ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಆರಂಭಕ್ಕೆ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.11-ಗೃಹ ಸಚಿವಾಲಯದ ಅನುಮತಿ ಸಿಕ್ಕಿದರೆ ವಸತಿ ಶಾಲೆಗಳು ಮತ್ತು ಕಾಲೇಜುಗಳನ್ನು ಪುನರಾರಂಭಿಸಲು ಸಮಾಜ ಕಲ್ಯಾಣ ಇಲಾಖೆ ಯೋಜನೆ ನಡೆಸುತ್ತಿದೆ.

ಸಾವಿರಾರು ವಿದ್ಯಾರ್ಥಿಗಳಿಗೆ ಪೌಷ್ಠಿಕಯುಕ್ತ ಆಹಾರ, ವಸತಿಯನ್ನು ಒದಗಿಸ ಬಹುದೆಂದು ಈ ಯೋಜನೆಗೆ ಮುಂದಾಗಿದ್ದು ಬೇರೆ ಶಾಲೆಗಳು ಆರಂಭವಾಗುವ ಮುನ್ನ ಇದನ್ನು ಆರಂಭಿಸಲು ಇಲಾಖೆ ಮುಂದಾಗಿದೆ.

ವಸತಿ ಶಾಲೆಗಳೆಂದರೆ ಮನೆಯಿದ್ದಂತೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕಾಗಿಲ್ಲ. ವಸತೆ ಶಾಲೆಯ ಆವರಣದೊಳಗೆ ಒಂದು ಬಾರಿ ಬಂದುಬಿಟ್ಟರೆ ಸಾಕು ನಂತರ ನಮ್ಮ ಜವಾಬ್ದಾರಿ.

ಶಿಕ್ಷಕರು ಮತ್ತು ಇತರ ಸಿಬ್ಬಂದಿ ನಿತ್ಯವೂ ಹಗಲಿರುಳು ಅವರ ಜೊತೆಗಿರುತ್ತಾರೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಸಮಾಜ ಕಲ್ಯಾಣ ಇಲಾಖೆಯಡಿ ರಾಜ್ಯದಲ್ಲಿ 819 ವಸತಿ ಶಾಲೆಗಳು ಮತ್ತು ಕಾಲೇಜುಗಳು ಪರಿಶಿಷ್ಟ ಜತಿ, ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಗಳ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದೆ.

ಅವುಗಳಲ್ಲಿ ಮೊರಾರ್ಜಿ ದೇಸಾಯಿ ಶಾಲೆಗಳು, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ,ಅಟಲ್ ಬಿಹಾರಿ ವಾಜಪೇಯಿ, ಎಸ್.ಸಿ/ಎಸ್ ಟಿ ವರ್ಗಗಳ ಪ್ರತಿಭಾನ್ವಿತ ಹೆಣ್ಣು ಮಕ್ಕಳು, ಬಿ.ಆರ್.ಅಂಬೇಡ್ಕರ್, ಇಂದಿರಾಗಾಂಧಿ ವಸತಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜು ಗಳಿವೆ.

ಈ ಎಲ್ಲಾ ಶಾಲಾ- ಕಾಲೇಜು ಗಳು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸೊಸೈಟಿಯಡಿ ಬರುತ್ತದೆ.ಈ ಶಾಲಾ  ಕಾಲೇಜುಗಳಲ್ಲಿ ದಾಖಲಾಗುವ ಬಹುತೇಕ ಮಕ್ಕಳು ಆರ್ಥಿಕವಾಗಿ ದುರ್ಬಲರು. ವಸತಿ ಶಾಲೆಯಲ್ಲಿದ್ದರೆ ಅವರಿಗೆ ಸಂಪೂರ್ಣವಾಗಿ ಉಚಿತ ಆಹಾರ ಮತ್ತು ವಸತಿ ಸಿಗುತ್ತದೆ.

ಗುಣಮಟ್ಟ ಕಾರ್ಯವಿಧಾನ ಶಿಷ್ಟಾಚಾರಗಳನ್ನು ಪಾಲಿಸುತ್ತೇವೆ ಶಾಲಾ ಕಾಲೇಜುಗಳನ್ನು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪುನರಾರಂಭಿಸಲು ಗೃಹ ಸಚಿವಾಲಯಕ್ಕೆ ಮನವಿ ಮಾಡುತ್ತೇವೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments