ನಿವೃತ್ತ ಡಿಜಿಪಿ ಶಂಕರ್ ಬಿದರಿ ಅವರನನ್ನೇ ಯಾಮಾರಿಸಿದ ವಂಚಕರಿಗಾಗಿ ಶೋಧ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.16- ನಿವೃತ್ತ ಡಿಜಿಪಿ ಶಂಕರ್ ಬಿದರಿ ಅವರಿಗೆ ಕರೆ ಮಾಡಿ 89 ಸಾವಿರ ಹಣ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಸಿದಂತೆ ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೆÇಲೀಸರು ಸೈಬರ್ ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.ಅ.11ರಂದು ಶಂಕರ್ ಬಿದರಿ ಅವರು ಎಸ್ಬಿಐ ಕಡೆಯಿಂದ ಬಂದ ಮೆಸೇಜ್ ನೋಡಿದ್ದಾರೆ. ಅದರಲ್ಲಿ ನಿಮ್ಮ ಖಾತೆಗೆ ಪಾನ್ ನಂಬರ್ ಅಪ್ಡೇಟ್ ಮಾಡದಿದ್ದರೆ ಖಾತೆ ಸ್ಥಗಿತವಾಗಲಿದೆ ಎಂಬುದನ್ನು ಗಮನಿಸಿದ್ದಾರೆ.

ತದನಂತರ ಎಸ್ಬಿಐ ಸಹಾಯವಾಣಿ ಸೋಗಿನಲ್ಲಿ ವಂಚಕ ಬಿದರಿ ಅವರ ಮೊಬೈಲ್ಗೆ ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಪಾನ್ ನಂಬರ್ ಲಿಂಕ್ ಮಾಡಬೇಕಿದೆ. ಮೊಬೈಲ್ಗೆ ಬರುವ ಒಟಿಪಿ ನಂಬರ್ ಹೇಳುವಂತೆ ತಿಳಿಸಿದ್ದಾನೆ.

ಶಂಕರ್ ಬಿದರಿ ಅವರು ಮೊದಲೇ ಈ ಬಗ್ಗೆ ಮೊಬೈಲ್ನಲ್ಲಿ ಬಂದಿದ್ದ ಮೆಸೇಜ್ ನೋಡಿದ್ದರಿಂದ ಬ್ಯಾಂಕ್ನವರೇ ಕರೆ ಮಾಡುತ್ತಿದ್ದಾರೆ ಎಂದು ನಂಬಿ ಒಟಿಪಿ ಹೇಳಿದ್ದಾರೆ. ಒಟಿಪಿ ಕಳುಹಿಸಿದ ಕೆಲವೇ ಕ್ಷಣಗಳಲ್ಲಿ ಬಿದರಿ ಅವರ ಖಾತೆಯಿಂದ ಬರೋಬ್ಬರಿ 89 ಸಾವಿರ ಹಣ ಕಡಿತವಾಗಿದೆ ಎಂಬ ಮೆಸೇಜ್ ನೋಡಿ ಕಂಗಾಲಾಗಿ ಇದೀಗ ಸಿಇಎನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಹಿಂದೆಯೂ ಶಂಕರ್ ಬಿದರಿ ಅವರ ಇ-ಮೇಲ್ ಹ್ಯಾಕ್ ಮಾಡಿದ್ದ ದುಷ್ಕರ್ಮಿಗಳು ಇ-ಮೇಲ್ ವಿಳಾಸದಲ್ಲಿದ್ದ ಸ್ನೇಹಿತರೊಬ್ಬರಿಗೆ ಬ್ಯಾಂಕ್ ಖಾತೆ ಮತ್ತು ಐಎಫ್ಎಸ್ಸಿ ಕೋಡ್ ಕಳುಹಿಸಿದ್ದರು.ಈ ಮೆಸೇಜ್ ನೋಡಿದ ಸ್ನೇಹಿತರೊಬ್ಬರು ಬಿದರಿ ಅವರೇ ಕಳುಹಿಸಿರಬಹುದು ಎಂದು
ಭಾವಿಸಿ 25 ಸಾವಿರ ಹಣವನ್ನು ವರ್ಗಾವಣೆ ಮಾಡಿದ್ದರು. ತದನಂತರದಲ್ಲಿ ಸೈಬರ್ ಕಳ್ಳರು ಹಣ ದೋಚಿರುವುದು ಗೊತ್ತಾಗಿತ್ತು.

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ, ಕಳ್ಳತನಗಳು ಹೆಚ್ಚಾಗುತ್ತಿದ್ದು, ಆನ್ಲೈನ್ನಲ್ಲೇ ಉತ್ತಮ ಸೇವೆ ಸಿಗಲಿದೆ ಎಂಬುದನ್ನು ಅರಿತಿರುವ ಜನಸಾಮಾನ್ಯರು ಸಹ ಸೈಬರ್ ವಂಚಕರ ಬಲೆಗೆ ಬೀಳುತ್ತಿರುವುದು ಸಾಮಾನ್ಯವಾಗಿದೆ.ವಂಚಕರು ಮೊಬೈಲ್ಗಳಿಗೆ ಕರೆ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಗೆ ಬಹುಮಾನ ಬಂದಿದೆ ಎಂಬಂತಹ ಸಂದೇಶಗಳನ್ನು ಕಳುಹಿಸಿ ವಂಚನೆ ಮಾಡುತ್ತಿದ್ದು, ಈ ಬಗ್ಗೆಯೂ ಸಹ ಎಚ್ಚೆತ್ತುಕೊಳ್ಳಬೇಕಿದೆ.

ಈ ಬಗ್ಗೆ ಬ್ಯಾಂಕ್ಗಳು ಹಾಗೂ ಹಣಕಾಸು ಸಂಸ್ಥೆಗಳು ತಮ್ಮ ತಮ್ಮ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಿದ್ದರೂ ಸಹ ಜನರು ಮೋಸ ಹೋಗುತ್ತಿದ್ದಾರೆ.
ಆದರೆ, ಈ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಕಾರಿ ಶಂಕರ್ ಬಿದರಿ ಅವರನ್ನೇ ವಂಚನೆ ಜಾಲದಲ್ಲಿ ಬೀಳಿಸಿದ್ದು, ದುಷ್ಕರ್ಮಿಗಳಿಗಾಗಿ ಶೋಧ ಕೈಗೊಳ್ಳಲಾಗಿದೆ.

Facebook Comments

Sri Raghav

Admin