ಶಾಕಿಂಗ್ : ಅಮೆರಿಕದಲ್ಲಿ ಕೊರೋನಾಗೆ ಒಂದೇ ದಿನ 4,591 ಬಲಿ..! ಮೃತರ ಸಂಖ್ಯೆ 32,000ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಏ.17-ಸೂಕ್ಷ್ಮರೂಪದ ಮಹಾರಾಕ್ಷಸ ಎಂದೇ ಪರಿಗಣಿಸಲ್ಪಟಿರುವ ಕೊರೊನಾ ಅಮೆರಿಕವನ್ನು ಅಕ್ಷರಶಏ ಅಲ್ಲೋಲಕಲ್ಲೋಲ ಮಾಡಿದೆ. ಈಗಾಗಲೇ ಸಾವು ಮತ್ತು ಸೋಂಕಿನಲ್ಲಿ ವಿಶ್ವದ ಅಗ್ರಸ್ಥಾನದಲ್ಲಿರುವ ಅಮೆರಿಕದಲ್ಲಿ ಒಂದೇ ದಿನ ವಿಶ್ವದಾಖಲೆ ಪ್ರಮಾಣದ 4,590ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಮಹಾ ಬಲಶಾಲಿ ರಾಷ್ಟ್ರದಲ್ಲಿ ಈವರೆಗೆ 32,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 6.5 ಲಕ್ಷಕ್ಕೂಅಧಿಕ ಜನರಲ್ಲಿ ಮಾರಕ ಸೋಂಕು ದೃಢಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಮೊನ್ನೆ ಅಮೆರಿಕದಲ್ಲಿ ಒಂದೇ ದಿನ 2,600 ಮಂದಿ ಮೃತಪಟ್ಟಿರುವುದು ವಿಶ್ವದಾಖಲೆ ಎನಿಸಿತ್ತು. ಈಗ ಅದಕ್ಕಿಂತ ಒಂದೂವರೆಪಟ್ಟು ಹೆಚ್ಚಿನ ಸಾವು ಸಂಭವಿಸಿದೆ.

ಜಾನ್ಸ್ ಹಾಪ್‍ಕಿನ್ಸ್ ಯೂನಿವರ್ಸಿಟಿ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ, 24 ತಾಸುಗಳ ಅವಧಿಯ ಮುಕ್ತಾಯದ ವೇಳೆ (ಗುರುವಾರ ರಾತ್ರಿ 8 ಗಂಟೆ) 4,591ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಇದು ಇಡೀ ಜಗತ್ತಿನಲ್ಲಿ ಒಂದೇ ದಿನ ವರದಿಯಾಗಿರುವ ಅತಿ ಹೆಚ್ಚು ಸಾವಿನ ಪ್ರಕರಣವಾಗಿದೆ.

ಅಮೆರಿಕದಲ್ಲಿ ಒಟ್ಟಾರೆ 27,176 ಮಂದಿಯನ್ನು ಕೊರೊನಾ ಬಲಿ ತೆಗೆದುಕೊಂಡಿದ್ದು, 6.50 ಲಕ್ಷಕ್ಕೂ ಅಧಿಕ ಜನರು ಮಾರಕ ಸೋಂಕಿನಿಂದ ನರಳುತ್ತಿದ್ದಾರೆ. ಸಾವು ಮತ್ತು ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ವಿಶ್ವದಅತ್ಯಂತ ಪ್ರಸಿದ್ಧ ನಗರ ನ್ಯೂಯಾರ್ಕ್‍ಅಕ್ಷರಶಃ ಸಾವಿನ ಮನೆಯಾಗಿದೆ. ಅಲ್ಲಿ ವ್ಯಾಪಕ ಸಾವು-ನೋವು ಮತ್ತು ಸೋಂಕು ಪ್ರಕರಣಗಳಿಂದಾಗಿ ರೋಗ ನಗರಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಅಲ್ಲಿನ ಆಸ್ಪತ್ರೆಗಳು ಕೊರೊನಾ ಮೃತರ ಶವಾಗಾರಗಳಾಗಿ ಪರಿಣಮಿಸಿವೆ.

