ವಿಮಾನಗಳು ಹಾರಿದವು..ಜಾರಿದವು.. ಕೆಳಗೆ ಬಿದ್ದವು..!

ಈ ಸುದ್ದಿಯನ್ನು ಶೇರ್ ಮಾಡಿ

ಕೆಲವು ಕ್ರೀಡೆಗಳು ತುಂಬಾ ಗಂಭೀರ ಮತ್ತು ಅಪಾಯಕಾರಿಯಾಗಿ ದ್ದರೆ, ಇನ್ನು ಹಲವು ಮೋಜಿನಾಟ ಮತ್ತು ತಮಾಷೆಯಾಗಿರುತ್ತವೆ. ಮಾಸ್ಕೋದಲ್ಲಿ ನಡೆದ ರೆಡ್ ಬುಲ್ ಫ್ಲಗ್‍ಟ್ಯಾಗ್ ಕಾಂಪಿಟಿಷನ್ ಸ್ಫರ್ಧಾ ಮನೋಭಾವದ ಜೊತೆಗೆ ಮನರಂಜನೆಯಿಂದ ಕೂಡಿತ್ತು. ಈ ಕ್ರೀಡೆಯ ವಿಶೇಷತೆ ಏನು..? ನೀವೇ ನೋಡಿ..!! ರಷ್ಯಾ ರಾಜಧಾನಿ ಮಾಸ್ಕೋದ ಕಾಲುವೆಯೊಂದರಲ್ಲಿ ನಡೆದ ರೆಡ್ ಬುಲ್ ಫ್ಲಗ್‍ಟ್ಯಾಗ್ ಸ್ಪರ್ಧೆ, ಸ್ಪರ್ಧಿಗಳಿಗೆ ಮತ್ತು ವೀಕ್ಷಕರಿಗೆ ಮನರಂಜನೆ ನೀಡಿತು.

ಬಣ್ಣ ಬಣ್ಣದ ಉಡುಗೆ-ತೊಡುಗೆಗಳನ್ನು ತೊಟ್ಟ ಸ್ಪರ್ಧಿಗಳು ತಾವೇ ತಯಾರಿಸಿದ ವಿಮಾನಗಳನ್ನು ಕಾಲುವೆ ಮೇಲೆ ಹಾರಿಸುವ ಚಮತ್ಕಾರ ಪ್ರದರ್ಶಿಸಿದರು. ರಷ್ಯಾದ 38 ತಂಡಗಳು ಈ ಸ್ಫರ್ಧೆಯಲ್ಲಿ ಭಾಗವಹಿಸಿದ್ದವು.

ಮನೆಯಲ್ಲೇ ನಿರ್ಮಿಸಿದ ಮಾನವ ಚಾಲಿತ ವಿಮಾನಗಳನ್ನು ಎತ್ತರದ ವೇದಿಕೆಯಿಂದ ಕಾಲುವೆ ಮೇಲೆ ಹಾರಿಸಬೇಕು. ಆದರೆ ಕೆಲವು ವಿಮಾನಗಳು ಮಾತ್ರ ಹಾರಿದವು. ಹಲವು ಹಾರುವ ಯಂತ್ರಗಳು ಜÁರಿದವು.. ಅನೇಕವು ನೀರಿನೊಳಗೆ ಬಿದ್ದವು. ಇದು ನೋಡುಗರಿಗೆ ಮನರಂಜನೆ ಒದಗಿಸಿತು.

ಈ ವಿಮಾನಗಳು 10 ಮೀಟರ್‍ಗಳಿಗಿಂತ ಉದ್ದ ಇರಬಾರದು ಮತ್ತು 150 ಕೆಜಿಗಳ ಒಳಗೆ ಇರಬೇಕು ಎಂಬುದು ರೆಡ್ ಬುಲ್ ಫ್ಲಗ್‍ಟ್ಯಾಗ್ ಸ್ಪರ್ಧೆಯ ನಿಯಮವಾಗಿತ್ತು. ಫ್ಲಗ್‍ಟ್ಯಾಗ್ ಎಂದರೆ ಜರ್ಮನ್ ಭಾಷೆಯಲ್ಲಿ ಹಾರುವ ದಿನ ಎಂದರ್ಥ. ಆದರೆ ಈ ವಿಮಾನಗಳು ಹಾರದೇ ನೀರಿನಲ್ಲಿ ಬಿದ್ದವು. ಇದು ಜನರಿಗೆ ತಮಾಷೆಯಾಗಿ ಕಂಡಿತು.

ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತಂಡಗಳು ಮೂರು ವಿಭಾಗಗಳಲ್ಲಿ ತಮ್ಮ ಹಾರುವ ಯಂತ್ರಗಳನ್ನು ವಿನ್ಯಾಸಗೊಳಿಸಿದ್ದವು. ಹಾರಾಟದ ಅಂತರ, ಸೃಜನಾತ್ಮಕತೆ ಮತ್ತು ಕಲಾತ್ಮಕತೆ ಈ ಮೂರು ಅಂಶಗಳಿಂದ ಈ ವಿಮಾನಗಳನ್ನು ಡಿಸೈನ್ ಮಾಡಲಾಗಿತ್ತು.

ಆಸ್ಟ್ರಿಯಾ ರಾಜಧಾನಿ ವಿಯೆನ್ನಾದಲ್ಲಿ 1991ರಲ್ಲಿ ಈ ಸ್ಪರ್ಧೆ ಮೊದಲು ಜಾರಿಗೆ ಬಂದಿತು. ನಂತರ ಜನಪ್ರಿಯವಾಗಿ ವಿಶ್ವದ 100ಕ್ಕೂ ಹೆಚ್ಚು ನಗರಗಳಲ್ಲಿ ಈ ಸ್ಪರ್ಧೆ ಪ್ರತಿ ವರ್ಷ ನಡೆಯುತ್ತಿದೆ.

Facebook Comments