ರಾಜಧಾನಿ ದೆಹಲಿಯಲ್ಲಿ ಭಾರತದ ಶಕ್ತಿ ಸಾಮಥ್ರ್ಯಅನಾವರಣ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.26- ವಿವಿಧೆತೆಯಲ್ಲಿ ಏಕತೆಯನ್ನು ಹೊಂದಿರುವ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಹೆಗ್ಗಳಿಕೆಗೆ ಪಾತ್ರವಾದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇಂದು 71ನೇ ಗಣರಾಜ್ಯೋತ್ಸವದ ಸಂಭ್ರಮ.  ರಾಜಧಾನಿ ದೆಹಲಿಯಲ್ಲಿ ಇಂದು ನಡೆದ ಗಣತಂತ್ರ ದಿವಸದ ಪ್ರಧಾನ ಕಾರ್ಯಕ್ರಮದಲ್ಲಿ ಭಾರತದ ಭವ್ಯ ಸಂಸ್ಕøತಿ, ಪರಂಪರೆ ಮತ್ತು ಘನತೆಯನ್ನು ಬಿಂಬಿಸುವ ಅತ್ಯಾಕರ್ಷಕ ಸ್ತಬ್ದಚಿತ್ರಗಳ ಮೆರವಣಿಗೆಯೊಂದಿಗೆ ರಾಷ್ಟ್ರದ ಅಗಾಧ ಶಕ್ತಿ ಸಾಮಥ್ರ್ಯವೂ ಅನಾವರಣಗೊಂಡಿತು.

ಈ ಬಾರಿಯ ಗಣರಾಜ್ಯೋತ್ಸವದ ವಿಶೇಷವೆಂದರೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಆರಂಭವಾಗಿ ರಾಜಪಥದಲ್ಲಿ ನಡೆದ ಈ ಮೆರವಣಿಗೆ ಅತ್ಯಂತ ವರ್ಣರಂಜಿತ ಮತ್ತು ವೈಭವದಿಂದ ಕೂಡಿತ್ತು. ಇಂದಿನ ಗಣರಾಜ್ಯೋತ್ಸವ ಪರೇಡ್ ಹಲವು ಪ್ರಥಮಗಳಿಗೆ ಸಾಕ್ಷಿಯಾಯಿತು.  ಇದೇ ಪ್ರಥಮ ಬಾರಿಗೆ ಸಶಸ್ತ್ರ ಪಡೆಯ ಮುಖ್ಯಸ್ಥರು ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳನ್ನು ಪ್ರತಿನಿಧಿಸಿ ಪರೇಡ್‍ನಲ್ಲಿ ಪಾಲ್ಗೊಂಡಿದ್ದು ಮೂರು ಸೇನಾ ಪಡೆಗಳ ಮಹಾದಂಡನಾಯಕರಾಗಿರುವ ಜನರಲ್ ಬಿಪಿನ್ ರಾವತ್ ಭಾಗವಹಿಸಿದ್ದು ಗಮನಸೆಳೆಯಿತು.

ಭಾರತ ಕಳೆದ ವರ್ಷ ಮಿಷನ್ ಶಕ್ತಿ ಹೆಸರಿನಲ್ಲಿ ಅಂತರಿಕ್ಷದಲ್ಲಿಯೇ ಅಪಾಯಕಾರಿ ಮತ್ತು ಹಾನಿಕಾರಕ ಉಪಗ್ರಹವನ್ನು ಛೇದಿಸಬಲ್ಲ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿತ್ತು. ಈ ಸಾಧನೆ ಮಾಡಿದ ಅಮೆರಿಕಾ, ರಷ್ಯಾ ಚೀನಾ ಹಾಗೂ ಚೀನಾ ಸಾಲಿಗೆ ಬಾರತ ಸೇರ್ಪಡೆಯಾಗಿತ್ತು. ಈ ಬಾರಿಯ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಈ ಕ್ಷಿಪಣಿ ಮೊದಲ ಬಾರಿ ಪ್ರದರ್ಶನಗೊಂಡು ಜನಾಕರ್ಷಣೆಗೆ ಪಾತ್ರವಾಯಿತು.

