ರಿಲಾಯನ್ಸ್ ಹೊಸ ಇತಿಹಾಸ : 10 ಲಕ್ಷ ಕೋಟಿ ರೂ. ತಲುಪಿದ ಎಂ-ಕ್ಯಾಪ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.28 (ಪಿಟಿಐ)- ಭಾರತದ ಪ್ರತಿಷ್ಠಿತ ಸಂಸ್ಥೆ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(ಆರ್‍ಐಎಲ್) ಇಂದು ಷೇರು ಪೇಟೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ತನ್ನ ಷೇರು ದರದಲ್ಲಿ ಭಾರೀ ಏರಿಕೆಯಿಂದಾಗಿ ಇಂದಿನ ಮಾರುಕಟ್ಟೆ ಮೌಲ್ಯಮಾಪನ ಮಟ್ಟದಲ್ಲಿ ಈ ಸಂಸ್ಥೆ 10 ಲಕ್ಷ ಕೋಟಿ ರೂ. ತಲುಪಿದೆ.

ಮಾರುಕಟ್ಟೆ ಬಂಡವಾಳೀಕರಣ (ಎಂ-ಕ್ಯಾಪ್)ದಲ್ಲಿ ಈ ಬಾರೀ ವಹಿವಾಟು ದಾಖಲಿಸಿದ ದೇಶದ ಪ್ರಥಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಆರ್‍ಐಲ್ ಪಾತ್ರವಾಗಿದೆ. ಬಾಂಬೆ ಸ್ಟಾಕ್ ಎಕ್ಸ್‍ಚೇಂಜ್ (ಬಿಎಸ್‍ಸಿ)ಯಲ್ಲಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ ತೈಲ ಮತ್ತು ಟೆಲಿಕಾಂ ದಿಗ್ಗಜ ಸಂಸ್ಥೆಯ ಮಾರುಕಟ್ಟೆ ಮೌಲ್ಯವು 10.02 ಲಕ್ಷ ಕೋಟಿ ರೂ. ದಾಖಲಿಸಿದೆ.

ಇದರಿಂದ ಕಂಪನಿಯ ಸ್ಟಾಕ್ ಶೇ.0.73ರಷ್ಟು ಹೆಚ್ಚಾಗಿದ್ದು ಇಂಟ್ರಾ-ಡೇ ವಹಿವಾಟಿದಲ್ಲಿ ಗರಿಷ್ಠ 1,581.25 ದಾಖಲೆ ಮಟ್ಟ ತಲುಪಿದೆ. ಕಳೆದ ಕೆಲವು ದಿನಗಳಿಂದ ರಿಲಾಯನ್ಸ್ ಮಾರುಕಟ್ಟೆ ಮೌಲ್ಯ ಏರುಗತಿಯಲ್ಲೇ ಮುಂದುವರಿದಿದೆ.

Facebook Comments