ಏನಿದು ರಿವರ್ಸ್ ಡಯಟ್..? ಹೆಚ್ಚು ತಿನ್ನಿ ತೂಕ ಇಳಿಸಿ..!

ಈ ಸುದ್ದಿಯನ್ನು ಶೇರ್ ಮಾಡಿ

ತೂಕ ಇಳಿಸಿಕೊಂಡು ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಲು ಹಲವಾರು ರೀತಿಯ ವ್ಯಾಯಾಮ ಹಾಗೂ ಆಹಾರ ಕ್ರಮಗಳು ಇವೆ. ಇದನ್ನು ಪಾಲಿಸಿಕೊಂಡು ಹೋದರೆ ಖಂಡಿತವಾಗಿಯೂ ದೇಹದ ತೂಕ ಇಳಿಸಿ ಆರೋಗ್ಯ ಕಾಪಾಡಬಹುದು ಹಾಗೂ ದೇಹವನ್ನು ಫಿಟ್ ಆಗಿ ಇಡಬಹುದು. ಆದರೆ ಅತಿ ಹೆಚ್ಚು ಕ್ಯಾಲೋರಿಸ್ ಆಹಾರ ಸೇವಿಸಿಯೂ ದೇಹವನ್ನು ಫಿಟ್ ಆಗಿಡುವ ರಿವರ್ಸ್ ಡಯಟ್ ಗೊತ್ತಾ?. ಇದನ್ನೇ ದೇಹದಾರ್ಢ್ಯ ಪಟುಗಳು ಹಾಗೂ ಕ್ರೀಡಾಳುಗಳು ಪಾಲಿಸಿಕೊಂಡು ಹೋಗುವುದು.

ಆದರೆ ಇದು ಆಹಾರ ಪಥ್ಯ ಮಾಡಿಕೊಂಡು ಇರುವಂಥವರು ಮತ್ತೆ ಹಿಂದಿನಂತೆ ಕ್ಯಾಲರಿ ಹೆಚ್ಚಾಗಿರುವಂತಹ ಆಹಾರ ಸೇವನೆ ಮಾಡುವುದು ಮತ್ತು ಅದನ್ನು ದಹಿಸಲು ಸಾಕಷ್ಟು ವ್ಯಾಯಾಮ ಮಾಡುವುದು. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಕೂಡ ಸಿಗುವುದು, ತೂಕವು ಇಳಿಯುವುದು ಮತ್ತು ಶಕ್ತಿಯು ಸಿಗುವುದು.

ಏನಿದು ರಿವರ್ಸ್ ಡಯಟ್? : ಸಣ್ಣ ಆಗಲು ಡಯಟ್ ಮಾಡುವವರು ಕ್ಯಾಲರಿ ತುಂಬಾ ಕಡಿಮೆ ಸೇವಿಸಬೇಕಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ರಿವರ್ಸ್ ಡಯಟ್ ಮಾಡುವಂತಹ ಜನರು ಕೆಲವು ವಾರಗಳು ಮತ್ತು ತಿಂಗಳ ಕಾಲ ಕ್ಯಾಲರಿ ಸೇವನೆ ಹೆಚ್ಚಿಸುವರು. ಇದರಿಂದಾಗಿ ಚಯಾಪಚಯ ಕ್ರಿಯೆ ಹೆಚ್ಚಾಗುವುದು ಮತ್ತು ದಿನವಿಡಿ ಹೆಚ್ಚು ಕ್ಯಾಲರಿ ದಹಿಸಲು ದೇಹಕ್ಕೆ ನೆರವಾಗುವುದು.

ಇದು ದೇಹದಾರ್ಢ್ಯ ಪಟುಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ತೂಕ ಹೆಚ್ಚಿಸದೆ ಕ್ಯಾಲರಿ ಕಡಿಮೆ ಸೇವನೆ ಮಾಡಲು ಆರಂಭಿಸಿ, ದಿನದಿಂದ ದಿನಕ್ಕೆ ಸಾಮಾನ್ಯ ಆಹಾರ ಕ್ರಮಕ್ಕೆ ಮರಳುವುದು. ಇದು ಶಕ್ತಿ ಮಟ್ಟ ಹೆಚ್ಚಿಸುವುದು, ಹಸಿವು ಕಡಿಮೆ ಮಾಡುವುದು ಮತ್ತು ತೂಕ ಇಳಿಸಲು ನೆರವಾಗುವುದು.

#ದೇಹದಾರ್ಢ್ಯ ಪಟುಗಳು ಇದನ್ನೇ ಪಾಲಿಸುವರು:  ಕ್ರೀಡಾಳುಗಳು ಹಾಗೂ ದೇಹದಾರ್ಢ್ಯ ಪಟುಗಳು ತಮ್ಮ ದೇಹವನ್ನು ಫಿಟ್ ಆಗಿಡಲು ಹಲವಾರು ರೀತಿಯ ವ್ಯಾಯಾಮ ಕ್ರಮ ಹಾಗೂ ಆಹಾರವನ್ನು ಪಾಲಿಸುವರು.ಇದರಲ್ಲಿ ರಿವರ್ಸ್ ಡಯಟ್ ಸಹ ಮುಖ್ಯವಾದದ್ದು. ಅವರ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗಲು ಸಾಮಾನ್ಯ ವ್ಯಕ್ತಿಗಳಿಗೆ ಸಾಧ್ಯವಾಗದು.