ಭಾರತೀಯ ವಾಯುಪಡೆಗೆ ಹೊಸದಾಗಿ ಸೇರ್ಪಡೆಯಾಗಿರುವ ಅಪಾಚೆ ಹಾಗೂ ಚಿನೂಕ್ ಹೆಲಿಕಾಪ್ಟರ್‍ಗಳು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮೊದಲ ಬಾರಿ ಹಾರಾಟ ನಡೆದ್ದು ಆಕರ್ಷಣೀಯ ಕೇಂದ್ರಬಿಂದುವಾಗಿತ್ತು.  3 ಚಿನೂಕ್ ಹೆಲಿಕಾಪ್ಟರ್‍ಗಳು ರಾಜಪಥದ ಮೇಲೆ ಹಾರಾಟ ಕೈಗೊಳ್ಳಲಿವೆ. ಬಳಿಕ ಅಪಾಚೆ ಹೆಲಿಕಾಪ್ಟರ್ ಗಳು ಹಿಂಬಾಲಿಸಿದವು. ಇದೇ ವೇಳೆ ಭಾರತೀಯ ವಾಯುಪಡೆಯ ಸ್ತಬ್ಧಚಿತ್ರದಲ್ಲಿ ರಫೇಲ್ ಯುದ್ಧ ವಿಮಾನದ ಮಾದರಿಯನ್ನು ಸಹ ಆಕರ್ಷಣೀಯವಾಗಿತ್ತು.

ದೇಶಿ ಬೋಪೋರ್ಸ್ ಎಂದೇ ಹೆಸರಾಗಿರುವ ಧನುಷ್ ಫಿರಂಗಿಗಳು ಪೆರೇಡ್‍ನಲ್ಲಿ ಪ್ರಮುಖವೆನಿಸಿತು. ಸ್ವದೇಶಿ ನಿರ್ಮಿತ ಈ ಫಿರಂಗಿಯನ್ನು ಪರೇಡ್‍ನಲ್ಲಿ ಮೊದಲ ಬಾರಿ ಪ್ರದರ್ಶಿಸಲಾಗಿದೆ.  ಏರ್ ಡಿಫೆನ್ಸ್ ಟೆಕ್ನಿಕಲ್ ಕಂಟ್ರೋಲ್ ರಾಡಾರ್‍ನ್ನು ಕೂಡ ಪರೇಡ್ ನಲ್ಲಿ ಪ್ರದರ್ಶಿಸಲಾಗುತ್ತದೆ ಇದೇ ವೇಳೆ ಸ್ವದೇಶಿ ನಿರ್ಮಿತ ಕೆ-9 ವಜ್ರ ಟ್ಯಾಂಕರ್ ಕೂಡ ಎಲ್ಲರ ಗಮನ ಸೆಳೆಯಿತು.

