ಧಾರ್ಮಿಕತೆ ಆಧರಿಸಿದ ದಾಳಿಗಳು ಖಂಡನೀಯ : ವಿಶ್ವಸಂಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ, ಅ.10- ಕಳೆದ ಎರಡು ದಿನಗಳ ಹಿಂದೆ ಅಫ್ಘಾನಿಸ್ತಾನದ ಕುಂದಜ್ ಶಿಯಾ ಮಸೀದಿಯ ಮೇಲೆ ನಡೆದ ಭೀಕರ ಮಾನವ ಬಾಂಬ್ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿದೆ. 15ಕ್ಕೆ ಹೆಚ್ಚು ದೇಶಗಳ ಒಕ್ಕೂಟವಾದ ವಿಶ್ವಸಂಸ್ಥೆಯ ಭದ್ರತಾ ಒಕ್ಕೂಟ ಭಾರತದ ನಿಲುವಿಗೆ ಬೆಂಬಲ ವ್ಯಕ್ತ ಪಡಿಸಿದೆ.

ಆಗಸ್ಟ್ 8ರಂದು ಖೋರಾಸನ್ ಪ್ರಾಂತ್ಯದ ಕುಂದುಜ್ ಶಿಯಾ ಮಸೀದಿಯಲ್ಲಿ ಇರಾಕ್‍ನ ಇಸ್ಲಾಮಿಕ್ ಸ್ಟೇಟ್ ಮತ್ತು ವೆವಂಟನೊಂದಿಗೆ ಗುರುತಿಸಿಕೊಂಡಿದ್ದ ಉಗ್ರನೊಬ್ಬ ಮಸೀದಿಯ ಒಳಗೆ ಆತ್ಮಾಹುತಿ ದಾಳಿ ನಡೆಸಿದ್ದ. ಇದರಿಂದ 150 ಮಂದಿ ಹತ್ಯೆಯಾಗಿ, ಹಲವಾರು ಮಂದಿ ಗಾಯಗೊಂಡಿದ್ದರು. ಇಸ್ಲಾಮಿಕ್‍ಸ್ಟೇಟ್ ದಾಳಿಯ ಹೊಣೆ ಹೋತ್ತಿತ್ತು.

ಅಲ್ಪಸಂಖ್ಯಾತ ಪಂಗಡವನ್ನು ಆಧರಿಸಿ ದಾಳಿ ಮಾಡುವುದು ಹೇಡಿತನದ್ದು ಮತ್ತು ಅಮಾನವೀಯ ಎಂದು ವಿಶ್ವಸಂಸ್ಥೆ ಖಂಡಿಸಿದೆ.
ಭಾರತ ವಿಶ್ವಸಂಸ್ಥೆಯಲ್ಲಿ ತನ್ನ ನಿಲುವನ್ನು ಪ್ರತಿಪಾದಿಸಿ, ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುವ ದಾಳಿಯನ್ನು ಸಹಿಸಬಾರದು.

ಆಫ್ಘಾನಿಸ್ತಾನದಲ್ಲಿ ಗುರುದ್ವಾರದ ಮೇಲಿನ ದಾಳಿ, ಪಾಕಿಸ್ತಾನದಲ್ಲಿ ದೇವಸ್ಥಾನದ ಮೇಲಿನ ದಾಳಿ ಘಟನೆಗಳನ್ನು ಭಾರತ ಉಲ್ಲೇಖಿಸಿತ್ತು. ಭಾರತದ ನಿಲುವಿಗೆ ವಿಶ್ವಸಂಸ್ಥೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದೆ. ಇಂತಹ ದಾಳಿಗಳನ್ನು ಹತ್ತಿಕ್ಕುವುದು ಆದ್ಯ ಕರ್ತವ್ಯ ಹಾಗೂ ದುಷ್ಕøತ್ಯಗಳಿಗೆ ಹಣಕಾಸು ಹಾಗೂ ಇತರ ನೆರವು ನೀಡುವವರನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷೆ ಕೊಡಿಸುವ ಅಗತ್ಯ ಇದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಹೇಳಿದೆ.

ಪ್ರತಿಯೊಬ್ಬರಿಗೆ ತಮ್ಮ ನಂಬಿಕೆ, ಆಚರಣೆಗಳನ್ನು ಅನುಸರಿಸಲು ಅವಕಾಶ ಇದೆ. ಧರ್ಮದ ಕಾರಣಕ್ಕೆ, ಧಾರ್ಮಿಕ ಅಲ್ಪಸಂಖ್ಯಾತತೆಯ ಹಿನ್ನೆಲೆಯಾಗಿ ದಾಳಿ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಈ ರೀತಿಯ ಮೂಲ ಭೂತವಾದವನ್ನು ಹತ್ತಿಕ್ಕಬೇಕಿದೆ ಎಂದು ಹೇಳಿದೆ.

Facebook Comments