ಅವರು ತಿನ್ನುವ ಆಹಾರದ ಎರಡು ಪಟ್ಟು ಹೆಚ್ಚು ವ್ಯಾಯಾಮ ಮಾಡುವರು, ಇವರ ಉದ್ದೇಶ ದೇಹ ಬೆಳೆಸುವುದು, ಅತಿಯಾದ ಶಕ್ತಿ ದೇಹಕ್ಕೆ ನೀಡುವುದೇ ಆಗಿರುತ್ತದೆ ಹಾಗೂ ಇದರಿಂದಾಗಿ ಅವರು ದೇಹಕ್ಕೆ ಬೊಜ್ಜು ಆವರಿಸಿಕೊಳ್ಳುವುದಿಲ್ಲ. ಆದರೆ ನಾವು ಇದೇ ನಿಯಮ ಪಾಲಿಸಿ ಅವರಿಗಿಂತ ಮಿತಿಯಾದ ಕ್ಯಾಲೋರಿ ಸೇವಿಸಿ ನಿಮಿತ ವ್ಯಾಯಾಮದ ಮೂಲಕ ದೇಹದ ಫಿಟ್ ನೆಸ್ ಕಾಪಾಡಬಹುದು.

# ರಿವರ್ಸ್ ಡಯಟ್ ನ ಲಾಭಗಳು:
1. ಕೆಲವರು ರಿವರ್ಸ್ ಡಯಟ್ ಆರಂಭಿಸಲು ಕಾರಣ ದಿನವಿಡೀ ಆಹಾರ ಸೇವಿಸಬಹುದು. ಹಲವಾರು ವಾರಗಳು ಹಾಗೂ ತಿಂಗಳುಗಳ ಕಾಲ ಡಯಟ್ ನಲ್ಲಿ ಇದ್ದವರಿಗೆ ಇದು ನೆರವಾಗುವುದು. ಯಾಕೆಂದರೆ ಇದು ಆರೋಗ್ಯಕಾರಿ ಆಹಾರ ಕ್ರಮಕ್ಕೆ ಪ್ರೋತ್ಸಾಹಿಸುವುದು.

2. ಸಾಮಾನ್ಯ ಡಯಟ್ ನಿಂದಾಗಿ ಕೆಲವರಲ್ಲಿ ಮನಸ್ಥಿತಿ ಬದಲಾವಣೆ, ಏಕಾಗ್ರತೆ ಕೊರತೆ ಮತ್ತು ಶಕ್ತಿ ಮಟ್ಟವು ಕುಂದುವ ಸಮಸ್ಯೆ ಕಾಣಿಸುವುದು. ಕ್ಯಾಲರಿ ಕಡಿಮೆ ಸೇವನೆ ಅಥವಾ ಪೋಷಕಾಂಶಗಳ ಕೊರತೆಯಿಂದಾಗಿ ಹೀಗೆ ಆಗುವುದು. ಆದರೆ ರಿವರ್ಸ್ ಡಯಟ್ ಕ್ಯಾಲರಿ ಸೇವನೆ ನಿಧಾನವಾಗಿ ಹೆಚ್ಚು ಮಾಡಲಿದೆ. ಇದರಿಂದ ನಿರ್ಬಂಧಿತ ಡಯಟ್ ನಿಂದ ಆಗಿರುವ ಸಮಸ್ಯೆ ನಿವಾರಣೆ ಮಾಡುವುದು.

3. ಹಸಿವು ಮತ್ತು ಬಯಕೆಗೆ ಕಾರಣವಾಗುವಂತಹ ಕೆಲವೊಂದು ಹಾರ್ಮೋನ್ ಗಳ ಮೇಲೆ ಕ್ಯಾಲರಿ ನಿರ್ಬಂಧಿತ ಡಯಟ್ ನಿಂದ ಪರಿಣಾಮವಾಗುವುದು. 14 ಮಂದಿ ದೇಹದಾರ್ಢ್ಯ ಪಟುಗಳ ಮೇಲೆ ನಡೆಸಿರುವಂತಹ ಅಧ್ಯಯನದಲ್ಲಿ ಹತ್ತು ವಾರಗಳ ಕಾಲ ನಡೆಸಿದ ತೂಕ ಇಳಿಸುವ ಡಯಟ್ ವೇಳೆ ಶೇ.27.7 ಲೆಪ್ಟಿನ್ ಕಡಿಮೆ ಆಗಿದೆ ಮತ್ತು ಶೇ.26.4ರಷ್ಟು ಘ್ರೆಲಿನ್ ಹೆಚ್ಚಾಗಿದೆ ಎಂದು ಹೇಳಿದೆ. ಲೆಪ್ಟಿನ್ ಹೊಟ್ಟೆ ತುಂಬಿದಂತೆ ಮಾಡಿದರೆ, ಘ್ರೆಲಿನ್ ಹಸಿವಿನ ಭಾವನೆ ಉಂಟು ಮಾಡುವುದು. ಕ್ಯಾಲರಿ ಸೇವನೆ ನಿಧಾನವಾಗಿ ಹೆಚ್ಚಿಸಿದರೆ ಆಗ ಹಾರ್ಮೋನ್ ಮಟ್ಟವನ್ನು ಸಮತೋಲನದಲ್ಲಿ ಇಡಬಹುದು ಮತ್ತು ಹಸಿವಿನ ಮಟ್ಟ ತಗ್ಗಿಸಬಹುದು. ಆದರೆ ಯಾವುದೇ ಸಂಶೋಧನೆಗಳು ಇದನ್ನು ಸಾಬೀತು ಮಾಡಿಲ್ಲ.

Facebook Comments