ಆತಂಕದ ನಡುವೆ ಸ್ವಲ್ಪ ನಿರಾಳತೆ, ಚೇತರಿಕೆ ಪ್ರಮಾಣ ಶೇ.49.90ರಷ್ಟು ವೃದ್ಧಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.13-ದೇಶದಲ್ಲಿ ಕೊರೊನಾ ವೈರಸ್ ಉಗ್ರ ಸ್ವರೂಪ ತಾಳಿದ್ದು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಆತಂಕಕಾರಿ ಏರಿಕೆ ಕಂಡು ಬಂದಿದೆ. ಇದೇ ವೇಳೆ ಮತ್ತೊಂದೆಡೆ ರೋಗಿಗಳ ಚೇತರಿಕೆ ಮತ್ತು ಗುಣಮುಖ ಪ್ರಮಾಣದಲ್ಲಿ ಸತತ ನಾಲ್ಕನೇ ದಿನವೂ ಏರಿಕೆ ಕಂಡು ಬಂದಿದ್ದು, ನಿರಾಳತೆ ಮೂಡಿಸಿದೆ.

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ನಿನ್ನೆ ಮಧ್ಯರಾತ್ರಿವರೆಗೆ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,45,779ಕ್ಕೇರಿದೆ. ಈವರೆಗೆ 1,54,329 ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರು ವವರ ಸಂಖ್ಯೆಯಲ್ಲಿ ಶೇ.49.90ರಷ್ಟು ವೃದ್ದಿ ಕಂಡು ಬಂದಿದೆ, ಚೇತರಿಕೆ ಪ್ರಕರಣ ಸಕ್ರಿಯ ಪ್ರಮಾಣಕ್ಕಿಂತ ಸತತ ನಾಲ್ಕನೇ ದಿನ ಹೆಚ್ಚಾಗಿರುವುದು ಸಮಾಧಾನಕರ ಸಂಗತಿ.

ಈ ಬೆಳವಣಿಗೆಯು ಸಾಂಕ್ರಾಮಿಕ ರೋಗಿಗಳಲ್ಲಿ ಭರವಸೆಯ ಆಶಾಕಿರಣ ಮೂಡಿಸಿದೆ. ಕೊರೊನಾ ಸೋಂಕು ತಗುಲಿದರೆ ಸಾವು ಖಚಿತ ಎಂಬ ಭ್ರಮೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇದು ಒಂದು ಪರಿಣಾಮಕಾರಿ ವಿದ್ಯಮಾನ.

ದೇಶದಲ್ಲಿ ಮೊನ್ನೆ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.49.21ರಷ್ಟು ವೃದ್ಧಿ ಕಂಡು ಬಂದಿತ್ತು. ಇಂದು ಅದು ಶೇ.49.90ಕ್ಕೇರಿದೆ. ಐದು ದಿನಗಳ ಹಿಂದೆ ಸಕ್ರಿಯ ಮತ್ತು ಚೇತರಿಕೆ ಪ್ರಮಾಣ ಸರಿಸಮನವಾಗಿತ್ತು.

ಮೊನ್ನೆಯಿಂದ ಆಕ್ಟಿವ್ ಕೇಸ್‍ಗಳಿಗಿಂತ ರಿಕವರಿ ರೇಟ್‍ನಲ್ಲಿ ವೃದ್ದಿ ಕಂಡು ಬಂದು ನಿನ್ನೆ ಮತ್ತು ಇಂದೂ ಸಹ ಅದು ಮುಂದುವರಿದಿರುವುದು ಜನರಲ್ಲಿ ನಿರಾಳತೆಯ ಭಾವ ಮೂಡಿಸಿದೆ.

Facebook Comments