ಕೊರೋನಾ ರೆಡ್‍ಜೋನ್‍ ಮೈಸೂರನ್ನು ಆರೆಂಜ್ ಜೋನ್ ಅಗಿ ಪರಿವರ್ತಿಸಲು ಕೇಂದ್ರಕ್ಕೆ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಮೇ 7- ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರೆಡ್‍ಜೋನ್‍ನಿಂದ ಆರೆಂಜ್ ಜೋನ್ ಅಗಿ ಪರಿವರ್ತಿಸಬೆಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ನಗರದಲ್ಲಿಂದು ಕೊರೊನಾ ಸೋಂಕು ಕಡಿಮೆಯಾಗಿದೆ. ಜುಬಿಲಿಯೆಂಟ್ ಕಾರ್ಖಾನೆಯ ಸೋಂಕಿತರನ್ನು ಹೊರತುಪಡಿಸಿದರೆ ಈವರೆಗೆ ಹೊಸ ಪ್ರಕರಣಗಳು ವರದಿಯಾಗಿಲ್ಲ. ಹಾಗಾಗಿ ರೆಡ್‍ಜೋನ್‍ನಲ್ಲಿರುವ ಮೈಸೂರನ್ನು ಆರೆಂಜ್ ಜೋನ್ ಎಂದು ಘೋಷಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಜುಬಿಲಿಯೆಂಟ್ ಕಾರ್ಖಾನೆಯಲ್ಲಿ ಕೊರೊನಾ ಸೋಂಕು ಹರಡಲು ಮೂರು ಪ್ರಮುಖ ಕಾರಣಗಳಿವೆ. ಆದರೆ ಯಾವ ಮೂಲದಿಂದ ಹರಡಿದೆ ಎಂದು ಗೊತ್ತಾಗಿಲ್ಲ. ದೆಹಲಿಯಿಂದ ಜುಬಿಲಿಯೆಂಟ್‍ಗೆ ಆಡಿಟರ್ ತಂಡ ಬಂದಿತ್ತು.

ಜುಬಿಲಿಯೆಂಟ್ ಕಾರ್ಖಾನೆಯಿಂದ ಅಧಿಕಾರಿಗಳ ತಂಡ ದೆಹಲಿಗೆ ತೆರಳಿತ್ತು. ಕಾರ್ಖಾನೆಯ ಕೆಲವರು ಬೆಂಗಳೂರು ಸಮೀಪದ ತನಿಸಂದ್ರಕ್ಕೆ ತೆರಳಿ ತಬ್ಲಿಗಿಗಳನ್ನು ಭೇಟಿಯಾಗಿದ್ದರು. ಈ ಮೂರು ಕಾರಣಗಳಲ್ಲಿ ಯಾವುದರಿಂದ ಹರಡಿದೆ ಎಂಬುದು ನಿಖರವಾಗಿ ಹೇಳಲಾಗುತ್ತಿಲ್ಲ.

ಹಾಗಾಗಿ ಎಲ್ಲ ಅಧಿಕಾರಿಗಳು ಜುಬಿಲಿಯೆಂಟ್ ಕಾರ್ಖಾನೆಯವರು ಜಿಲ್ಲಾಧಿಕಾರಿ, ಎಸ್‍ಪಿಯೊಂದಿಗೆ ಸಭೆ ನಡೆಸಿ ಚರ್ಚೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸೋಮಶೇಖರ್ ತಿಳಿಸಿದರು.

Facebook Comments

Sri Raghav

Admin