ರೇಖಾ ಖದರೀಶ್ ಕೊಲೆ ಕೇಸ್ : ಪೊಲೀಸರಿಗೆ ಸಿಕ್ತು ಮಹತ್ವದ ಸುಳಿವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.25-ನಿನ್ನೆ ಹಾಡುಹಗಲೇ ಬರ್ಬರವಾಗಿ ಹತ್ಯೆಯಾದ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಖದರೀಶ್ ಕೊಲೆ ಪ್ರಕರಣ ಸಂಬಂಧ ತನಿಖಾಕಾರಿಗಳಿಗೆ ಕೆಲವು ಮಹತ್ವದ ಸುಳಿವು ಸಿಕ್ಕಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪೊಲೀಸರು ವಿವಿಧ ತಂಡಗಳನ್ನು ರಚಿಸಿ ಪ್ರಕರಣದ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ತನಿಖಾಕಾರಿಗಳಿಗೆ ಕೆಲವು ಮಹತ್ವದ ವಿಷಯಗಳು ಲಭ್ಯವಾಗಿವೆ. ಆದರೆ ತನಿಖಾ ಹಂತದಲ್ಲಿರುವಾಗ ಹೆಚ್ಚಿನ ಮಾಹಿತಿ ನೀಡುವುದಿಲ್ಲ ಎಂದರು.

ನಿನ್ನೆ ತನಿಖೆಯಿಂದ ಸಾಕಷ್ಟು ವಿಷಯಗಳು ಹೊರಬರುತ್ತಿವೆ. ಆರೋಪಿಗಳನ್ನು ಆದಷ್ಟು ಶೀಘ್ರವೇ ಬಂಸುವ ವಿಶ್ವಾಸವಿದೆ. ಹಾಡುಹಗಲೇ ಭೀಕರವಾಗಿ ಕೊಲೆಯಾಗಿರುವುದರಿಂದ ಪೊಲೀಸರ ತನಿಖೆಯಲ್ಲಿ ಹಲವು ಸುಳಿವು ಪತ್ತೆಯಾಗಿದೆ ಎಂದು ತಿಳಿಸಿದರು.

ರೇಖಾ ಖದರೀಶ್ ಅವರ ಕೊಲೆಗೆ ಹಲವಾರು ಹಿನ್ನೆಲೆಗಳಿವೆ. ಈ ಹಿಂದೆ ಅವರ ಪತಿಯನ್ನು ಕೂಡ ಇದೇ ರೀತಿ ಹತ್ಯೆ ಮಾಡಲಾಗಿತ್ತು. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ ಎಂದರು.

ಅವರ ಕೊಲೆ ರಾಜಕೀಯ ಕಾರಣಕ್ಕಾಗಿಯೋ ಅಥವಾ ಕೌಟುಂಬಿಕ ಕಾರಣಕ್ಕಾಗಿಯೋ ಎಂಬುದು ನನಗೆ ಗೊತ್ತಿಲ್ಲ. ತನಿಖೆ ನಡೆಯುತ್ತಿರುವಾಗ ಈ ರೀತಿ ಹೇಳಲು ಸಾಧ್ಯವೂ ಇಲ್ಲ. ಸತ್ಯ ಆದಷ್ಟು ಬೇಗ ಹೊರಬರಲಿದೆ. ತನಿಖೆಯಲ್ಲಿ ಎಲ್ಲವೂ ಸ್ಪಷ್ಟವಾಗುತ್ತವೆ. ತಪ್ಪಿತಸ್ಥರು ಯಾರೇ ಇರಲಿ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ ಎಂದು ಹೇಳಿದರು.

Facebook Comments

Sri Raghav

Admin