ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ: ಆರ್‌ಬಿಐ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಡಿ.4- ಸಾಂಕ್ರಾಮಿಕ ರೋಗ ಕೋವಿಡ್‍ನಿಂದಾಗಿ ಸಂಕಷ್ಟದಲ್ಲಿರುವ ಆರ್ಥಿಕತೆಯ ಪುನಶ್ಚೇತನಕ್ಕೆ ಬೆಂಬಲವಾಗುವ ನಿಟ್ಟಿನಲ್ಲಿ ಆರ್‌ಬಿಐ ರೇಪೋ ದರವನ್ನು ಯಥಾರೀತಿ ಮುಂದುವರೆಸಿದ್ದು, ಯಾವುದೇ ಬದಲಾವಣೆ ಮಾಡದೆ ಶೇ.4ರ ದರದಲ್ಲೇ ನಿಗದಿ ಮಾಡಿದೆ.

ಆರ್‌ಬಿಐನ ಗೌರ್ನರ್ ಶಶಿಕಾಂತ್ ದಾಸ್ ಅವರ ನೇತೃತ್ವದಲ್ಲಿ ಡಿಸೆಂಬರ್ 2 ಮತ್ತು 4ರಂದು ನಡೆದ ಆರ್ಥಿಕ ನೀತಿ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ಕೊರೊನಾ ಸೋಂಕು ಆರಂಭವಾದ ಆರಂಭದಲ್ಲಿ ಕುಸಿತವಾಗುತ್ತಿರುವ ಆರ್ಥಿಕತೆಗೆ ಬೆಂಬಲ ನೀಡುವ ಸಲುವಾಗಿ ಮಾರ್ಚ್‍ನಿಂದಲೇ ಆರ್‍ಬಿಐ ರೇಪೋ ದರವನ್ನು 115 ಮೂಲಾಧಾರ ಅಂಶಗಳನ್ನು ಆಧರಿಸಿ ಕಡಿಮೆ ಮಾಡುತ್ತಾ ಬಂದಿದೆ. ಮೇ 22ರಂದು ಗಣನೀಯವಾಗಿ ರೇಪೋ ದರವನ್ನು ಕಡಿತ ಮಾಡಲಾಗಿದೆ.

ಆರ್‍ಬಿಐನ ಆರ್ಥಿಕ ಸಮಿತಿ ನೀತಿಯ ನಿರ್ಧಾರದ ಪರಿಣಾಮವಾಗಿ ಬ್ಯಾಂಕ್‍ಗಳ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ.3.35ರ ಪ್ರಮಾಣದಲ್ಲಿ ಚಾಲ್ತಿಯಲ್ಲಿರಲಿದೆ. ಆರ್‍ಬಿಐಗೆ ನೂತನ ಆಡಳಿತ ಮಂಡಳಿ ನೇಮಕದ ಬಳಿಕ ಎರಡನೇ ಬಾರಿ ಸಭೆ ನಡೆಸಿರುವ ನಿರ್ದೇಶಕರ ಪೈಕಿ ಬಹುತೇಕರು ರೇಪೋರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ಮತ ಹಾಕಿದ್ದಾರೆ.

Facebook Comments