ಮಹಿಳೆಯರ ಸಿಆರ್‍ಪಿಎಫ್ ಬೈಕ್ ಸವಾರರ ತಂಡ ಗಣರಾಜ್ಯೋತ್ಸವ ವೇಳೆ ಮೊದಲ ಬಾರಿ ಸಾಹಸ ಪ್ರದರ್ಶನ ಮೈನವಿರೇಳಿಸಿತು. 65 ಸದಸ್ಯರ ಈ ತಂಡ ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕಿನಲ್ಲಿದ್ದ ವನಿತೆಯರ ಚಮತ್ಕಾರಿಕ ಕೌಶಲ್ಯಗಳನ್ನು ಬೆರಗುಗೊಳಿಸಿತು.  ಜೊತೆಗೆ ಈ ಬಾರಿ ಪರೇಡ್‍ನಲ್ಲಿ ಕ್ಯಾ ತಾನಿಯಾ ಶೇರ್ಗೀಲ್ ಪುರುಷರ ಪಥ ಸಂಚಲನವನ್ನು ಅತ್ಯಂತ ಶಿಸ್ತುಬದ್ಧವಾಗಿ ಮುನ್ನಡೆಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದಲ್ಲಿ ವಿಶೇಷ ಪ್ರಾತಿನಿಧ್ಯ ನೀಡಿದ್ದ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಗಣರಾಜ್ಯೋತ್ಸವದಲ್ಲಿ ಜಮ್ಮುಕಾಶ್ಮೀರವು ಮೊದಲ ಬಾರಿ ಯೂನಿಯನ್ ಟೆರಿಟರಿ(ಯುಟಿ) ಭಾಗವಹಿಸಿತ್ತು. ಅಲ್ಲಿನ ಸ್ತಬ್ಧ ಚಿತ್ರವು ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಸಂಚರಿಸಿತು.
ಇನ್ನು ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಕ್ರಾಂತಿಯೋಗಿ ಬಸವಣ್ಣನವರ ಅನುಭವ ಮಂಟಪದ ಸ್ತಬ್ಧಚಿತ್ರ ಈ ಬಾರಿ ಕರ್ನಾಟಕವನ್ನು ಪ್ರತಿನಿಧಿಸಿ 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ ಕ್ರಾಂತಿ ಮಾಡಿದ್ದ ಬಸವಣ್ಣನವರ ಪರಿಕಲ್ಪನೆಯನ್ನು ರಾಜಪಥದಲ್ಲಿ ಅನಾವರಣಗೊಳಿಸಿತು.

ಒಟ್ಟು 16 ಸ್ತಬ್ದಚಿತ್ರಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿ ದೇಶವಿದೇಶಗಳ ವೀಕ್ಷಕರನ್ನು ಆಕರ್ಷಿಸಿತು. ಭಾರತೀಯ ಸೇನಾಪಡೆಯ ವಿವಿಧ ದಳಗಳ ಶಿಸ್ತುಬದ್ದ ಪಥಸಂಚಲನ ಯೋಧರ ಬಗ್ಗೆ ಹೆಮ್ಮೆ ಮೂಡಿಸಿತು.  ದೇಶದ ಭವ್ಯ ಪರಂಪರೆ, ಸಂಸ್ಕøತಿ ಮತ್ತು ವಿಶೇಷತೆಗಳನ್ನು ಸಾರುವ ಸ್ತಬ್ದ ಚಿತ್ರಗಳೊಂದಿಗೆ ರಾಷ್ಟ್ರದ ರಕ್ಷಣಾ ಬತ್ತಳಿಕೆಯಲ್ಲಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನಗಳು ಸಹ ಪಥಸಂಚಲನದ ವೇಳೆ ಎಲ್ಲರ ಗಮನಸೆಳೆಯಿತು.

ಪಥಸಂಚಲನ ಸಂದರ್ಭದಲ್ಲಿ ಆಗಸದಲ್ಲಿ ಹೆಲಿಕಾಪ್ಟರ್‍ಗಳು, ಪುಷ್ಪವೃಷ್ಟಿಗೆರೆದು ಹಾರಾಡಿದವು.  ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದ ಮಕ್ಕಳು ಮತ್ತು ಪ್ರಧಾನಮಂತ್ರಿಯವರ ರಾಷ್ಟ್ರೀಯ ಬಾಲ ಪುರಸ್ಕಾರ ಗಳಿಸಿದ ಚಿಣ್ಣರು ಪಥಸಂಚಲನದಲ್ಲಿ ಪಾಲ್ಗೊಂಡರು.

ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳು,ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸಿ ಬೊಲ್ಸಾನ್ಯಾರೋ ಮತ್ತು ಅವರ ಸಚಿವ ಸಂಪುಟದ 10 ಸಚಿವರು ಮತ್ತು ಸಂಸದರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಈ ವರ್ಣರಂಚಿತ ಪಥಸಂಚಲನವನ್ನು ವೀಕ್ಷಿಸಿದರು.

  

Facebook Comments