3 ಕೋಟಿ ಮೌಲ್ಯದ ರಕ್ತಚಂದನ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಹೊಸಕೋಟೆ, ಜು.22- ತಾಲ್ಲೂಕಿನ ಕಟ್ಟಿಗೇನಹಳ್ಳಿ ಗ್ರಾಮದಲ್ಲಿ ಹೊಸಕೋಟೆ ಡಿವೈಎಸ್‍ಪಿ ಸಖ್ರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಿರುಮಲಶೆಟ್ಟಿ ಪೊಲೀಸ್ ಠಾಣೆ ಪೊಲೀಸರು ಮೂರು ಕೋಟಿ ಮೌಲ್ಯದ ರಕ್ತಚಂದನವನ್ನು ವಶಪಡಿಸಿಕೊಂಡಿದ್ದಾರೆ.

ಕಟ್ಟಿಗೇನಹಳ್ಳಿ ಗ್ರಾಮದ ನಿವಾಸಿ ಮುಜೀದ್ ಹಾಗೂ ಬಷೀರ್ ಮನೆಯ ಮೇಲೆ ದಾಳಿ ನಡೆಸಿ ಅವರ ಮನೆಯ ಸುರಂಗದಲ್ಲಿ ಅಕ್ರಮವಾಗಿ ಅಡಗಿಸಿಟ್ಟಿದ್ದ ಒಂದು ಟನ್ ರಕ್ತಚಂದನದ ತುಂಡುಗಳನ್ನು ವಶಪಡಿಸಿಕೊಂಡು ಆತನನ್ನು ಬಂದಿಸಲಾಗಿದೆ.

ಬೆಗಳೂರು ಗ್ರಾಮಾಂತರ ಎಸ್.ಪಿ ಟಿ.ಪಿ.ಶಿವಕುಮಾರ್ ಮಾತನಾಡಿ, ಬಂದಿತನಾಗಿರುವ ವ್ಯಕ್ತಿಯು ಆಂಧ್ರದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ರಕ್ತಚಂದನವನ್ನು ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದನು, ಇವನು ಕಳೆದ ಒಂದು ವಾರದ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.

ಹಿಂದೆ ರಕ್ತಚಂದನವನ್ನು ಮಾರಾಟ ಮಾಡುವ ವೇಳೆ ಎನ್‍ಕೌಂಟರ್ ಸಹ ನಡೆದಿತ್ತು. ಅದರೂ ತನ್ನ ಕಸುಬನ್ನು ಮುಂದುವರೆಸಿದ್ದ. ಈಗ ನಮಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಕಟ್ಟಿಗೇನಹಳ್ಳಿ ಹಾಗೂ ಜಡಿಗೇನಹಳ್ಳಿ ಭಾಗಗಳಲ್ಲಿ ಸುಮಾರು 3 ಕೋಟಿಗೂ ಹೆಚ್ಚು ಬೆಳೆಬಾಳುವ ರಕ್ತಚಂದನವನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದರು.

Facebook Comments