ಭಾರೀ ಕಳವಳಕಾರಿ ಸಂಗತಿ ಎಂದರೆ ನ್ಯೂಯಾರ್ಕ್ ನಗರವೊಂದರಲ್ಲೇ ಈವರೆಗೆ 16,100ಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ವೈರಸ್ ಬಲಿಪಡೆದಿದೆ. ಇಲ್ಲಿ ಸೋಂಕಿತರ ಸಂಖ್ಯೆ 2.27 ಲಕ್ಷಕ್ಕೇರಿದೆ.ನ್ಯೂಜೆರ್ಸಿ ನಗರದಲ್ಲೂ ಕೊರೊನಾ ಅಟ್ಟಹಾಸ ಆತಂಕಕಾರಿಯಾಗಿದೆ. ಅಲ್ಲಿ ಈವರೆಗೆ 3,520 ಮಂದಿ ಮೃತಪಟ್ಟಿದ್ದು, ಸೋಂಕಿರತ ಸಂಖ್ಯೆ 75,300 ದಾಟಿದೆ.

ಜಗತ್ತಿನಲ್ಲೇ ಸರ್ವಶ್ರೇಷ್ಠ ವೈದ್ಯಕೀಯ ಸೌಲಭ್ಯ ಮತ್ತು ವಿಶ್ವ ಮನ್ನಣೆಯ ಆರೋಗ್ಯ ತಜ್ಞರನ್ನು ಹೊಂದಿರುವ ಅಮೆರಿಕವನ್ನೇ ವೈರಸ್‍ಅಲ್ಲೋಲ-ಕಲ್ಲೋಲ ಮಾಡಿರುವಾಗ ಪ್ರಪಂಚದ ಉಳಿದ ದೇಶಗಳ ಪಾಡೇನು ಎಂಬ ಪ್ರಶ್ನೆ ಎದುರಾಗಿದೆ.

# ವಿಶ್ವವ್ಯಾಪಿ ಕೊರೊನಾಗೆ 1.44 ಲಕ್ಷ ಬಲಿ
ವಾಷ್ಟಿಂಗ್ಟನ್/ರೋಮ್/ಮ್ಯಾಡ್ರಿಡ್, ಏ.17- ವಿಶ್ವಾದ್ಯಂತ ಕೊರೊನಾ ಕಂಟಕ ಹೆಚ್ಚಾಗುತ್ತಿದ್ದು, ಈ ಹೆಮ್ಮಾರಿಯ ದಾಳಿಗೆ 220ಕ್ಕೂ ಹೆಚ್ಚು ದೇಶಗಳು ಕಂಗೆಟ್ಟಿವೆ.ಆಘಾತಕಾರಿ ಸಂಗತಿ ಶರವೇಗದಲಿ ್ಲಕೊರೊನಾ ಸೋಂಕು ಹಬ್ಬುತ್ತಿದ್ದು, ಜಗತ್ತಿನಾದ್ಯಂತ ವ್ಯಾಪಕ ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ.

ಈವರೆಗೆ ಮೃತರ ಸಂಖ್ಯೆ 1.44 ಲಕ್ಷದಾಟಿದೆ. ಅಲ್ಲದೇ ಸೋಂಕಿರ ಸಂಖ್ಯೆ22 ಲಕ್ಷಸನಿಹದಲ್ಲಿದೆ. ಪರಿಸ್ಥಿತಿ ಇದೇ ಕಳವಳಕಾರಿ ಮಟ್ಟದಲ್ಲಿ ಮುಂದುವರಿದಿದ್ದೇ ಆದರೆ ಮುಂದಿನ ದಿನಗಳಲ್ಲಿ ಜಗತ್ತು ಮತ್ತಷ್ಟು ಗಂಡಾಂತರ ಹಂತ ತಲುಪಲಿದೆ.ನಿನ್ನೆ ವಿಶ್ವದಾದ್ಯಂತ ಸೋಂಕು ಪೀಡಿತರ ಸಂಖ್ಯೆ 21.53 ಲಕ್ಷತಲುಪಿದೆ. ಮೊದಲ ಹಂತದಲ್ಲಿ 10 ಲಕ್ಷ ಜನರಿಗೆ ಸೋಂಕು ತಗುಲಲು 93 ದಿನಗಳು ಬೇಕಾಗಿತ್ತು. ಆದರೆ, ಕೊರೊನಾ ವೇಗ ತೀವ್ರಗೊಂಡಿದ್ದು, ಎರಡನೇ ಹಂತದಲ್ಲಿ 10 ಲಕ್ಷಜನರು ಕೇವಲ 13 ದಿನಗಳಲ್ಲೇ ಸಾಂಕ್ರಾಮಿಕರೋಗದಿಂದ ನರಳುವಂತಾಗಿರುವುದು ಭೀಕರ ಪರಿಸ್ಥಿತಿಗೆ ಸ್ಪಷ್ಟ ಉದಾಹರಣೆಯಾಗಿದೆ.

