‘ಸಚಿವ ಸ್ಥಾನಕ್ಕಾಗಿ ಯಾರ ಮುಂದೆಯೂ ಭಿಕ್ಷೆ ಬೇಡಲ್ಲ’ : ರೇಣುಕಾಚಾರ್ಯ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ಆ.25- ಸಚಿವ ಸ್ಥಾನಕ್ಕಾಗಿಯೂ ಯಾರ ಮುಂದೆಯೂ ಭಿಕ್ಷೆ ಬೇಡುವುದಿಲ್ಲ ಮತ್ತು ಅದರ ಅವಶ್ಯಕತೆಯೂ ನನಗಿಲ್ಲ ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಇಲ್ಲಿ ಗುಡುಗಿದ್ದಾರೆ.

ಸಿರಿಗೆರೆಯ ತರಳಬಾಳು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಏಳು ಬೀಳುಗಳು ಸಹಜ. ಕೆಳಗೆ ಬಿದ್ದವರು ಮೇಲೆ ಏರಲೇಬೇಕು. ಅಂತೆಯೇ ಮೇಲಿದ್ದವರು ಕೆಳಗೆ ಬೀಳಲೇಬೇಕು ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು.

Facebook Comments