‘ಯಡಿಯೂರಪ್ಪನವರ ಹೆಸರು ಕೇಳಿದರೆ ನಮಗೆಲ್ಲ ಮೈರೋಮಾಂಚನವಾಗುತ್ತೆ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.26- ಯಡಿಯೂರಪ್ಪ ಹೆಸರು ಕೇಳಿದರೆ ನಮಗೆಲ್ಲೇ ಮೈ ರೋಮಾಂಚನ ಆಗುತ್ತೆ. ಅಂತಹ ಮಹಾನಾಯಕರು ಅವರು ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಗುಡುಗಿದರೆ ವಿಧಾನ ಸೌಧ ನಡುಗಿತು ಎಂಬ ಮಾತಿತ್ತು. ನಾವು ಅವರ ನೆರಳಲ್ಲಿ ಬೆಳೆದವರು. ನಾವೆಲ್ಲೇ ಯಡಿಯೂರಪ್ಪ ಅವರ ಮಕ್ಕಳಿದ್ದಂತೆ ಎಂದು ಬಣ್ಣಿಸಿದರು.

ಬಿಎಸ್‍ವೈ ರಾಜ್ಯದ ಪ್ರಶ್ನಾತೀತ ನಾಯಕ. ಅವರಿಗೆ ಆರೋಗ್ಯ ಆಯಸ್ಸು ಇನ್ನಷ್ಟು ಹೆಚ್ಚಾಗಲಿ. 2023ರಲ್ಲೂ ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆದು ಮತ್ತೊಮ್ಮೆ ಅವರೇ ಮುಖ್ಯಮಂತ್ರಿ ಆಗಲಿ ಎಂದು ಹಾರೈಸಿದರು. ಅವರ ಜನ್ಮದಿದನದ ಹಿನ್ನೆಲೆಯಲ್ಲಿ ಅವರಿಗಾಗಿ ಅವರ ಅಭಿಮಾನಿಗಳು ನಾಳೆ ದೇವಸ್ಥಾನಗಳಲ್ಲಿ ಪೂಜೆ ಮಾಡಲೆಂದು ಕೇಳಿಕೊಳ್ಳುತ್ತೇನೆ ಎಂದರು.

Facebook Comments