ಸೂಪರ್‍ಪವರ್ ರಾಷ್ಟ್ರ ಅಮೆರಿಕವೊಂದರಲ್ಲೇ 32,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದು ಕೊಂಡಿರುವ ಕಿಲ್ಲರ್ ಕೊರೊನಾ ಯುರೋಪ್ ಖಂಡದಲಿಯೂ ರೌದ್ರಾವತಾರ ಮುಂದುವರಿಸಿವೆ.  ಯುರೋಪ್‍ನಲ್ಲಿ 40ಕ್ಕೂ ಹೆಚ್ಚು ರಾಷ್ಟ್ರಗಳು ಕೋವಿಡ್-19 ಹಾವಳಿಯಿಂದ ಬಾಧಿತವಾಗಿದ್ದು, ಸುಮಾರು 55,000 ಮಂದಿ ಬಲಿಯಾಗಿದ್ದು, 11 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ.

ಇಟಲಿಯಲ್ಲಿಯೂ ಸತ್ತವರ ಸಂಖ್ಯೆ 22,000 ದಾಟಿರುವುದುಆತಂಕದ ಸಂಗತಿಯಾಗಿದೆ.  ಇದರೊಂದಿಗೆ ಅಮೆರಿಕ ನಂತರ ಅತಿ ಹೆಚ್ಚು ಕೊರೊನಾ ಸೋಂಕು ಸಂಭವಿಸಿರುವ ದೇಶ ಎಂಬ ಕುಖ್ಯಾತಿಗೆ ಇಟಲಿ ಪಾತ್ರವಾಗಿದೆ. ಯೂರೋಪ್ ಖಂಡದಲ್ಲಿ ಇಟಲಿ ನಂತರ ಸ್ಪೇನ್ ಸಾವು ಮತ್ತು ಸೋಂಕಿನಲ್ಲಿ ಏರಡನೇ ಸ್ಥಾನದಲ್ಲಿದೆ. ಅಲ್ಲಿ ಈವರೆಗೆ 20,500 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ಇಂಗ್ಲೆಂಡ್‍ನಲ್ಲಿಯೂ ಸಾವು ಮತ್ತು ಸೋಂಕು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಬ್ರಿಟನ್‍ನಲ್ಲಿಸತ್ತವರ ಸಂಖ್ಯೆ 15,000 ಸಮೀಪದಲ್ಲಿದೆ..ಸುಮಾರು 97 ಲಕ್ಷಕ್ಕೂ ಅಧಿಕ ರೋಗಿಗಳು ನರಳುತ್ತಿದ್ದಾರೆ.  ಜರ್ಮನಿ, ನೆದರ್‍ಲೆಂಡ್ ಮತ್ತಿತ್ತರ ದೇಶಗಳಲ್ಲಿಯೂ ಸಾವು ಮತ್ತು ಸೋಂಕಿ ಪ್ರಮಾಣ ಹೆಚ್ಚಾಗುತ್ತಿದೆ. ಬ್ರೆಜಿಲ್, ಮೆಕ್ಸಿಕೋ, ಈಕ್ವೆಡಾರ್, ಸೌದಿ ಅರೇಬಿಯಾ, ಆಫ್ರಿಕಾ ದೇಶಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿದೆ.

ಕೊರೊನಾ ವೈರಸ್‍ನ ಕೇಂದ್ರ ಬಿಂದು ಚೀನಾ, ಜಪಾನ್, ಪಾಕಿಸ್ತಾನ, ದಕ್ಷಿಣಕೊರಿಯಾ ದೇಶಗಳಲ್ಲಿಯೂ ಹೊಸ ಹೊಸ ಕೋಂಕು ಪ್ರಕರಣಗಳು ವರದಿಯಾಗುತ್ತಲೇ ಇವೆ.

Facebook Comments

Sri Raghav

Admin