಮಾಧಾನಕರ ಸಂಗತಿ.

ಮೂರು ದಿನಗಳ ಹಿಂದೆ ಸಕ್ರಿಯ ಮತ್ತು ಚೇತರಿಕೆ ಪ್ರಮಾಣ ಸರಿಸಮನವಾಗಿತ್ತು. ಮೊನ್ನೆಯಿಂದ ಅಕ್ಟಿವ್ ಕೇಸ್‍ಗಳಿಗಿಂತ ರಿಕವರಿ ರೇಟ್‍ನಲ್ಲಿ ವೃದ್ದಿ ಕಂಡುಬಂದು ಇಂದು ಸಹ ಅದು ಮುಂದುವರಿದಿರುವುದು ಜನರಲ್ಲಿ ನಿರಾಳತೆಯ ಭಾವನೆ ಮೂಡಿಸಿದೆ.

Facebook Comments