ಕಾಶ್ಮೀರದಲ್ಲಿ 3 ರಾಜಕಾರಣಿಗಳ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಅ.10-ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿ ಸಂದರ್ಭದಲ್ಲಿ ವಶಕ್ಕೆ ಪಡೆಯಲಾಗಿದ್ದ ಮೂವರು ರಾಜಕೀಯ ನಾಯಕರನ್ನು ರಾಜ್ಯಾಡಳಿತ ಇಂದು ಬಿಡುಗಡೆಗೊಳಿಸಿದೆ.  ವಿವಿಧ ಆಧಾರಗಳ ಮೇಲೆ ರಾಜಕೀಯ ನಾಯಕರುಗಳಾದ ಯಾವರ್ ಮಿರ್, ನೂರ್ ಮಹಮದ್ ಮತ್ತು ಶೋಯೆಬ್ ಲೋನ್ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಭಾರತೀಯ ಸಂವಿಧಾನದ 370ನೇ ವಿಧಿಯನ್ನು ಆಗಸ್ಟ್ 5ರಂದು ರದ್ದುಗೊಳಿಸಿದ ನಂತರ ಇವರೂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಹಲವಾರು ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಗೃಹಬಂಧನದಲ್ಲಿ ಇರಿಸಿದ್ದರು.

Facebook Comments